ಮಂಗಳೂರು: ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸ್ಥಾಪನಾ ದಿನಚಾರಣೆ ಅಂಗವಾಗಿ ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಸಹಯೋಗದೊಂದಿಗೆ ನವೆಂಬರ್ 7ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರ ತನಕ ಉಚಿತ ವೈದ್ಯಕೀಯ ಶಿಬಿರ ಆಯೋಜಿಸಲಾಗಿದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಶಿಬಿರವು ಹಂಪನಕಟ್ಟೆಯ ಮಿನಿ ವಿಧಾನಸೌಧದ ಸಮೀಪದ ಎನ್‌ಜಿಒ ಕಟ್ಟಡದ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಪ್ರಧಾನ ಕಚೇರಿಯ ನೇತ್ರಾವತಿ ಸಭಾಂಗಣದಲ್ಲಿ ನಡೆಯಲಿದೆ. ಮಧ್ಯಾಹ್ನ 12.30ರ ತನಕ ನೋಂದಣಿ ನಡೆಯಲಿದೆ. ಸಾಮಾನ್ಯ ರೋಗ ವಿಭಾಗ, ಕಣ್ಣಿನ ವಿಭಾಗ, ಕಿವಿ, ಮೂಗು ಮತ್ತು ಗಂಟಲು ವಿಭಾಗ, ಎಲುಬುಮತ್ತು ಕೀಲುರೋಗ ವಿಭಾಗಗಳಲ್ಲಿ ತಪಾಸಣೆ ನಡೆಯಲಿದೆ. ಬಿಪಿ, ಮಧುಮೇಹ ಉಚಿತ ತಪಾಸಣೆ ನಡೆಯಲಿದ್ದು, ಅಗತ್ಯ ಇದ್ದವರಿಗೆ ವೈದ್ಯರ ಸೂಚನೆಯ ಮೇರೆಗೆ ಉಚಿತ ಇಸಿಜಿ ತಪಾಸಣೆ ಕೂಡ ಮಾಡಲಾಗುವುದು. ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಕನ್ನಡಕ ಉಚಿತ ವಿತರಣೆ ಮಾಡಲಾಗುವುದು.
ಶಿಬಿರದಲ್ಲಿ ತಪಾಸಣೆ ಉಚಿತವಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಕೆಎಂಸಿ ಆಸ್ಪತ್ರೆಯ ಹಸಿರು ಕಾರ್ಡು ನೀಡಲಾಗುವುದು. ಈ ಹಸಿರು ಕಾರ್ಡು ಮೂಲಕ ಒಳರೋಗಿಯಾಗಿ ದಾಖಲಾದಲ್ಲಿ ಶಸ್ತ್ರಚಿಕಿತ್ಸೆಗೆ ಗರಿಷ್ಠ 10,000 ಮತ್ತು ಇತರ ಚಿಕಿತ್ಸೆಗೆ 5,000 ರೂ. ತನಕ ಆಸ್ಪತ್ರೆಯ ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಈ ಶಿಬಿರದಲ್ಲಿ ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಇವರಿಂದ ಅಪಘಾತ ಮತ್ತು ಆರೋಗ್ಯ ವಿಮೆ ಮಾಡಲಾಗುವುದು (ಗರಿಷ್ಠ ಮಿತಿ 15 ಲಕ್ಷ).
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 0824-2440996, 7204780145.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


