Close Menu
    Top News

    ಶ್ರೀ ಪೂರ್ಣಾನಂದ ಸಹಕಾರಿ ಸದಸ್ಯರಿಗೆ ಶೇ. 12 ಡಿವಿಡೆಂಡ್ ಘೋಷಣೆ

    September 8, 2026

    ಬಿಜಾಪುರ ಕೋ-ಆಪ್‌ ಕ್ರೆಡಿಟ್ ಸೊಸೈಟಿಯ ವಾರ್ಷಿಕ ಸರ್ವ ಸದಸ್ಯರ ಸಭೆ

    September 8, 2026

    ದೈವಜ್ಞ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ ಸಂಪನ್ನ

    September 8, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀ ಪೂರ್ಣಾನಂದ ಸಹಕಾರಿ ಸದಸ್ಯರಿಗೆ ಶೇ. 12 ಡಿವಿಡೆಂಡ್ ಘೋಷಣೆ
    News

    ಶ್ರೀ ಪೂರ್ಣಾನಂದ ಸಹಕಾರಿ ಸದಸ್ಯರಿಗೆ ಶೇ. 12 ಡಿವಿಡೆಂಡ್ ಘೋಷಣೆ

    adminBy adminSeptember 8, 2026

    ರೂ.500 ಕೋಟಿ ವ್ಯವಹಾರ ಗುರಿ | ಸ್ವಂತ ಕಟ್ಟಡದಲ್ಲೇ ರಜತ ಮಹೋತ್ಸವಕ್ಕೆ ಶ್ರಮ | ಮಹಾಸಭೆಯಲ್ಲಿ ಅಧ್ಯಕ್ಷ ಗಣೇಶ್ ಶೆಣೈ ಮಾಹಿತಿ

    ಮಂಗಳೂರು: ಸಹಕಾರಿ ರಂಗದಲ್ಲಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥದಲ್ಲಿ ತ್ವರಿತಗತಿಯಿಂದ ಮುನ್ನಡೆಯುತ್ತಿರುವ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು 2025-26ನೇ ಆರ್ಥಿಕ ವರ್ಷದಲ್ಲಿ 39,86,995.91 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಈ ಬಾರಿ ಸಂಸ್ಥೆಯ ಸದಸ್ಯರಿಗೆ ಶೇ.12 ಡಿವಿಡೆಂಡ್‌ ನೀಡಲಾಗುವುದು. ಸಂಸ್ಥೆಯ ಒಟ್ಟು ವ್ಯವಹಾರ 250 ಕೋಟಿ ರೂ.ಗಳಾಗಿದ್ದು, 2026-27ನೇ ಸಾಲಲ್ಲಿ ಇದನ್ನು 500 ಕೋಟಿ ರೂ.ಗಳಿಗೆ ತಲುಪಿಸುವ ಗುರಿಯಿದೆ ಎಂದು ಶ್ರೀ ಪೂರ್ಣಾನಂದ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಶೆಣೈ ಹೇಳಿದರು.

    https://chat.whatsapp.com/FCEnlTkAKCC0MGPhXtX4i4
    ಶ್ರೀ ಪೂರ್ಣಾನಂದ ಸಹಕಾರಿಯ 2025-26ನೇ ಸಾಲಿನ 24ನೇ ವರ್ಷದ ಸರ್ವ ಸದಸ್ಯರ ಮಹಾಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು. ಪ್ರಸ್ತುತ ಸಾಲಲ್ಲಿ ಸಂಸ್ಥೆಯ ಠೇವಣಿ 37,03,65,227 ಕೋಟಿ ರೂ.ಗಳು. 2026-27ರಲ್ಲಿ ಇದನ್ನು 50 ಕೋಟಿ ರೂ.ಗಳಿಗೆ ಹಾಗೂ ಪಾಲು ಬಂಡವಾಳವನ್ನು 1 ಕೋಟಿ ರೂ.ಗೆ ತಲುಪಿಸುವುದು ಪೂರ್ಣಾನಂದದ ಗುರಿ. ಸಹಕಾರಿಯ ಹಿತದೃಷ್ಟಿಯಿಂದ ಅಡಮಾನ ಸಾಲ, ಚಿನ್ನಾಭರಣ ಸಾಲ ಇತ್ಯಾದಿ ಭದ್ರತೆಯುಕ್ತ ಸಾಲಗಳಿಗೆ ಆದ್ಯತೆ ನೀಡಲಾಗುವುದು. ಸಂಸ್ಥೆಯ ಇವೆಲ್ಲ ಗುರಿಗಳ ಸಾಕಾರಕ್ಕೆ ಸದಸ್ಯರು ಸಹಕರಿಸಬೇಕೆಂದು ಗಣೇಶ್ ಶೆಣೈ ಕೋರಿದರು.


