ಕಾರ್ಕಳ: ವಿಶ್ವಕರ್ಮ ಸಹಕಾರ ಬ್ಯಾಂಕಿನ ಸ್ವರ್ಣ ಸಂಭ್ರಮ ಪ್ರಯುಕ್ತ ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘ ಕಾರ್ಕಳ ಸಹಯೋಗದೊಂದಿಗೆ ಡಾ.ಟಿ.ಎಂ.ಪೈ ರೋಟರಿ ಆಸ್ಪತ್ರೆ ಕಾರ್ಕಳ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
https://chat.whatsapp.com/FCEnlTkAKCC0MGPhXtX4i4
ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಪಿ.ಜಗದೀಶ್ ಆಚಾರ್ಯ, ನಿರ್ದೇಶಕರಾದ ಕೆ.ಹರೀಶ್ ಕುಮಾರ್, ಡಿ.ಭಾಸ್ಕರ ಆಚಾರ್, ಉದ್ಯಮಿಗಳಾದ ಕಮಲಾಕ್ಷ ನಾಯಕ್ ಕಾರ್ಕಳ, ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘ ಕಾರ್ಕಳ ಇದರ ಅಧ್ಯಕ್ಷರಾದ ಎಂ.ರಮೇಶ್ ಆಚಾರ್, ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನ ಕಾರ್ಕಳ ಇದರ ಆಡಳಿತ ಮೊಕ್ತೇಸರರಾದ ಪಿ.ರವಿ ಆಚಾರ್, ಟಿ.ಎಂ.ಎ.ಪೈ ಇದರ ವೈದ್ಯಾಧಿಕಾರಿ ನಿಖಿತಾ ಕಾಳಿಕಾಂಬಾ ಮಹಿಳಾ ಸೇವಾ ಸಮಿತಿ ಕಾರ್ಕಳ ಇದರ ಅಧ್ಯಕ್ಷರಾದ ಕವಿತಾ ಹರೀಶ್ ಉಪಸ್ಥಿತರಿದ್ದರು. ಬ್ಯಾಂಕಿನ ಗ್ರಾಹಕರು ಹಾಗೂ ಸಾರ್ವಜನಿಕರು ಈ ಶಿಬಿರದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಂಡರು.


