ಕೈಕಂಬ: ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಕೆ.ಜಯಂತ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
https://chat.whatsapp.com/FCEnlTkAKCC0MGPhXtX4i4
ಸಂಘದ ಸದಸ್ಯರಿಗೆ ಶೇ.25 ಲಾಭಾಂಶ ಪ್ರಕಟಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀತಾ ವಿ.ಹೊಳ್ಳ ವಾರ್ಷಿಕ ವರದಿ ವಾಚಿಸಿದರು. ಗತವರ್ಷದಲ್ಲಿ 29601.59 ಲಕ್ಷ ವ್ಯವಹಾರ ನಡೆಸಿ ರೂ. 77.96 ಲಕ್ಷ ರೂ. ಲಾಭ ಗಳಿಸಿ ಶೇ 99.75 ಸಾಲ ವಸೂತಿಯಾಗಿದ್ದು ಸಂಘವನ್ನು ಎ ತರಗತಿ ಎಂದು ವರ್ಗೀಕರಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಾಧಕ ವಿದಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಸಂಘದ ಸ್ಥಾಪಕರ ಭಾವಚಿತ್ರವನ್ನು ಅನಾವರಣ ಮಾಡಲಾಯಿತು. ಸಂಘದ ಉಪಾಧ್ಯಕ್ಷರಾದ ಕೆ.ಎನ್ ಗಂಗಾಧರ ಆಳ್ವ, ನಿರ್ದೇಶಕರಾದ ಪದ್ಮನಾಭ ಬಿ, ಉಮಾವತಿ ಶೆಟ್ಟಿ, ಚಂದು ನಾಯ್ಕ, ಎನ್ ಶಿವಶಂಕರ್, ಶ್ರೀಧರ ಎನ್, ರಂಜಿತ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಕೆ.ಜಯಂತ ನಾಯಕ್ ಸ್ವಾಗತಿಸಿದರು. ನಿರ್ದೇಶಕರಾದ ಸುಬ್ರಾಯ ರಾಮ ಮಡಿವಾಳ್ ವಂದಿಸಿದರು. ನಿರ್ದೇಶಕರಾದ ಸುನಿಲ್ ಫ್ರಾನ್ಸಿಸ್ ಲೂಯಿಸ್ ಕಾರ್ಯಕ್ರಮ ಸಂಯೋಜಿಸಿದರು.











