ಮಂಗಳೂರು: ಸಿಂಚನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 15ನೇ ವರ್ಷದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಪ್ರಫುಲ್ಲಾ ಕಾಮತ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಫುಲ್ಲಾ ಕಾಮತ್ ಮಾತನಾಡಿ ವಾರ್ಷಿಕ ವರದಿ ಮಂಡಿಸಿ, ಸಹಕಾರಿಯ ಪ್ರಗತಿಗೆ ಸದಸ್ಯರ ಸಹಕಾರ ಕೋರಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಯು ಲೆಕ್ಕಪತ್ರ ಮಂಡಿಸಿದರು. ಸಂಘದ ನಿರ್ದೇಶಕರಾದ ಅನಿಲ್ ಕುಮಾರ್ ಅಂದಾಜು ಆಯವ್ಯಯ ಮಂಡಿಸಿದರು. ನಿರ್ದೇಶಕರಾದ ಗೌತಮ್ ಕಾಮತ್ ಮುಂದಿನ ವರ್ಷದ ಕಾರ್ಯಯೋಜನೆಗಳನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿ ಲೆಕ್ಕ ಪರಿಶೋಧಕರಾದ ಸಿಎ ಪಿ.ನರೇಂದ್ರ ಪೈ, ಸಹಕಾರಿಯ ನಿರ್ದೇಶಕರಾದ ಎಂ.ರಾಧಾಕೃಷ್ಣ ಕಾಮತ್, ಡಾ. ಜಯವಂತ ನಾಯಕ್, ಮೋಹನ್ ನಾಯಕ್, ಅನಿಲ್ ಕುಮಾರ್, ಗೌತಮ್ ಕಾಮತ್, ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ಭಾರತಿ ಭಟ್, ಸಹಕಾರಿಯ ಸಿಬ್ಬಂದಿಗಳು ಭಾಗವಹಿಸಿದ್ದರು. ಎಂ.ಆರ್ ಕಾಮತ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು, ಮೋಹನ್ ನಾಯಕ್ ಧನ್ಯವಾದ ಸಲ್ಲಿಸಿದರು.










