ಬೆಂಗಳೂರು: ಬನವಾಸಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಬೆಂಗಳೂರು ಇದರ ಆರನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಬೆಂಗಳೂರಿನ ರಾಜಾಜಿನಗರದ ಮಹಾಗಣಪತಿನಗರದ ಬನವಾಸಿ ಸಭಾಂಗಣದಲ್ಲಿ ನಡೆಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಅಕ್ಕಿಯವರು ಮಾತನಾಡಿ ಸಹಕಾರಿಯು ಒಟ್ಟು 1733 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ರೂ.24,83,260.11 ನಿವ್ವಳ ಲಾಭ ದಾಖಲಿಸಿದೆ. ಪ್ರಸಕ್ತ ಸಾಲಿನಲ್ಲಿ 14% ಡಿವಿಡೆಂಡ್ ಹಂಚಿಕೆ ಮಾಡಲಾಗುತ್ತಿದೆ. ಬನವಾಸಿ ಸೌಹಾರ್ದ ಸಹಕಾರಿ ಸಂಘವು 2020ರಲ್ಲಿ ಆರಂಭಗೊಂಡು ಪಾರದರ್ಶಕ ಆಡಳಿತ ನಡೆಸುತ್ತ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ವಾರ್ಷಿಕ ಮಹಾಸಭೆಯಲ್ಲಿ ಬನವಾಸಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಮಂಜುನಾಥ.ಎನ್, ಸಂಜೀವ ಕುಮಾರ್, ನಾರಾಯಣ ಸ್ವಾಮಿ ಹೆಚ್, ಬಾಬು ಎಸ್ ಕುಂಬಾರ್, ಅನಿಲ್ ಕುಮಾರ್ ಬಿ.ಉಲ್ಲಾಳ, ಡಿ.ಎಂ.ಭತ್ತದ್, ಭೀಮಪ್ಪ, ಮೇಘ ವರುಣ್, ರೂಪಶ್ರೀ, ತುಳಸಿರಾಮ್ ಮೌರ್ಯ, ಶೋಭರಾಣಿ ಎಂ, ಜಮುನ ಕುಲಕರ್ಣಿ, ದ್ಯಾಮಪ್ಪ ಎಚ್.ಎಂ ಮತ್ತು ಆಡಳಿತಾಧಿಕಾರಿಗಳಾದ ಶಂಬಯ್ಯ.ಕೆ.ಎಲ್ ಹಾಗೂ ಸಹಕಾರಿಯ ಸಿಬ್ಬಂದಿ ವರ್ಗದವರು, ಸದಸ್ಯರುಗಳು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com










