ಪುತ್ತೂರು: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ದರ್ಬೆ ಪುತ್ತೂರು ಇದರ ಪೂರಕ ಸಂಸ್ಥೆ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬುಧವಾರ “ವೃತ್ತಿ ಬದುಕು ಹೇಗಿರಬೇಕು? ಉದ್ಯೋಗಸ್ಥರಿಗೊಂದು ಮಾರ್ಗದರ್ಶಿʼʼ ಕೃತಿ ಲೋಕಾರ್ಪಣೆಗೊಂಡಿತು.
https://chat.whatsapp.com/EbVKVnWB6rlHT1mWtsgbch
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಪುತ್ತೂರು ವಿವೇಕಾನಂದ ಕಾಲೇಜು(ಸ್ವಾಯತ್ತ) ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ, ಸರಸ್ವತಿ ಸಹಕಾರಿಯ ಸೇವಾಕಾರ್ಯಗಳು ಶ್ಲಾಘನೀಯ ಎಂದು ಹೇಳಿದರು. ಲೋಕಾರ್ಪಣೆಗೊಂಡ ಕೃತಿಯ ಕುರಿತು ಮಾತನಾಡಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಕೃತಿಯು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದ್ದು ಲೇಖಕರು ವೃತ್ತಿ ಬದುಕಿನ ಪ್ರತಿಯೊಂದು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾ ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದರು.
ಕೃತಿಯ ಲೇಖಕ, ರಾಜ್ಯ-ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ನಾರಾಯಣ ಭಟ್ ಟಿ.ರಾಮಕುಂಜ ಮಾತನಾಡಿ ಓದುಗರು ಕೃತಿ ಓದಿ ಅದನ್ನು ಅನುಷ್ಠಾನಗೊಳಿಸಿಕೊಂಡರೆ ಸಾರ್ಥಕ್ಯ ನೀಡುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ಶ್ರೀ ಸರಸ್ವತಿ ಸಹಕಾರಿಯ ಪ್ರಥಮ ಶಾಖೆ ದರ್ಬೆಯು 100 ಕೋಟಿ ವ್ಯವಹಾರ ದಾಖಲಿಸಿದ ಪ್ರಯುಕ್ತ ಶತಕೋಟಿ ಸಂಭ್ರಮ ಕಾರ್ಯಕ್ರಮವೂ ನಡೆಯಿತು. ಈ ಪ್ರಯುಕ್ತ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರಿನ ಬಿರುಮಲೆಯಲ್ಲಿರುವ ಪ್ರಜ್ಞಾ ಆಶ್ರಮವಾಸಿಗಳಿಗೆ ಉಪಾಹಾರದ ವ್ಯವಸ್ಥೆ ಹಾಗೂ ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಆನಂದಾಶ್ರಮವಾಸಿಗಳಿಗೆ ಒಂದು ದಿನದ ಪ್ರಾಯೋಜಕತ್ವ ನೀಡಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಸರಸ್ವತಿ ಸಹಕಾರಿಯ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಸರಸ್ವತಿ ಸಹಕಾರಿ ನಡೆದುಬಂದ ಹಾದಿಯನ್ನು ಸ್ಮರಿಸಿದರು. ಶ್ರೀ ಸರಸ್ವತಿ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಎ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸಹಕಾರಿಯ ಎಂ.ಎಸ್ ರಸ್ತೆ ಶಾಖೆಯ ಸಿಬ್ಬಂದಿ ಸುಷ್ಮಾ ಪ್ರಾರ್ಥಿಸಿದರು, ದರ್ಬೆ ಶಾಖೆಯ ಹಿರಿಯ ವ್ಯವಸ್ಥಾಪಕ ದೇವಿಪ್ರಸಾದ್ ಎ ವಂದಿಸಿದರು. ಆಡಳಿತ ಕಚೇರಿಯ ಸಿಬ್ಬಂದಿ ಬಿಪಿನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com