ಗುರುಪುರ: ಗುರುಪುರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ವಿನೋದಾ ಡಿ.ಅಂಚನ್ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಇತ್ತೀಚೆಗೆ ಕಾವ್ಯಾ ಪಿ.ಕೆ ಅವರ ಸಮ್ಮುಖದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ವಿನೋದಾ ಡಿ.ಅಂಚನ್ ಅವರನ್ನು ಸಂಘದ ಅಧ್ಯಕ್ಷರನ್ನಾಗಿ ಮೂರನೇ ಬಾರಿ ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷೆಯಾಗಿ ಸುನಂದಾ ಕೆ.ರೈ ಅವಿರೋಧವಾಗಿ ಆಯ್ಕೆಯಾದರು. ಮುಂದಿನ ಐದು ವರ್ಷ(2025-2030) ತನಕ ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ. ನಿರ್ದೇಶಕರಾಗಿ ರತಿ ಶೆಟ್ಟಿ, ಮೋಹಿನಿ ಗೌಡ, ವೀಣಾ ಶೆಟ್ಟಿ,ಕಮಲಾ ಗೌಡ, ಜಯಲಕ್ಷ್ಮಿ, ಪ್ರೇಮಾ ಎಂ.ಶೆಟ್ಟಿ, ಜಯಂತಿ, ಪ್ರಮಿಳಾ ಶೆಟ್ಟಿ, ಪುಷ್ಪಾ, ವಿದ್ಯಾಲತ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ವಸಂತಿ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com