ಪುತ್ತೂರು: ಅತೀ ಹೆಚ್ಚು ಅಡಕೆ ಖರೀದಿ ಮಾಡಿದ ಸಾಧನೆಗಾಗಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮಂಗಳೂರಿನ ಬೈಕಂಪಾಡಿಯಲ್ಲಿ ಕೆ.ಸೀತಾರಾಮ ರೈ ಸವಣೂರು ಇವರ ಅಧ್ಯಕ್ಷತೆಯಲ್ಲಿ ಜರುಗಿದ ಮಾಸ್ ಲಿಮಿಟೆಡ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಗೌರವಾರ್ಪಣೆ ಮಾಡಲಾಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಸವಣೂರು ಮಾಸ್ ಅಡಕೆ ಖರೀದಿ ಕೇಂದ್ರಕ್ಕೆ ಅಡಕೆ ಮಾರಾಟ ಮಾಡಿ ಈ ಸಾಧನೆಗೆ ಕಾರಣಕರ್ತರಾಗಿರುವ ಅಡಕೆ ಬೆಳೆಗಾರರ ಪರವಾಗಿ ಸಂಘದ ಅಧ್ಯಕ್ಷರಾದ ತಾರಾನಾಥ ಕಾಯರ್ಗ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಗೌರವಾರ್ಪಣೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚೇತನ್ ಕೋಡಿಬೈಲು, ನಿರ್ದೇಶಕ ಅಶ್ವಿನ್ ಎಲ್ ಶೆಟ್ಟಿ, ಸವಣೂರು ಮಾಸ್ ಶಾಖೆ ಅಡಕೆ ಖರೀದಿ ಕೇಂದ್ರದ ಶಾಖಾಧಿಕಾರಿ ಯತೀಶ್ ಉಪಸ್ಥಿತರಿದ್ದರು.

