ಮಂಗಳೂರು: ಮಂಗಳೂರಿನ ಬಿಜೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಶ್ರೀ ಮಂಗಳಾಜ್ಯೋತಿ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತದ 30ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸಂಘದ ಅಧ್ಯಕ್ಷರಾದ ರಾಜೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ಪೊಲೀಸ್ ಲೇನ್ ನಾಸಿಕ್ ಬಿ.ಹೆಚ್. ಬಂಗೇರ ಸಭಾಭವನದಲ್ಲಿ ನಡೆಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಅಧ್ಯಕ್ಷೀಯ ಭಾಷಣ ಮಾಡಿದ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರು, 2024-25ರಲ್ಲಿ ಠೇವಣಿ ಸಂಗ್ರಹಣೆಯಲ್ಲಿ ಶೇಖಡಾ 17 ಮತ್ತು ಸಾಲ ನೀಡುವಿಕೆಯಲ್ಲಿ ಶೇಖಡಾ 28 ಹೆಚ್ಚುವರಿ ದಾಖಲಾಗಿದ್ದು, ಒಟ್ಟು 1.20 ಕೋಟಿ ರೂ. ಷೇರು ಬಂಡವಾಳವನ್ನು ಹೊಂದಿದೆ. 129 ಕೋಟಿ ರೂಪಾಯಿಗಳ ವ್ಯವಹಾರ ಮಾಡಿದ್ದು, ರೂ. 42,81,085.96 ನಿವ್ವಳ ಲಾಭ ಗಳಿಸಿದೆ. ಲೆಕ್ಕ ಪರಿಶೋಧನೆಯಲ್ಲಿ ‘ಎ’ ಶ್ರೇಣಿಯಲ್ಲಿದೆ ಎಂದು ತಿಳಿಸಿದರು. ಕಾರ್ಯದರ್ಶಿ ಉದಯ ಆರ್ ಸಂಘದ ವಾರ್ಷಿಕ ವರದಿ, ಲೆಕ್ಕಪತ್ರಗಳು ಮತ್ತು ಅನುಪಾಲನಾ ವರದಿಯನ್ನು ಸಭೆಗೆ ಮಂಡಿಸಿದರು.

ವಿಶೇಷ ಅಭಿನಂದನಾ ಕಾರ್ಯಕ್ರಮ
ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಆಗಿ ಕೆಲಸ ನಿರ್ವಹಿಸಿದ್ದ ಹಾಗೂ ತನ್ನ ವಿಶೇಷ ಸಮಾಜಸೇವೆಯ ಮೂಲಕ ಸಾವಿರಾರು ಅನಾಥ ಮೃತದೇಹಗಳಿಗೆ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಲ್ಲದೆ, ಕೋವಿಡ್ ಸಮಯದಲ್ಲಿ ನಿಸ್ವಾರ್ಥ ಸಮಾಜಸೇವೆ ಸಲ್ಲಿಸಿದ್ದ ಉರ್ವ ನಿವಾಸಿ ಗಣೇಶ್ ಕುಲಾಲ್ ಇವರಿಗೆ ಸರ್ವ ಸದಸ್ಯರ ಸಮ್ಮುಖದಲ್ಲಿ ಗೌರವದ ಅಭಿನಂದನೆ ಸಲ್ಲಿಸಲಾಯಿತು.





ವಿದ್ಯಾ ಪ್ರೋತ್ಸಾಹ ಧನ, ಆರ್ಥಿಕ ನೆರವು ವಿತರಣೆ:
ಸಂಘದಲ್ಲಿ ಅತೀ ಹೆಚ್ಚು ಪಿಗ್ಮಿ ಸಂಗ್ರಹ ಮಾಡಿದ ಪಿಗ್ಮಿ ಸಂಗ್ರಾಹಕರನ್ನು ಹಾಗೂ 10 ವರ್ಷಗಳ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಘದ ವತಿಯಿಂದ ಸದಸ್ಯರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾ ಪ್ರೋತ್ಸಾಹ ಧನ ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಯ ವೈದ್ಯಕೀಯ ಚಿಕಿತ್ಸೆಗಾಗಿ ಧನಸಹಾಯ ನೀಡಲಾಯಿತು.
ನಿರ್ದೇಶಕರಾದ ಭೋಜ ಯು.ಮೂಲ್ಯ ಸ್ವಾಗತಿಸಿದರು. ಜೀವನ್ ಕುಮಾರ್ ವಂದಿಸಿದರು. ಸಂಘದ ಉಪಾಧ್ಯಕ್ಷರಾದ ಭೋಜ ಎಸ್.ಕುಲಾಲ್, ನಿರ್ದೇಶಕರಾದ ವಿಶ್ವನಾಥ ಬಂಗೇರ, ಮೋಹನ್‌ದಾಸ್ ಬಿ., ಸುರೇಶ್ ಕೆ.ಕುಲಾಲ್, ಶಕುಂತಳಾ ಬಿ., ಪ್ರಮೀಳಾ ಎ ಸಾಲ್ಯಾನ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com









