ನವದೆಹಲಿ: ರಾಷ್ಟ್ರೀಯ ಚಲನಚಿತ್ರ ಮತ್ತು ಲಲಿತಕಲಾ ಸಹಕಾರಿ ಲಿಮಿಟೆಡ್(ಎನ್‌ಎಎಫ್‌ಎಫ್‌ಎಸಿ -ನ್ಯಾಶನಲ್ ಫಿಲ್ಮ್ ಆಂಡ್ ಫೈನ್ ಆರ್ಟ್ಸ್ ಕೋಆಪರೇಟಿವ್ಸ್ ಲಿಮಿಟೆಡ್)ನ ಅಧ್ಯಕ್ಷರಾಗಿ ರಂಜಿತ್ ಸಿಂಗ್ ಅಲಿಯಾಸ್ ಟಿಟು ಆಯ್ಕೆಯಾಗಿದ್ದಾರೆ. ಇವರು ಹಿರಿಯ ಸಹಕಾರಿ ಧುರೀಣ ದಿ.ತಪೇಶ್ವರ್ ಸಿಂಗ್ ಅವರ ಪುತ್ರ.
ಮಂಗಳವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಬಿ.ಡಿ.ಭೂಕಾಂತ್ ಮತ್ತು ಸಂಜಯ್ ಜೈನ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಆಯ್ಕೆಯಾದ ರಂಜಿತ್ ಸಿಂಗ್, ಹಿಂದೆ ಅಧ್ಯಕ್ಷರಾಗಿದ್ದ ರಾಮ್ ಇಕ್ಬಾಲ್ ಸಿಂಗ್ ಅವರ ಸ್ಥಾನ ತುಂಬಲಿದ್ದಾರೆ. ರಂಜಿತ್ ಸಿಂಗ್ ದೇಶದ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ಆಪ್ತರು.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK
ರಂಜಿತ್ ಸಿಂಗ್ ಮತ್ತು ಅವರ ಪುತ್ರ ವಿಶಾಲ್ ಸಿಂಗ್ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು. ಪಕ್ಷ ಸೇರ್ಪಡೆಯಾದ ಕೂಡಲೇ ಅವರಿಗೆ ಉನ್ನತ ಹುದ್ದೆ ಲಭಿಸಿದೆ. ವಿಶಾಲ್ ಸಿಂಗ್ ಎನ್‌ಸಿಸಿಎಫ್‌ನ ಚೇರ್ಮನ್ ಆಗಿದ್ದು, ರಂಜಿತ್ ಸಿಂಗ್ ಎನ್‌ಎಎಫ್‌ಎಫ್‌ಎಸಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿ.ಎಚ್.ಅಮೀನ್, ದಿಲೀಪ್ ಸಂಘಾನಿ, ಚಂದ್ರಪಾಲ್ ಸಿಂಗ್ ಯಾದವ್, ವಿ.ಕೆ.ದುಬೆ, ರಾಮ್ ಇಕ್ಬಾಲ್ ಸಿಂಗ್, ರಾಜಶೇಖರ್ ಜೈನ್, ಶಾಂತಲಾ ಬಿ., ಆರತಿ ಬಿಸಾರಿಯ ಹಾಗೂ ರಾಜೀವ್ ಸಿಂಗ್ ಇದರ ನಿರ್ದೇಶಕರಾಗಿದ್ದಾರೆ.
1985ರಲ್ಲಿ ಆರಂಭವಾದ ರಾಷ್ಟ್ರೀಯ ಚಲನಚಿತ್ರ ಮತ್ತು ಲಲಿತಕಲಾ ಸಹಕಾರಿಯು ಜಗತ್ತಿನಾದ್ಯಂತ ಸಹಕಾರಿ ವಲಯದ ಚಟುವಟಿಕೆಗಳನ್ನು ಪ್ರಸಾರ ಮಾಡುವಲ್ಲಿ ಕೆಲಸ ಮಾಡುತ್ತಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com