ಮಂಗಳೂರು: ನಗರದ ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕಿನ 101ನೇ ವಾರ್ಷಿಕ ಸಾಮಾನ್ಯ ಸಭೆಯು ಬ್ಯಾಂಕಿನ ಅಧ್ಯಕ್ಷರಾದ ಚಂದ್ರಶೇಖರ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಶ್ರೀ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆಯಿತು.
ಬ್ಯಾಂಕಿನ ಸ್ಥಿರಾಸ್ತಿ ಮೌಲ್ಯಮಾಪಕ ಅಶೋಕ್ ಕುಮಾರ್, ಆತ್ಮಶಕ್ತಿ ಪತ್ರಿಕೆಯ ಸಂಪಾದಕ ವಾಮನ್ ಕುದ್ರೋಳಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಮಾಜಿ ಸಿಬ್ಬಂದಿ ಅಶೋಕ್, ಕರ್ಣಾಟಕ ಬ್ಯಾಂಕಿನ ಮಾಜಿ ಸಿಬ್ಬಂದಿ ದಿನೇಶ್ ಅಂಚನ್ ಹಾಗೂ ಬ್ಯಾಂಕಿನ ಸದಸ್ಯರಾದ ಸಂಧ್ಯಾಲತಾ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. 

https://chat.whatsapp.com/JVAtKKe2M19AFO3W5629ZS?mode=ems_copy_t
ಬ್ಯಾಂಕ್ 2024-25ನೇ ಸಾಲಿನಲ್ಲಿ 211.55 ಲಕ್ಷ ರೂ. ನಿರ್ವಹಣಾ ಲಾಭ ಹಾಗೂ 95.50 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನಲ್ಲಿ ಒಟ್ಟು 23,498 ಮಂದಿ ಪಾಲುದಾರ ಸದಸ್ಯರಿದ್ದು, 900.92 ಲಕ್ಷ ರೂ. ಪಾಲು ಬಂಡವಾಳ ಮತ್ತು 18,508.78 ಲಕ್ಷ ರೂ. ಠೇವಣಿಯಿದ್ದು ದುಡಿಯುವ ಬಂಡವಾಳ 21,394.06 ಲಕ್ಷ ರೂ. ಇರುತ್ತದೆ. ಈ ಕುರಿತ ಸಂಪೂರ್ಣ ವರದಿಯನ್ನು ಬ್ಯಾಂಕಿನ ಪ್ರಭಾರ ಜನರಲ್ ಮ್ಯಾನೇಜರ್ ವಿಜಯಾ ಮಂಗಳನಾಥ ಕೋಟ್ಯಾನ್ ಅವರು ಮಂಡಿಸಿದರು. ಸರ್ವ ಸದಸ್ಯರು ಸರ್ವಾನುಮತದಿಂದ ಇದನ್ನು ಅನುಮೋದಿಸಿದರು.
ಬ್ಯಾಂಕಿನಲ್ಲಿ ಗ್ರಾಹಕರಿಗೆ ಪರಿಚಯಿಸಲಾದ ಇತರ ಸೌಲಭ್ಯಗಳಾದ ಆರ್‌ಟಿಜಿಎಸ್/ನೆಫ್ಟ್, ಎನ್ಎಸಿಎಚ್, ಅಂತರ್‌ಶಾಖಾ ಹಣ ವರ್ಗಾವಣೆ, ಸೇಫ್ ಲಾಕರ್, ಮೊಬೈಲ್ ಬ್ಯಾಂಕಿಂಗ್, ಎಸ್.ಎಂ.ಎಸ್. ಸೌಲಭ್ಯ, ರೂಪೇ ಡೆಬಿಟ್ ಕಾರ್ಡ್, ಪಿಒಎಸ್, ಇಕಾಮ್, ಯುಪಿಐ, ಕ್ಯೂ ಆರ್ ಕೋಡ್, ಐಎಂಪಿಎಸ್ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಲಾಯಿತು.

ನಿರ್ದೇಶಕರಾದ ಜಯರಾಮ್ ಕಾರಂದೂರು, ಯೋಗೀಶ್ ಕೋಟ್ಯಾನ್, ಹರೀಶ್ ಪೂಜಾರಿ ಕೆ., ಕುಪ್ಪ ಪೂಜಾರಿ, ರಾಜೇಶ್ ಕುಮಾರ್ ಜಿ.ಸುವರ್ಣ, ಗಾಯತ್ರಿ ಗಣೇಶ್, ಚಂದ್ರಾವತಿ, ನಾಗರಾಜ, ಜಗದೀಶ್ ಎನ್., ಅನಿಲ್ ಕುಮಾರ್, ಪ್ರಕಾಶ್, ಕೆ.ರಮೇಶ್ ಬಂಗೇರ, ಕೇಶವ ಬಿ., ಶಂಕರ ನಾಯ್ಕ, ಆಶಾಲತಾ, ವರದರಾಜ್ ಎ., ಶ್ರವಣ್ ಕುಮಾರ್ ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ರಾಜಾರಾಮ್ ಬಿ.ಅಂಚನ್, ಜಯಾನಂದ ಎಮ್. ಮತ್ತು ದೀಪಕ್ ಎಂ.ಕೋಟ್ಯಾನ್ ಉಪಸ್ಥಿತರಿದ್ದರು. ಬ್ಯಾಂಕಿನ ಅಕೌಂಟೆಂಟ್ ಹರೀಶ್ ಕೊಡವೂರು ಸಹಕರಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಜಯರಾಮ್ ಪೂಜಾರಿ ವಂದಿಸಿದರು.

