ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ವಿಶ್ವದ ಅತಿದೊಡ್ಡ ಮೊಸರು ಉತ್ಪಾದನಾ ಘಟಕವನ್ನು ಅಮುಲ್ ನಿರ್ಮಿಸಲಿದೆ. ಅಮುಲ್ ಡೈರಿ ಉತ್ಪನ್ನಗಳ ತಯಾರಕ ಸಂಸ್ಥೆ ಜಿಸಿಎಂಎಂಎಫ್, ಕೊಲ್ಕತ್ತಾದ ಸಂಯೋಜಿತ ಘಟಕದಲ್ಲಿ ರೂ 600 ಕೋಟಿ ಹೂಡಿಕೆ ಮಾಡಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
https://chat.whatsapp.com/EbVKVnWB6rlHT1mWtsgbch
ಇಲ್ಲಿ ವಿಶ್ವದ ಅತಿದೊಡ್ಡ ಮೊಸರು ಉತ್ಪಾದನಾ ಘಟಕ ತೆರೆಯಲಿದ್ದು, ಪ್ರತಿದಿನ 15 ಲಕ್ಷ ಲೀಟರ್ ಹಾಲು ಮತ್ತು 10 ಲಕ್ಷ ಕೆಜಿ ಮೊಸರನ್ನು ಸಂಸ್ಕರಿಸಲಾಗುತ್ತದೆ. ಹೆಚ್ಚುತ್ತಿರುವ ಪ್ರಾದೇಶಿಕ ಬೇಡಿಕೆಯ ಕಾರಣದಿಂದ ಕೊಲ್ಕತಾದಲ್ಲಿ ಈ ಘಟಕ ಸ್ಥಾಪನೆಯಾಗಲಿದೆ ಎಂದು ಅಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ತಿಳಿಸಿದ್ದಾರೆ.
2023-24 ರಲ್ಲಿ ರೂ 59,445 ಕೋಟಿ ವಹಿವಾಟು ಮತ್ತು 36 ಲಕ್ಷ ರೈತರಿಗೆ ಕೊಡುಗೆ ನೀಡಿರುವ ಜಿಸಿಎಂಎಂಎಫ್, ಡಬಲ್ ಡಿಜಿಟ್ ಬೆಳವಣಿಗೆಯನ್ನು ಎದುರು ನೋಡುತ್ತಿದೆ. ಈಗಾಗಲೇ 50 ದೇಶಗಳಿಗೆ ಅಮುಲ್‌ನ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದ್ದು, ಇತ್ತೀಚೆಗೆ ಯುಎಸ್ ಮಾರುಕಟ್ಟೆಯನ್ನೂ ಪ್ರವೇಶಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com