ಸತತ ಐದನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದ ಡಾ.ವಾಣಿಶ್ರೀ ವಿಶ್ವನಾಥ್ ನೇತೃತ್ವದ ಬಳಗ
ಬೆಂಗಳೂರು: ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಮುಂದಿನ ಐದು ವರ್ಷಗಳ ಅವಧಿಗೆ ಡಾ.ವಾಣಿಶ್ರೀ ವಿಶ್ವನಾಥ್ ಸತತ ಐದನೇ ಬಾರಿ ಆಯ್ಕೆಯಾಗಿದ್ದಾರೆ.
2025-30ರ ಅವಧಿಗೆ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಡಾ.ವಾಣಿಶ್ರೀ ವಿಶ್ವನಾಥ್ ನೇತೃತ್ವದ 12 ಹಾಲಿ ನಿರ್ದೇಶಕರ ತಂಡ ಅವಿರೋಧವಾಗಿ ಆಯ್ಕೆಯಾಗಿತ್ತು. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ಮತ್ತು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಇದರಲ್ಲಿ ಡಾ.ವಾಣಿಶ್ರೀ ವಿಶ್ವನಾಥ್ ಅವರ ನೇತೃತ್ವದ 12 ಜನ ಹಾಲಿ ನಿರ್ದೇಶಕರ ತಂಡ ಅವಿರೋಧವಾಗಿ ಆಯ್ಕೆಯಾಗಿದ್ದು, ಬುಧವಾರ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಡಾ.ವಾಣಿಶ್ರೀ ವಿಶ್ವನಾಥ್ ಅಧ್ಯಕ್ಷರಾಗಿ 5ನೇ ಬಾರಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.
https://chat.whatsapp.com/EbVKVnWB6rlHT1mWtsgbch
ನೂತನ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್ ಮಾತನಾಡಿ ‘ಸತತ ಐದನೇ ಬಾರಿ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅಪೂರ್ವ ಕ್ಷಣ. ಸಹಕಾರ ಸಂಘದ ಎಲ್ಲಾ 12 ನಿರ್ದೇಶಕರನ್ನು ಅವಿರೋಧವಾಗಿ ಪುನರಾಯ್ಕೆ ಮಾಡಿರುವುದು, ಅದೇ ರೀತಿ ಸತತ ಐದನೇ ಬಾರಿ ಸಹಕಾರ ಸಂಘದ ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿರುವ ಮುಖಂಡರು, ಮತದಾರರು, ಸಹಕಾರ ಸಂಘದ ಸದಸ್ಯರಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.
ಸಹಕಾರ ಸಂಘದಲ್ಲಿ ಏಳು ಸಾವಿರಕ್ಕೂ ಹೆಚ್ಚು ಷೇರುದಾರರಿದ್ದು, ವಾರ್ಷಿಕ 1,200 ಕೋಟಿ ರೂ.ಗಳಷ್ಟು ವಹಿವಾಟು ನಡೆಯುತ್ತದೆ. ಸುಮಾರು 300 ಕೋಟಿ ರೂ.ಗಳಷ್ಟು ಠೇವಣಿ ಹೊಂದಿರುವ ನಮ್ಮ ಸಂಘ ಕಳೆದ ವರ್ಷ 6 ಕೋಟಿ ರೂ.ಗಳಷ್ಟು ಲಾಭ ಗಳಿಸಿತ್ತು. ಮುಂದಿನ ಆರ್ಥಿಕ ವರ್ಷದಲ್ಲಿ 8 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆಯಿದೆ. ಸಹಕಾರ ಸಂಘದ ವತಿಯಿಂದ 12 ಸಾವಿರ ಜನರಿಗೆ ಉಚಿತ ಪಡಿತರ ಧಾನ್ಯ ವಿತರಿಸಲಾಗುತ್ತಿದ್ದು, ಇದನ್ನು ಇನ್ನೂ ಹೆಚ್ಚಿಸಬೇಕೆಂಬ ಇಂಗಿತವಿದೆ. ಸಹಕಾರ ಸಂಘದ ವತಿಯಿಂದ ಹೆಚ್ಚಿನ ರೈತರು, ಆರ್ಥಿಕವಾಗಿ ದುರ್ಬಲರಿರುವ ಕಾರ್ಮಿಕರು, ವಿಶೇಷವಾಗಿ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ದಿಸೆಯಲ್ಲಿ ಸಹಕಾರ ಸಂಘ ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಶಾಸಕ ಎಸ್.ಆರ್ ವಿಶ್ವನಾಥ್ ಸಹಕಾರ ಸಂಘದ ನೂತನ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ಅಭಿನಂದಿಸಿದರು. ಯುವ ಮುಖಂಡರಾದ ಅಲೋಕ್ ವಿಶ್ವನಾಥ್, ಎಸ್.ಎನ್ ರಾಜಣ್ಣ, ದಿಬ್ಬೂರು ಜಯಣ್ಣ, ಡಿ.ಜಿ.ಅಪ್ಪಯ್ಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಸತೀಶ್ ಕಡತನಮಲೆ, ವಿ.ಪವನ್ ಕುಮಾರ್, ಈಶ್ವರ್, ಸೋಮಶೇಖರ್, ಶಿವಮಾದು, ಎಚ್.ಸಿ.ರಾಜೇಶ್, ಪಿ.ಕೆ.ರಾಜಣ್ಣ, ಶ್ರೀನಿವಾಸಯ್ಯ, ಲಿಂಗನಹಳ್ಳಿ ವೆಂಕಟೇಶ್, ಜಗದೀಶ್, ವಿ.ವಿ.ರಾಮಮೂರ್ತಿ, ನರಸಿಂಹಮೂರ್ತಿ, ನಾರಾಯಣ ಸ್ವಾಮಿ, ರಾಜಣ್ಣ, ಟಿ.ಮುನಿರೆಡ್ಡಿ, ವಸಂತ್ ಅರಕೆರೆ, ಎಸ್.ಜಿ ಪ್ರಶಾಂತ್ ರೆಡ್ಡಿ, ಕಿರಣ್, ಲಕ್ಷ್ಮೀಪತಿ ಗೌಡ, ಮುನಿದಾಸಪ್ಪ, ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮರಾವತಮ್ಮ, ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ನಿರ್ದೇಶಕರಾದ ಎ.ತಿಮ್ಮರಾಯಿಗೌಡ, ಕೆ.ಆರ್.ಪುಟ್ಟರಾಜು, ಎಂ.ಮಂಜುನಾಥ್, ಎನ್.ಶಿವಕುಮಾರ್, ಎಂ.ಪಿ.ಈಶ್ವರಾಚಾರ್, ಎಸ್.ಎನ್ ರಾಮಚಂದ್ರಾ ರೆಡ್ಡಿ, ಪುಷ್ಪಲತಾ ಚಂದ್ರಶೇಖರ್, ಎನ್.ಮುನಿಯಪ್ಪ ಕೂರ್ಲಪ್ಪ, ವೈ.ಕೆ.ಮುರಾರಿ ರಾಮು, ಎನ್.ಎ.ಚಂದ್ರು, ಅಮರಾವತಿ, ಸಹಕಾರ ಸಂಘದ ಸಿಇಒ ಶಶಿಧರ್ ಮೊದಲಾದವರು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com