ಸರ್ಕಾರಿ/ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಉಪಯೋಗ
ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಕನ್ನಡ ಮಾಧ್ಯಮದ ಆಯ್ದ 50 ಸರ್ಕಾರಿ ಅಥವಾ ಅನುದಾನಿತ ಪ್ರೌಢಶಾಲಾ ಗ್ರಂಥಾಲಯಗಳಿಗೆ ತಲಾ 100ರಂತೆ ಒಟ್ಟು 5000 ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
https://chat.whatsapp.com/EbVKVnWB6rlHT1mWtsgbch
ಗ್ರಂಥಾಲಯಗಳಿಗೆ ನೀಡಲಾಗುವ ಪುಸ್ತಕಗಳು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದ್ದು ಸಾಮಾನ್ಯ ಜ್ಞಾನ, ಆರೋಗ್ಯ, ಸ್ವದೇಶಿ ಚಿಂತನೆ, ಸಾಧಕರ ಜೀವನ ಚರಿತ್ರೆ, ನೀತಿ ಕಥೆಗಳಿಗೆ ಸಂಬಂಧಿಸಿದ್ದಾಗಿವೆ. ಶಾಲಾ ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ತಮ್ಮ ಶಾಲೆಯ ಗ್ರಂಥಾಲಯದಿಂದ ಈ ಪುಸ್ತಕಗಳನ್ನು ಪಡೆದು ಓದುವಂತಾಗಿ ಅವರಲ್ಲಿ ಓದುವ ಹವ್ಯಾಸ ಬೆಳೆಯಲಿ ಎಂಬ ಸದುದ್ದೇಶದಿಂದ ಶಾಲೆಗಳ ಗ್ರಂಥಾಲಯಗಳಿಗೆ ಶ್ರೀಶಾ ಸೊಸೈಟಿ ಉಚಿತವಾಗಿ ಪುಸ್ತಕಗಳನ್ನು ನೀಡುತ್ತಿವೆ. ಆಸಕ್ತ ಶಾಲೆಗಳ ಮುಖ್ಯಸ್ಥರು ಶ್ರೀಶಾ ಸೊಸೈಟಿಯ ಯಾವುದೇ ಶಾಖೆಯನ್ನು ಬೆಳಗ್ಗೆ ಗಂಟೆ 10 ರಿಂದ ಸಂಜೆ 5 ರೊಳಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
ಮಾಹಿತಿಗೆ: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ, ರಘು ಬಿಲ್ಡಿಂಗ್, ಉರ್ವಸ್ಟೋರ್, ಮಂಗಳೂರು. ದೂರವಾಣಿ: 9845032598/9448254526/0824 2453598.
ಮೊದಲು ಸಂಪರ್ಕಿಸಿದವರಿಗೆ ಹಾಗೂ ಮಂಗಳೂರು ತಾಲೂಕಿನ ಗ್ರಾಮೀಣ ಶಾಲೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎಸ್.ಗುರುರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com