    ಶ್ರೀ ಪೂರ್ಣಾನಂದದ ಉಪಾಧ್ಯಕ್ಷ ಉಪೇಂದ್ರ ನಾಯಕ್, ನಿರ್ದೇಶಕರಾದ ಮೋಹನ್ ನಾಯಕ್, ಹರಿಶ್ಚಂದ್ರ ಪ್ರಭು, ಸದಾನಂದ ಪ್ರಭು, ರವೀಂದ್ರ ಪ್ರಭು, ಜಗದೀಶ್ ಶೆಣೈ, ಅರವಿಂದ ಕುಮಾರ್ ಶೆಟ್ಟಿ, ಗೀತಾ ರತ್ನಾಕರ್, ವಾಸುದೇವ, ಸಂಸ್ಥೆಯ ಕೇಂದ್ರ ಕಚೇರಿ ಪ್ರಧಾನ ವ್ಯವಸ್ಥಾಪಕಿ ಅನಿತಾ, ಲೆಕ್ಕ ಪರಿಶೋಧಕರಾದ ಪಿ.ನರೇಂದ್ರ ಪೈ ಉಪಸ್ಥಿತರಿದ್ದರು. ಪೂರ್ಣಾನಂದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಗಣೇಶ್ ಶೆಣೈ ಸ್ವಾಗತಿಸಿ, ಸಂಸ್ಥೆಯ ಬಿಜೈ ಶಾಖಾ ವ್ಯವಸ್ಥಾಪಕಿ ಶಶಿಕಲಾ ವಂದಿಸಿದರು. ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಹೃಷಿಕೇಶ್ ಕುಲಾಲ್ ಮತ್ತು ಕೇಂದ್ರ ಕಚೇರಿ ಎಕ್ಸಿಕ್ಯೂಟಿವ್ ಸುಜಾತ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ಬಳಿಕ ಬಾಲ ಪ್ರತಿಭೆ ಆರಾಧ್ಯ ನಾಯಕ್ ಅವರಿಂದ ಗಾಂಧಾರ ವಿದ್ಯೆಯ ಪ್ರದರ್ಶನ ನಡೆಯಿತು.

    ಗಾಂಧಾರ ವಿದ್ಯೆಯಲ್ಲಿ ನಿಸ್ಸೀಮ ಪುಟಾಣಿ ಪ್ರತಿಭೆ
    ಕಾರ್ಯಕ್ರಮದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿದ ಸ್ಥಿತಿಯಲ್ಲಿದ್ದರೂ, ಬರೇ ಸ್ಪರ್ಶದ ಮೂಲಕ ಯಾವುದೇ ವಸ್ತುಗಳ ಬಣ್ಣವನ್ನು ಪಟಪಟನೆ ಉಸುರುವ ಪುಟಾಣಿ ಪ್ರತಿಭೆ, ಪೂರ್ಣಾನಂದದ ನಿರ್ದೇಶಕ ಮೋಹನ್ ನಾಯಕ್ ಅವರ ಮೊಮ್ಮಗಳು ಆರಾಧ್ಯ ನಾಯಕ್ ಹಾಗೂ ಚಿತ್ರಕಲೆಯಲ್ಲಿ ಅಪೂರ್ವ ಪ್ರತಿಭೆ ಹೊಂದಿರುವ ವಿಕ್ರಮ್ ಶೆಣೈ ಅನುಪಸ್ಥಿತಿಯಲ್ಲಿ ಅವರ ಸಹೋದರ ವಿವೇಕ್ ಶೆಣೈ ಗೌರವ ಪುರಸ್ಕಾರ ಪಡೆದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಗಳಿಸಿರುವ ಹಲವು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

