ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ (ನಿ) ಮಂಗಳೂರು ಇದರ 2025-26ನೇ ಸಾಲಿನ 32ನೇ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಅಧ್ಯಕ್ಷೆ ಭಾರತಿ ಜಿ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ವರ್ಷಾಂತ್ಯಕ್ಕೆ ಬ್ಯಾಂಕ್ ಒಟ್ಟು 182.51 ಲಕ್ಷ ಪಾಲು ಬಂಡವಾಳ, 304.90 ಲಕ್ಷ ಕ್ಷೇಮನಿಧಿ ಹಾಗೂ ಇತರ ನಿಧಿಗಳನ್ನು ಹೊಂದಿದೆ. ಬ್ಯಾಂಕ್ ಒಟ್ಟು 3617.34 ಲಕ್ಷ ಠೇವಣಿಯನ್ನು ಹೊಂದಿದ್ದು, ಸದಸ್ಯರಿಗೆ ವಿವಿಧ ಉದ್ದೇಶಗಳಿಗೆ ರೂ. 2212.21 ಲಕ್ಷ ಸಾಲ ನೀಡಲಾಗಿದೆ. ವರದಿ ವರ್ಷದಲ್ಲಿ ರೂ. 30,84,012.38 ಲಾಭ ಗಳಿಸಿದೆ. ಕೇಂದ್ರ ಸರ್ಕಾರದ ಕಾನೂನಿನಂತೆ ರೂ. 7,24,758.46ನ್ನು ಆದಾಯ ತೆರಿಗೆಗಾಗಿ ಕಾಯ್ದಿರಿಸಿ ರೂ. 23,59,253.92 ನಿವ್ವಳ ಲಾಭ ಗಳಿಸಿದ್ದು ಶೇ. 9 ಡಿವಿಡೆಂಡ್ ಘೋಷಿಸಲಾಯಿತು.

ಬ್ಯಾಂಕಿನ ಅಧ್ಯಕ್ಷೆ ಭಾರತಿ ಜಿ ಭಟ್ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಪ್ರತಿಭಾ ಶೆಟ್ಟಿ ಲಾಭ ವಿಂಗಡನೆ, ಲೆಕ್ಕ ಪರಿಶೋಧಿತ ಆರ್ಥಿಕ ತಖ್ತೆ ಹಾಗೂ ಬಜೆಟ್ ಅನ್ನು ಸಭೆಗೆ ನೀಡಿದರು.
ಬ್ಯಾಂಕಿನ ನಿರ್ದೇಶಕಿಯರಾದ ಸುಜೀತಾ ವಿ ಬಂಗೇರ, ಕೆ.ಪಿ ಪದ್ಮಾವತಿ, ಶೈಲಜಾ ವಿ.ಕರ್ಕೇರ, ಶಾರಿಕಾ ಟಿ. ರೈ, ಚಂದ್ರಾಕ್ಷಿ ಜೆ ರೈ, ಶಾಂತಾ ಪಿ ಭಟ್, ಸೌಮ್ಯತಾ ಬಿ.ಎಸ್, ಯಮುನಾ ಎ ಕಾವಾ, ಪ್ರಫುಲ್ಲ ಟಿ, ವೃತ್ತಿಪರ ನಿರ್ದೇಶಕಿಯರಾದ ಸಿಎ ವೃಂದಾ ಕೊನ್ನಾರ್ ಉಪಸ್ಥಿತರಿದ್ದರು. ಬ್ಯಾಂಕಿನ ನಿರ್ದೇಶಕಿ ಸುಜೀತಾ ವಿ ಬಂಗೇರ ವಂದಿಸಿದರು. ಸಿಎ ವೃಂದಾ ಕೊನ್ನಾರ್ ಕಾರ್ಯಕ್ರಮ ನಿರೂಪಿಸಿದರು.

ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com









