100ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ
ನವೆಂಬರ್ 25ರಿಂದ 30ರ ತನಕ ಪ್ರಗತಿ ಮೈದಾನದಲ್ಲಿ ಆಯೋಜನೆ
ನವದೆಹಲಿ: ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟ(ಐಸಿಎ)ದ ಮಹಾಸಭೆ ಮತ್ತು ಜಾಗತಿಕ ಮಹಾ ಅಧಿವೇಶನವು ಈ ಬಾರಿ ನವದೆಹಲಿಯಲ್ಲಿ ನಡೆಯಲಿದ್ದು, ಐತಿಹಾಸಿಕ ಕ್ಷಣಗಳಿಗಾಗಿ ಭಾರತ ಸಜ್ಜಾಗಿದೆ. ಇದೇ ಮೊದಲ ಸಲ ಭಾರತದಲ್ಲಿ ಈ ಅಧಿವೇಶನ ನಡೆಯಲಿದ್ದು, ನವಂಬರ್ 25ರಿಂದ 30ರ ತನಕ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಸ್ಥಳ ನಿಗದಿಪಡಿಸಲಾಗಿದೆ. ಈ ಐತಿಹಾಸಿಕ ಸಮಾವೇಶದಲ್ಲಿ 100ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಇಫ್ಕೋ ಪ್ರಧಾನ ಕಚೇರಿಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಇಫ್ಕೋದ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಯು.ಎಸ್.ಅವಸ್ಥಿ, ಸಹಕಾರ ಸಚಿವಾಲಯದ ಕಾರ್ಯದರ್ಶಿ ಆಶಿಶ್ ಭೂತಾನಿ, ಐಸಿಎಯ ಡೈರೆಕ್ಟರ್ ಜನರಲ್ ಜೆರೋನ್ ಡಗ್ಲಾಸ್ ಇವರು ಈ ಬಗ್ಗೆ ಮಾಹಿತಿ ನೀಡಿದರು. ಸಹಕಾರದಿಂದ ಸರ್ವರಿಗೂ ಸಮೃದ್ಧಿ ಎಂಬುದು ಈ ಬಾರಿಯ ಸಮಾವೇಶದ ಥೀಮ್. ಇದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಸಹಕಾರದಿಂದ ಸಮೃದ್ಧಿ ಎಂಬ ವಿಷಯಕ್ಕೆ ಹತ್ತಿರವಾಗಿದೆ ಎಂದು ಹೇಳಿದರು.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK
ಐಸಿಎಯ 130 ವರ್ಷಗಳ ಇತಿಹಾಸದಲ್ಲಿ ಭಾರತದಲ್ಲಿ ಇದೇ ಮೊದಲ ಸಲ ಈ ಸಮಾವೇಶ ನಡೆಯುತ್ತಿದೆ. ಭಾರತದಲ್ಲಿನ ಸಹಕಾರ ಚಳವಳಿಯ ಜೊತೆಗೆ ಈ ವಲಯದಲ್ಲಿ ಭಾರತದ ನಾಯಕತ್ವವನ್ನು ಗುರುತಿಸಿ ಸಮಾವೇಶದ ಆತಿಥ್ಯವನ್ನು ಭಾರತಕ್ಕೆ ನೀಡಲಾಗಿದೆ. ವಿಶ್ವದ ಒಟ್ಟು ಸಹಕಾರಿಗಳ ನಾಲ್ಕನೇ ಒಂದರಷ್ಟು ಸಹಕಾರಿಗಳು ಭಾರತದಲ್ಲಿದ್ದಾರೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಸಮಾವೇಶದಲ್ಲಿ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಸಹಕಾರ ವರ್ಷ -2025 ಇದರ ಅಧಿಕೃತ ಲೋಕಾರ್ಪಣೆಯೂ ಆಗಲಿದೆ. ಇದರ ಸ್ಮರಣಾರ್ಥ ಅಂಚೆಚೀಟಿಯೊಂದನ್ನು ಬಿಡುಗಡೆ ಮಾಡಲಾಗುವುದು. ಇದರ ಜೊತೆಗೆ “ಹಾಥ್” ಎಂಬ ಧ್ಯೇಯದಲ್ಲಿ ಭಾರತದ ಹಳ್ಳಿಗಳು, ಹಳ್ಳಿಗಳಲ್ಲಿನ ಉತ್ಪನ್ನಗಳು ಹಾಗೂ ಹಳ್ಳಿಗಳಲ್ಲಿ ಸಹಕಾರ ವಲಯದ ಕೊಡುಗೆಗಳ ಬಗ್ಗೆ ಪ್ರದರ್ಶಿನಿಯನ್ನೂ ಏರ್ಪಡಿಸಲಾಗಿದೆ.
ಇಫ್ಕೋ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಯು.ಎಸ್.ಅವಸ್ಥಿ ಮಾತನಾಡಿ, ಐಸಿಎ ಮಹಾಸಭೆಯ ಅಂಗವಾಗಿ ಇಫ್ಕೋ 10,000 ಅಶ್ವತ್ಥ ಗಿಡಗಳನ್ನು ನೆಟ್ಟು ಬೆಳೆಸಲಿದೆ ಎಂದು ಹೇಳಿದರು. 100ಕ್ಕೂ ಅಧಿಕ ದೇಶಗಳ 1,500ಕ್ಕೂ ಅಧಿಕ ಗಣ್ಯ ಅತಿಥಿಗಳು ಭಾಗವಹಿಸಲಿದ್ದು, ಭೂತಾನ್ ಪ್ರಧಾನಮಂತ್ರಿ, ಐಸಿಎ ಸದಸ್ಯರುಗಳು ಭಾಗವಹಿಸುವುದು ಪಕ್ಕಾ ಆಗಿದೆ ಎಂದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com