ಲೆಕ್ಕಪರಿಶೋಧನೆಯಲ್ಲಿ ಎ ಶ್ರೇಣಿ
ಸುರತ್ಕಲ್: ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ ವಾರ್ಷಿಕ 217 ಕೋಟಿ ರೂ. ಒಟ್ಟು ವ್ಯವಹಾರ ನಡೆಸಿದ್ದು, 41,26,686.43 ರೂ. ನಿವ್ವಳ ಲಾಭ ಗಳಿಸಿದೆ. ಪ್ರಸ್ತುತ ಸಾಲಿನಲ್ಲಿ ಸಂಘವು ಗ್ರಾಹಕರಿಗೆ ಶೇ.18 ಡಿವಿಡೆಂಡ್ ನೀಡಲು ನಿರ್ಧರಿಸಿದೆ.
ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸುರತ್ಕಲ್ ಸಿಟಿ ಸ್ಕ್ವೇರ್ ನಲ್ಲಿ ನಡೆದಿದ್ದು ಈ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಂಘವು 16 ವರ್ಷಗಳಿಂದ ನಿರಂತರ ಲಾಭ ಗಳಿಸುತ್ತಿದ್ದು, ಲೆಕ್ಕಪರಿಶೋಧನೆಯಲ್ಲಿ ಎ ಶ್ರೇಣಿಯಲ್ಲಿ ವರ್ಗೀಕರಣಗೊಂಡಿದೆ. ಸಂಘವು ಕ್ಲೌಡ್ ತಂತ್ರಾಂಶವನ್ನು ಹಾಗೂ ಆರ್‌ಟಿಜಿಎಸ್/ನೆಫ್ಟ್ ಸೇವೆ, ವಾಹನ ವಿಮಾ ಸೌಲಭ್ಯ ಹಾಗೂ ಇ-ಸ್ಟಾಂಪಿಂಗ್ ಸೇವೆ ಹೊಂದಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ತಿಳಿಸಿದರು. ಸಂಘವು ತನ್ನ ಕ್ಷಿಪ್ರ ಹಾಗೂ ಪಾರದರ್ಶಕ ಬೆಳವಣಿಗೆಯ ಮೂಲಕ ಎಸ್‌ಸಿಡಿಸಿಸಿ ಬ್ಯಾಂಕ್ 2022-23ನೇ ಸಾಲಿನ ಸಾಧನಾ ಪ್ರಶಸ್ತಿ ಹಾಗೂ ಧಾರವಾಡದ ಕಲಘಟಗಿಯಲ್ಲಿ ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಪಡೆದುಕೊಂಡಿರುವುದನ್ನು ಪ್ರಸ್ತಾಪಿಸಲಾಯಿತು.
https://chat.whatsapp.com/Ge11n7QCiMj5QyPvCc0H19
ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಸಂಜೀವ ಮೂಲ್ಯ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಸಹಕಾರಿ ಸಂಘದ ಉಪಾಧ್ಯಕ್ಷ ಮಾಧವ ಬಂಗೇರ ಹಾಗೂ ನಿರ್ದೇಶಕರಾದ ಮುದ್ದು ಎಸ್.ಮೂಲ್ಯ, ಭೋಜ ಬಂಗೇರ, ಮೋಹನ್ ಐ.ಮೂಲ್ಯ , ಬಾಬುಚಂದ್ರ ಐ, ಲೀಲಾ ಬಂಜನ್, ರತ್ನಾವತಿ, ಹಾಗೂ ಉಷಾ ಆರ್.ಬಂಗೇರ, ಗಂಗಾಧರ್ ಬಂಜನ್ ಹಾಗೂ ದಯಾನಂದ ಪಡ್ರೆ ಮತ್ತು ಆಂತರಿಕ ಲೆಕ್ಕಪರಿಶೋಧಕರಾದ ಜಗಜೀವನ್‌ದಾಸ್ ಉಪಸ್ಥಿತರಿದ್ದರು. ನಿರ್ದೇಶಕ ಮುರಲೀದಾಸ್ ಎಂ.ಕುಲಾಲ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ಮೇಲ್ ಮಾಡಿ:
ಇಮೇಲ್: sahakaraspandana@gmail.com
ಮಾಹಿತಿಗೆ: 9901319694