ಗುಜರಾತ್ ರಾಜ್ಯದಲ್ಲಿದೆ ಏಷ್ಯಾದ ಶ್ರೀಮಂತ ಹಳ್ಳಿ
ಅಹಮದಾಬಾದ್: ಭಾರತದ ರಾಷ್ಟ್ರಪತಿ ಎಂದು ಕರೆಸಿಕೊಂಡಿರುವ ಮಹಾತ್ಮ ಗಾಂಧಿ ಜನ್ಮ ತಾಳಿದ ರಾಜ್ಯ ಗುಜರಾತ್ ಈಗ ಏಷ್ಯಾದಲ್ಲೇ ಅತಿ ಶ್ರೀಮಂತ ಹಳ್ಳಿಯನ್ನೂ ಜಗತ್ತಿಗೆ ಪರಿಚಯಿಸಿದೆ. ಗುಜರಾತ್ ರಾಜ್ಯದ ಕಛ್‌ನಲ್ಲಿರುವ ಮಾಧಾಪುರ ಗ್ರಾಮ ಏಷ್ಯಾದ ಅತ್ಯಂತ ಶ್ರೀಮಂತ ಹಳ್ಳಿ ಎಂಬ ಕೀರ್ತಿ ತಮ್ಮದಾಗಿಸಿಕೊಂಡಿದೆ. ಈ ಗ್ರಾಮದ ಜನರ ನಿರಖು ಠೇವಣಾತಿ (ಎಫ್‌ಡಿ) ಎಷ್ಟೆಂದರೆ ಏಳು ಸಾವಿರ ಕೋಟಿ ರೂ. ಇಲ್ಲಿಯ ಒಬ್ಬೊಬ್ಬ ವ್ಯಕ್ತಿ ಬ್ಯಾಂಕಿನಲ್ಲಿ 15ರಿಂದ 20 ಲಕ್ಷ ಠೇವಣಿ ಇರಿಸಿದ್ದಾರೆ.
ಈ ಹಳ್ಳಿಯಲ್ಲಿ ಪಟೇಲ್ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು 32,000ದಷ್ಟು ಜನಸಂಖ್ಯೆಯಿದೆ. 2011ರ ಜನಗಣತಿ ಪ್ರಕಾರ ಇಲ್ಲಿನ ಜನಸ೦ಖ್ಯೆ 17,000ದಷ್ಟಿತ್ತು. ವ್ಯಾಪಾರವನ್ನೇ ಹೆಚ್ಚಾಗಿ ಅವಲಂಬಿಸಿದ್ದು, ಹೆಚ್ಚಿನವರು ವಿದೇಶದಲ್ಲಿ ನೆಲೆಸಿದ್ದಾರೆ. ಆದಾಗ್ಯೂ ತಮ್ಮ ತವರು ಹಳ್ಳಿಯನ್ನು ಇವರು ಮರೆತಿಲ್ಲ. ವಿದೇಶದಲ್ಲಿ ನೆಲೆಯಾಗಿದ್ದರೂ ಜನರು ತಮ್ಮ ತವರು ಗ್ರಾಮದಲ್ಲಿರುವ ಬ್ಯಾಂಕ್‌ಗಳಲ್ಲೇ ಹಣ ಠೇವಣಿ ಇರಿಸಿದ್ದಾರೆ. 20 ಸಾವಿರದಷ್ಟು ಮನೆಗಳಿರುವ ಈ ಗ್ರಾಮದ 1,200 ಕುಟುಂಬಗಳು ವಿದೇಶದಲ್ಲಿದ್ದು, ಅದರಲ್ಲೂ ಹೆಚ್ಚಿನವರು ಮಧ್ಯ ಆಫ್ರಿಕಾದ ದೇಶಗಳಲ್ಲಿ ವಾಸವಿದ್ದಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಅಮೆರಿಕ ಹಾಗೂ ನ್ಯೂಜಿಲೆಂಡ್‌ನಲ್ಲೂ ಕೆಲವರು ನೆಲೆಯಾಗಿದ್ದಾರೆ.
17 ಬ್ಯಾಂಕ್‌ಗಳು ಈ ಗ್ರಾಮದಲ್ಲಿದ್ದು ಉತ್ತಮ ವಹಿವಾಟು ಹೊಂದಿವೆ. ಎಸ್‌ಬಿಐ, ಎಚ್‌ಡಿಎಫ್‌ಸಿ, ಪಿಎನ್‌ಬಿ, ಆಕ್ಸಿಸ್, ಐಸಿಐಸಿಐ ಮೊದಲಾದ ಬ್ಯಾಂಕ್‌ಗಳು ಇಲ್ಲಿ ತಮ್ಮ ಶಾಖೆಯನ್ನು ಹೊಂದಿವೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com