ಮಂಗಳೂರು: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಸಕ್ತ ಸಾಲಿನಲ್ಲಿ 16.01 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಕಳೆದ ವರ್ಷ ರೂ.12.01 ಕೋಟಿ ರೂ. ಲಾಭ ಗಳಿಸಿದ್ದು, ಈ ಬಾರಿ 4 ಕೋಟಿ ರೂ. ಲಾಭ ಹೆಚ್ಚಳದೊಂದಿಗೆ ಶೇ.31 ಏರಿಕೆಯಾಗಿದೆ. ಇದು ಸಂಘದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಎಂದು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪೇರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ತಿಳಿಸಿದ್ದಾರೆ. ಸಂಘದ ಅನುತ್ಪಾದಕ ಆಸ್ತಿ 24 ಲಕ್ಷ ರೂ. ಇದ್ದು ಇದು ಹೊರಬಾಕಿ ಸಾಲದ ಶೇ.0.05ಕ್ಕೆ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ.
https://chat.whatsapp.com/EbVKVnWB6rlHT1mWtsgbch
2020ನೇ ಸಾಲಿನಲ್ಲಿ ಜೈರಾಜ್ ಬಿ.ರೈ ಅವರು 2ನೇ ಬಾರಿ ಅಧ್ಯಕ್ಷರಾಗಿ ನೇತೃತ್ವ ವಹಿಸಿಕೊಂಡ ಸಂದರ್ಭ ಹಮ್ಮಿಕೊಂಡ ವಿಷನ್-2025ರಂತೆ ಮಾರ್ಚ್ 2025ಕ್ಕೆ ಸಂಘದ ಒಟ್ಟು ವ್ಯವಹಾರ ರೂ.1000 ಕೋಟಿ, 5 ಹೊಸ ಶಾಖೆಗಳೊಂದಿಗೆ 30 ಶಾಖೆಗಳನ್ನು ಹೊಂದುವುದು, ರೂ.10 ಕೋಟಿ ಲಾಭ, ಅನುತ್ಪಾದಕ ಆಸ್ತಿಯನ್ನು ಶೇ.10ಕ್ಕೆ ಸೀಮಿತಗೊಳಿಸುವುದು ಎಂಬ ಗುರಿಗಳನ್ನು ನಿಗದಿತ ಅವಧಿಗಿಂತ ಮೊದಲೇ ತಲುಪಲಾಗಿದೆ.1000 ಕೋಟಿ ರೂ. ಗೆ ಮೀರಿದ ಒಟ್ಟು ವ್ಯವಹಾರ ದಾಟಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೊದಲ ಕ್ರೆಡಿಟ್ ಸಹಕಾರ ಸಂಘ ಎಂಬ ದಾಖಲೆ ರಾಮಕೃಷ್ಣ ಸೊಸೈಟಿಯದು.1094 ಕೋಟಿ ರೂ. ಗಳ ಒಟ್ಟು ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ.
25 ಶಾಖೆಗಳ ಮುಖಾಂತರ 1,27,971 ಠೇವಣಿ ಖಾತೆಗಳಲ್ಲಿ ಒಟ್ಟು 589 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು ಮಾರ್ಚ್ ಅಂತ್ಯಕ್ಕೆ ಸಂಘದ ಹೊರಬಾಕಿ ಸಾಲವು ರೂ.505 ಕೋಟಿ ರೂ. ಮೀರಿದೆ. 1643 ಖಾತೆಗಳಲ್ಲಿ ರೂ. 34 ಕೋಟಿ ಆಟೋರಿಕ್ಷಾ ಸಾಲ, 521 ಯುವ ಜನತೆಗೆ ದ್ವಿಚಕ್ರ ಸಾಲ 3.98 ಕೋಟಿ ರೂ., ಚಿನ್ನಾಭರಣ ಸಾಲ, ಗೃಹ ಸಾಲ, ಇತರ ವಾಹನ ಸಾಲ, ಅಡವು ಸಾಲ ಮುಂತಾದ ಸೌಲಭ್ಯ ನೀಡಲಾಗುತ್ತಿದೆ ಎಂದು ಜೈರಾಜ್ ರೈ ತಿಳಿಸಿದ್ದಾರೆ.
ವಿಷನ್ -2030ರಂತೆ 2030ರ ಮಾರ್ಚ್ ಗೆ 2,000 ಕೋಟಿ ರೂ. ಒಟ್ಟು ವ್ಯವಹಾರ, ಅನುತ್ಪಾದಕ ಆಸ್ತಿಯನ್ನು ಶೇ.0.10ರೊಳಗೆ ಸೀಮಿತಗೊಳಿಸುವುದು, 20 ಕೋಟಿ ರೂ. ನಿವ್ವಳ ಲಾಭ, ಶಾಖೆಗಳ ಸಂಖ್ಯೆ 40ಕ್ಕೆ ಏರಿಕೆ, ಸದಸ್ಯರಿಗೆ ಶೇ.25ರಷ್ಟು ಡಿವಿಡೆಂಡ್ ನೀಡುವ ಯೋಜನೆ ಹೊಂದಲಾಗಿದೆ. ಮಂಗಳೂರಿನ ಕೇಂದ್ರ ಕಚೇರಿಯ ಹೊಸ ಕಟ್ಟಡದ ಕೆಲಸ ಪ್ರಗತಿಯಲ್ಲಿದ್ದು ಸೆಪ್ಟೆಂಬರ್‌ಗೆ ಲೋಕಾರ್ಪಣೆಗೊಳಿಸುವುದಾಗಿ ಅವರು ತಿಳಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com