Close Menu
    Top News

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀ ಭಗವತೀ ಸಹಕಾರ ಬ್ಯಾಂಕಿನ 48ನೇ ಮಹಾಸಭೆ
    News

    ಶ್ರೀ ಭಗವತೀ ಸಹಕಾರ ಬ್ಯಾಂಕಿನ 48ನೇ ಮಹಾಸಭೆ

    adminBy adminSeptember 1, 2024

    ಮಂಗಳೂರು; ಇಲ್ಲಿನ ಶ್ರೀ ಭಗವತೀ ಸಹಕಾರ ಬ್ಯಾಂಕಿನ 48ನೇ ಮಹಾಸಭೆ ಭಾನುವಾರ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಕೂಟಕ್ಕಳ ಸಭಾಭವನದಲ್ಲಿ ಜರುಗಿತು.

    ಭಗವತೀ ಕ್ಷೇತ್ರದ ಕಲೆಕಾರರಾದ ಗೋಪಾಲದಾಸ್ ದೀಪ ಪ್ರಜ್ವಲನೆ ಮಾಡಿದರು. ಬ್ಯಾಂಕಿನ ಅಧ್ಯಕ್ಷ ಮಾಧವ ಬಿ.ಎಂ. ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕಿ ಸುಷ್ಮಾ 2023-24ರ ಸಾಲಿನ ವರದಿ ಮಂಡಿಸಿದರು. ಉಪಪ್ರಧಾನ ವ್ಯವಸ್ಥಾಪಕಿ ಸರಿತಾ ಬಿ.ಎಂ ಆಯ-ವ್ಯಯ ಮಂಡಿಸಿದರು. ಬ್ಯಾoಕಿನ ಉಪಾಧ್ಯಕ್ಷ ದೇವದಾಸ್ ಕೊಲ್ಯ ಮಾತನಾಡಿ, ಸದಸ್ಯರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಮ್ಮ ಬ್ಯಾoಕನ್ನು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು. 2023-24ರ ಸಾಲಿನಲ್ಲಿ ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿದ ಸದಸ್ಯರು ಹಾಗೂ ಉತ್ತಮ ಠೇವಣಿದಾರರನ್ನು ಸನ್ಮಾನಿಸಲಾಯಿತು. ಸದಸ್ಯರ ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಅತ್ಯುತ್ತಮ ಶಾಖೆಗಳಾಗಿ ಆಯ್ಕೆಯಾದ ಜಪ್ಪು ಶಾಖೆ ಮತ್ತು ಬಿ.ಸಿ.ರೋಡ್ ಶಾಖೆಗಳ ಸಿಬಂದಿಯನ್ನು ಸನ್ಮಾನಿಸಲಾಯಿತು.

    ಬ್ಯಾಂಕಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಆನಂದ, ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ನಾರಾಯಣ, ಪ್ರಮುಖರಾದ ಕೆ.ವಿಶ್ವನಾಥ, ರಾಜೇಶ್, ಕಿರಣ್, ರಾಜೇಶ್ ಭಂಡಾರಿ, ಪದ್ಮನಾಭ, ಆಶಾ ಚಂದ್ರಮೋಹನ್, ಶರಿಲ್, ಭಾರತಿ ಮೊದಲಾದವರು ಹಾಜರಿದ್ದರು. ಭಗವತೀ ಕ್ಷೇತ್ರದ ಮೊಕ್ತೇಸರ ಗಣೇಶ್ ಕುoಟಲ್ಪಾಡಿ ಉಪಸ್ಥಿತರಿದ್ದರು. ಬ್ಯಾಂಕಿನ ಸಿಬಂದಿ ರಮೇಶ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ರಾಘವ ಆರ್‌.ಉಚ್ಚಿಲ್ ವಂದನಾರ್ಪಣೆ ಮಾಡಿದರು.

    Banking Bhagavathi co operative bank Cooperative Cooperative Department Cooperative Registrar Sahakara Spandana Spandana NEws
    Previous Articleಸಹಕಾರಿ ಚಿಂತನೆಯಲ್ಲಿ ಆದರ್ಶ ರಾಷ್ಟ್ರ ನಿರ್ಮಾಣದ ಪರಿಕಲ್ಪನೆ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ.
    Next Article ದೇವರ ಪೂಜೆಯಿಂದ ಹಿಡಿದು ಆಹಾರದ ವಿವಿಧ ಖಾದ್ಯಗಳಿಗೆ ಬೇಕೇಬೇಕು ಕಲ್ಪವೃಕ್ಷ

    Related Posts

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸ್ವಚ್ಛತೆ, ಪರಿಸರ ಜಾಗೃತಿ ನಾಗರಿಕ ಶಿಷ್ಟಾಚಾರದ ಭಾಗ : ಡಾ.ರಾಧಾಕೃಷ್ಣ ನಾಯರ್

    June 7, 2026

    ಪ್ರಣವ ಸೌಹಾರ್ದ ಸೊಸೈಟಿಯಿಂದ ಜೂನ್‌ 12ರಿಂದ 14ರ ತನಕ ಸುಳ್ಯದಲ್ಲಿ ಹಲಸು -ಮಾವು ಮೇಳ

    June 6, 2026

    ನಾಳೆ ವಿಶ್ವಕರ್ಮ ಬ್ಯಾಂಕ್‌ ಸ್ವರ್ಣ ಸಂಭ್ರಮದ ಸ್ವಚ್ಛ ಭಾರತ್‌ ಕಾರ್ಯಕ್ರಮ ಸಮಾರೋಪ

    June 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.