ಅಹಮದಾಬಾದ್: ಕ್ಷೀರೋದ್ಯಮದಲ್ಲಿ ಕ್ರಾಂತಿಯನ್ನೇ ಮಾಡಿರುವ ಅಮುಲ್ ಸಹಕಾರಿ ಸಮಿತಿಯು ಜಾಗತಿಕವಾಗಿ ಬಲಿಷ್ಠ ಆಹಾರ ಮತ್ತು ಡೈರಿ ಬ್ರಾಂಡ್ ಎಂಬ ಬಿರುದು ಪಡೆದುಕೊಂಡಿದೆ.
ಬ್ರಿಟಿನ್‌ನ ‘ಬ್ರಾಂಡ್ ಫೈನಾನ್ಸ್’ನ 2024ರ ಗ್ಲೋಬಲ್ ಫುಡ್ ಆ್ಯಂಡ್ ಡ್ರಿಂಕ್ಸ್ ವರದಿಯಲ್ಲಿ ಅಮುಲ್‌ಗೆ ಈ ಸ್ಥಾನ ನೀಡಲಾಗಿದ್ದು, AAA+ ರೇಟಿಂಗ್ ಗಿಟ್ಟಿಸಿಕೊಂಡಿದೆ. 2023ರಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದ ಅಮುಲ್ 2024ರಲ್ಲಿ ಮೊದಲ ಸ್ಥಾನಕ್ಕೇರಿದೆ. ಅನಂತರದ ಎರಡು ಸ್ಥಾನ ಚೀನಾದ ಡೈರಿಗಳ ಪಾಲಾಗಿದೆ. ಈ ಬಗ್ಗೆ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮುಲ್, ‘ಜಗತ್ತಿನ ಮುಂಚೂಣಿಯ ಬ್ರ್ಯಾಂಡ್ ಕನ್ಸಲ್ವೆನ್ಸಿ ‘ಬ್ರ್ಯಾಂಡ್ ಫೈನಾನ್ಸ್’ ತನ್ನ ವರದಿಯಲ್ಲಿ ನಮಗೆ (ಅಮುಲ್) ಬಲಿಷ್ಠ ಫುಡ್, ಡೈರಿ ಮತ್ತು ನಾನ್ ಆಲ್ಕೋಹಾಲಿಕ್ ಬ್ರ್ಯಾಂಡ್‌ನ ಸ್ಥಾನ ನೀಡಿದ್ದು, ಈ ಸಾಧನೆ ಸಂತೋಷ ತಂದಿದೆ’ ಎಂದು ಪ್ರತಿಕ್ರಿಯಿಸಿದೆ.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK
ಗುಜರಾತ್ ಮೂಲದ ಅಮುಲ್ ವಾರ್ಷಿಕವಾಗಿ 11 ಬಿಲಿಯನ್ ಲೀಟರ್ ಹಾಲು ಉತ್ಪಾದಿಸುತ್ತಿದ್ದು, ಇದರ ಮೌಲ್ಯ 80 ಸಾವಿರ ಕೋಟಿ (10 ಬಿಲಿಯನ್ ಡಾಲರ್) ರೂ. ಆಗಿದೆ. 36 ಲಕ್ಷಕ್ಕೂ ಅಧಿಕ ರೈತರು ಈ ಕ್ಷೀರೋದ್ಯಮದ ಭಾಗವಾಗಿದ್ದಾರೆ.
ಭಾರತೀಯ ಹಾಲು ಮಾರುಕಟ್ಟೆಯಲ್ಲಿಅಮುಲ್‌ನ ಪಾಲುದಾರಿಕೆ ಶೇಕಡಾ 85ರಷ್ಟಿದೆ. ಬೆಣ್ಣೆ ಮಾರುಕಟ್ಟೆಯಲ್ಲೂ 85%, ಪನ್ನೀರ್ ಮಾರುಕಟ್ಟೆಯಲ್ಲಿ 66% ಪಾಲುದಾರಿಕೆ ಅಮುಲ್‌ನದ್ದು ಇದೆ. 1946ರಲ್ಲಿ ಗುಜರಾತ್‌ನ ಎರಡು ಸಣ್ಣ ಗ್ರಾಮಗಳಿಂದ 247 ಲೀಟರ್ ಹಾಲು ಸಂಗ್ರಹಿಸುವ ಮೂಲಕ ಸ್ಥಳೀಯ ರೈತರು ಅಮುಲ್ ಸಹಕಾರಿ ಸಮಿತಿಯನ್ನು ಆರಂಭಿಸಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com