ಮಂಗಳೂರು: ದೈವಜ್ಞ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್ ಮಂಗಳೂರು ಇದರ 2025-2026ನೇ ಸಾಲಿನ 34ನೇ ವಾರ್ಷಿಕ ಸಾಮಾನ್ಯ ಸಭೆಯು ಎಸ್. ರಮಾನಂದ್ ಶೇಟ್ ಇವರ ಅಧ್ಯಕ್ಷತೆಯಲ್ಲಿ ದೈವಜ್ಞ ಕಲ್ಯಾಣ ಮಂಟಪ, ಅಶೋಕ ನಗರಲ್ಲಿ ಭಾನುವಾರ ನೆರವೇರಿತು.
https://chat.whatsapp.com/FCEnlTkAKCC0MGPhXtX4i4
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಸಂತೋಷ್ ಶೇಟ್ ವಾರ್ಷಿಕ ವರದಿ ಮಂಡಿಸಿದರು. 2025-2026 ನೇ ಸಾಲಿನಲ್ಲಿ ಸಂಘವು 77.05 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡ 10 ಡಿವಿಡೆಂಡ್ ಘೋಷಿಸಲಾಯಿತು. ಸಂಘವು 64.94 ಲಕ್ಷ ರೂಪಾಯಿ ಪಾಲು ಬಂಡವಾಳ, 28.83 ಕೋಟಿ ರೂಪಾಯಿ ಠೇವಣಿ ಹೊಂದಿದ್ದು ಸದಸ್ಯರಿಗೆ 26.29 ಕೋಟಿ ರೂಪಾಯಿ ಸಾಲ ನೀಡಿದೆ. 2025- 2026ನೇ ಸಾಲಿನಲ್ಲಿ 200 ಕೋಟಿ ರೂಪಾಯಿ ವ್ಯವಹಾರ ನಡೆಸಿದೆ. ಸತತವಾಗಿ ‘ಎ’ ತರಗತಿಯ ಆಡಿಟ್ ವರ್ಗೀಕರಣ ಪಡೆಯುತ್ತ ಬಂದಿದೆ.
ಸಭೆಯಲ್ಲಿ 2025- 2026ನೇ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಸದಸ್ಯರ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಕೆ.ಸುಧಾಕರ್ ಶೇಟ್, ನಿರ್ದೇಶಕರಾದ ಪ್ರಮೋದ್ ಕೆ. ಶೇಟ್, ಬಿ. ಗುರುಪ್ರಸಾದ್ ಶೇಟ್, ಶ್ರೀಪಾದ ಬಿ. ರಾಯ್ಕರ್, ಬಿ. ಗಜೇಂದ್ರ ಶೇಟ್, ರಾಜೇಶ್ ಎಲ್.ವಿ, ಜಯ ಪಿ. ಶೇಟ್, ನೂತನ್ ಜಿ. ಶೇಟ್ ಉಪಸ್ಥಿತರಿದ್ದರು.











