ವಿಜಯಪುರ: ದಿ ಬಿಜಾಪುರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ.ಯ 2025-26ನೇ ಸಾಲಿನ 33ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ಇಂಡಿ ರಸ್ತೆಯ ಮರ್ಚಂಟ್ ಅಸೋಸಿಯೇಶನ್ ಮಂಗಳ ಕಾರ್ಯಾಲಯದಲ್ಲಿ ನಡೆಯಿತು.
https://chat.whatsapp.com/FCEnlTkAKCC0MGPhXtX4i4
ಆರಂಭದಲ್ಲಿ 2025-26ನೇ ಸಾಲಿನಲ್ಲಿ ನಿಧನರಾದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಗುರುಶಾಂತ ಬಿ. ನಿಡೋಣಿ ಸ್ವಾಗತಿಸಿದರು. 2025-26ನೇ ಸಾಲಿನಲ್ಲಿ ಸಂಘವು ರೂ. 23.99 ಲಕ್ಷದಷ್ಟು ಠೇವಣಿ ಸಂಗ್ರಹಿಸಿದ್ದು, ವರದಿ ವರ್ಷದಲ್ಲಿ ರೂ. 18.79 ಲಕ್ಷದಷ್ಟು ಸಾಲ ವಿತರಿಸಿದೆ. ವರ್ಷಾಂತ್ಯಕ್ಕೆ ರೂ. 77.85 ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ 12% ಲಾಭಾಂಶ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಭೆಯಲ್ಲಿ ಪೂಜ್ಯ ಮಾತೋಶ್ರೀ ಯೋಗೇಶ್ವರಿ ಅಮ್ಮನವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಎಸ್. ಸಂಬಣ್ಣಿ, ವಿಜಯಪುರ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಕೃಷ್ಣೇಗೌಡ ಬಿ. ಪಾಟೀಲ, ಜಿಲ್ಲಾ ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮೌಸ್ತಿಯೊಳ, ಕಲಬುರಗಿಯ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರವೀಂದ್ರ ವಿ. ಪಾಟೀಲ, ವಚನ ಸಾಹಿತಿ ಶಂಕರ ಬೈಚಬಾಳ ಹಾಗೂ ಡಿ. ಎಸ್. ಪಾಟೀಲ ಅವರನ್ನು ಸನ್ಮಾನಿಸಲಾಯಿತು.


ಸಂಘದ ಉಪಾಧ್ಯಕ್ಷೆ ರೇಣುಕಾ ಗಂಜ್ಯಾಳ, ನಿರ್ದೇಶಕರಾದ ಸಿ. ಜಿ. ಪಾರಗೊಂಡ, ಪಿ. ಪಿ. ನ್ಯಾಮಗೌಡ, ಎಂ. ಸಿ. ಶಿರಕನಳ್ಳಿ, ಎಸ್. ಕೆ. ಜಂಗಮಶೆಟ್ಟಿ, ಎನ್. ಎಸ್. ಬೌಧರಿ, ವಿ. ಆರ್. ಕಪ್ಪೇರದ, ಪಿ. ಆರ್. ಸಾವಳಗಿ, ಆರ್. ಬಿ. ಪಾಟೀಲ, ಕೆ. ಎಲ್. ರಾಠೋಡ ಹಾಗೂ ಬಿ. ಡಿ. ವಾಲೀಕಾರ ಉಪಸ್ಥಿತರಿದ್ದರು. ಸಂಘದ ಸಲಹೆಗಾರ ಪ್ರಶಾಂತ ಆರ್. ಬ್ಯಾಕೋಡ ಅವರು 2025-26ನೇ ಸಾಲಿನ ಅಂದಾಜು ಪತ್ರಿಕೆಯನ್ನು ಸಭೆಗೆ ಮಂಡಿಸಿದರು. ಸಂಗಮೇಶ ಬದಾಮಿ ಹಾಗೂ ಬಸವರಾಜ ಸಾಹುಕಾರ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಅಶ್ವಿನಿ ಆರ್. ಪಾಟೀಲ ಮಾಹಿತಿ ನೀಡಿದರು. ನಿರ್ದೇಶಕ ವಿಜಯಕುಮಾರ ಕೃಷ್ಣಾಪುರ ವಂದನಾರ್ಪಣೆ ಸಲ್ಲಿಸಿದರು.