    ಅ.28ರಂದು ರಜತ ಮಹೋತ್ಸವ ಗೌಜಿ
    ಶ್ರೀ ಪೂರ್ಣಾನಂದ ಸಂಸ್ಥೆಗೆ ಅ.28ರಂದು ರಜತ ಮಹೋತ್ಸವ ಉದ್ಘಾಟನಾ ಗೌಜಿ. ರಜತ ಮಹೋತ್ಸವದ ಸ್ಮಾರಕ ಸ್ವಂತ ಕಟ್ಟಡ ಹೊಂದುವುದು ಸಂಸ್ಥೆಯ ಆಡಳಿತ ಮಂಡಳಿಯ ಅಭಿಲಾಷೆ. ರಜತ ಮಹೋತ್ಸವದಂಗ ಸ್ವಚ್ಛತಾ ಆಂದೋಲನ ಸಹಿತ ಹತ್ತು ಹಲವು ಕಾರ್ಯಕ್ರಮ ಗಳನ್ನು ಆಯೋಜಿಸಲಾಗುವುದು ಎಂದು ಅಧ್ಯಕ್ಷ ಗಣೇಶ್‌ ಶೆಣೈ ನುಡಿದರು.

    ಹಿರಿಯ ಸದಸ್ಯರಿಗೆ ಸಮ್ಮಾನ ಕಾರ್ಯಕ್ರಮ
    ಶ್ರೀ ಪೂರ್ಣಾನಂದದ ಹಿರಿಯ ಸದಸ್ಯರಾದ ರಾಮಚಂದ್ರ ಭಂಡಾರಿ, ಕೇಶವ ಪ್ರಭು, ಶಾಂತಾರಾಮ ರಾವ್, ಹಿರಿಯ ವಕೀಲ ಪುರುಷೋತ್ತಮ ಭಟ್ ಇವರನ್ನು ಇದೇ ಸಂದರ್ಭ ಗೌರವಿಸಲಾಯಿತು. ಹಿರಿಯ ಸದಸ್ಯರಾದ ನಾರಾಯಣ ಮಾಸ್ಟರ್ ಹಾಗೂ ಆತ್ಮರಾಂ ಪಾಟೀಲ್ ಸನ್ಮಾನ ನೆರವೇರಿಸಿದರು.

    Banking Co Operative ministry Cooperative Cooperative Department Cooperative Registrar Ganesh Shenoy Shree Poornananda Vividhoddesha Souharda Sahakari Sangha
    Previous Articleಬಿಜಾಪುರ ಕೋ-ಆಪ್‌ ಕ್ರೆಡಿಟ್ ಸೊಸೈಟಿಯ ವಾರ್ಷಿಕ ಸರ್ವ ಸದಸ್ಯರ ಸಭೆ

    Related Posts

    ಬಿಜಾಪುರ ಕೋ-ಆಪ್‌ ಕ್ರೆಡಿಟ್ ಸೊಸೈಟಿಯ ವಾರ್ಷಿಕ ಸರ್ವ ಸದಸ್ಯರ ಸಭೆ

    September 8, 2026

    ದೈವಜ್ಞ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ ಸಂಪನ್ನ

    September 8, 2026

    ಸಹಕಾರಿ ಬ್ಯಾಂಕ್‌ಗಳಿಗೆ ಮಹತ್ವದ ರಿಲೀಫ್: 2015ರ ಹಿಂದಿನ ತೆರಿಗೆ ವರದಿ ಪ್ರಕರಣ ರದ್ದು

    September 8, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಶ್ರೀ ಪೂರ್ಣಾನಂದ ಸಹಕಾರಿ ಸದಸ್ಯರಿಗೆ ಶೇ. 12 ಡಿವಿಡೆಂಡ್ ಘೋಷಣೆ

    September 8, 2026

    ಬಿಜಾಪುರ ಕೋ-ಆಪ್‌ ಕ್ರೆಡಿಟ್ ಸೊಸೈಟಿಯ ವಾರ್ಷಿಕ ಸರ್ವ ಸದಸ್ಯರ ಸಭೆ

    September 8, 2026

    ದೈವಜ್ಞ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ ಸಂಪನ್ನ

    September 8, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.