Close Menu
    Top News

    ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಐದನೇ ವರ್ಷದ ಸಂಭ್ರಮಾಚರಣೆ

    May 21, 2026

    ಉಡುಪಿಯ ವೈಜ್ಞಾನಿಕ ಮುಕುಟಕ್ಕೆ ‘ಪ್ರೊ. ಯು.ಆರ್. ರಾವ್ ವಿಜ್ಞಾನ ಕೇಂದ್ರ’ದ ಗರಿ ಕ್ಯಾಂಪ್ಕೊ ಹಿಂದಿನ ಪ್ರಸ್ತಾವನೆಯ ಪ್ರತಿಫಲ

    May 21, 2026

    ಸಹಕಾರ ಕ್ಷೇತ್ರದಲ್ಲಿ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಮಾದರಿ ಕಾರ್ಯ

    May 20, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಉಡುಪಿಯ ವೈಜ್ಞಾನಿಕ ಮುಕುಟಕ್ಕೆ ‘ಪ್ರೊ. ಯು.ಆರ್. ರಾವ್ ವಿಜ್ಞಾನ ಕೇಂದ್ರ’ದ ಗರಿ ಕ್ಯಾಂಪ್ಕೊ ಹಿಂದಿನ ಪ್ರಸ್ತಾವನೆಯ ಪ್ರತಿಫಲ
    News

    ಉಡುಪಿಯ ವೈಜ್ಞಾನಿಕ ಮುಕುಟಕ್ಕೆ ‘ಪ್ರೊ. ಯು.ಆರ್. ರಾವ್ ವಿಜ್ಞಾನ ಕೇಂದ್ರ’ದ ಗರಿ ಕ್ಯಾಂಪ್ಕೊ ಹಿಂದಿನ ಪ್ರಸ್ತಾವನೆಯ ಪ್ರತಿಫಲ

    adminBy adminMay 21, 2026

    ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌ ಸತೀಶ್ಚಂದ್ರ ಬಣ್ಣನೆ

    ಮಂಗಳೂರು: ಕರಾವಳಿ ಭಾಗದ ಶೈಕ್ಷಣಿಕ ಹಾಗೂ ವೈಜ್ಞಾನಿಕ ಮುಕುಟಕ್ಕೆ ಹೊಸ ಗರಿಯಾಗಿ ಉಡುಪಿಯಲ್ಲಿ ಮುಂದಿನ ಆರು ತಿಂಗಳೊಳಗೆ ತಲೆ ಎತ್ತಲಿರುವ ‘ಪ್ರೊ. ಯು.ಆರ್. ರಾವ್ ಅತ್ಯಾಧುನಿಕ ವಿಜ್ಞಾನ ಕೇಂದ್ರ’ದ ನಿರ್ಮಾಣವನ್ನು ಕ್ಯಾಂಪ್ಕೊ ಅಧ್ಯಕ್ಷರಾದ ಎಸ್.ಆರ್. ಸತೀಶ್ಚಂದ್ರ ಅವರು ಸ್ವಾಗತಿಸಿದ್ದು, ಇದು ಇಡೀ ಕರಾವಳಿ ಪ್ರದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಬಣ್ಣಿಸಿದ್ದಾರೆ.

    https://chat.whatsapp.com/FCEnlTkAKCC0MGPhXtX4i4
    ಭಾರತದ ಹೆಮ್ಮೆಯ ಚಂದ್ರಯಾನ ಯೋಜನೆಯ ವಿಜ್ಞಾನಿಗಳನ್ನು ಗೌರವಿಸುವ ಹಾಗೂ ಬಾಹ್ಯಾಕಾಶ ವಿಜ್ಞಾನ ಸಂಶೋಧನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಉಡುಪಿ ಜಿಲ್ಲೆಯಲ್ಲಿ ‘ಇಸ್ರೋ’ ಪ್ರಯೋಗಾಲಯ ಘಟಕ ಸ್ಥಾಪಿಸಬೇಕೆಂದು ಕೋರಿ ಕ್ಯಾಂಪ್ಕೊ ಮಾಜಿ ಅಧ್ಯಕ್ಷರಾದ ಎ.ಕಿಶೋರ್ ಕುಮಾರ್ ಕೊಡ್ಗಿಯವರು 2023ರಲ್ಲಿಯೇ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ಎಸ್.‌ಆರ್‌ ಸತೀಶ್ಚಂದ್ರ ಸ್ಮರಿಸಿದ್ದಾರೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿಜ್ಞಾನಿಗಳ ಗಣನೀಯ ಕೊಡುಗೆಯನ್ನು ಆ ಪ್ರಸ್ತಾವನೆಯಲ್ಲಿ ಎತ್ತಿ ತೋರಿಸಲಾಗಿತ್ತು. ಅಲ್ಲದೆ, ಉಡುಪಿ ಮೂಲದವರೇ ಆದ ದೇಶದ ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ದಿ.ಪ್ರೊ. ಯು.ಆರ್. ರಾವ್ ಅವರ ಸ್ಮರಣಾರ್ಥ ಇಸ್ರೋ ಘಟಕವೊಂದರ ಅಗತ್ಯವನ್ನು ಅದರಲ್ಲಿ ಬಲವಾಗಿ ಪ್ರತಿಪಾದಿಸಲಾಗಿತ್ತು.
    ಸುಮಾರು 6.2 ಕೋಟಿ ರೂ. ವೆಚ್ಚದಲ್ಲಿ ಐದು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ‘ಏರೋ-ಸ್ಪೇಸ್ ಗ್ಯಾಲರಿ’ಯಂತಹ ಅದ್ಭುತ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ನೂತನ ವಿಜ್ಞಾನ ಕೇಂದ್ರವು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಯುವ ಸಂಶೋಧಕರಿಗೆ ವಿಜ್ಞಾನ, ನಾವೀನ್ಯತೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದತ್ತ ಒಲವು ಮೂಡಿಸಲು ದಾರಿದೀಪವಾಗಲಿದೆ. ಭವಿಷ್ಯದಲ್ಲಿ ಕರಾವಳಿ ಭಾಗದಲ್ಲಿ ಇಂತಹ ಮತ್ತಷ್ಟು ಉನ್ನತ ಮಟ್ಟದ ವೈಜ್ಞಾನಿಕ ಸಂಸ್ಥೆಗಳು ಸ್ಥಾಪನೆಯಾಗಲಿ ಎಂದು ಎಸ್.ಆರ್. ಸತೀಶ್ಚಂದ್ರ ಆಶಯ ವ್ಯಕ್ತಪಡಿಸಿದ್ದಾರೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

     

    ‘Prof. U.R. Rao Advanced Science Centre’ A. Kishore Kumar Kodgi Aero-Space Gallery Campco ISRO Pro.U.R Rao S R Sathishchandra
    Previous Articleಸಹಕಾರ ಕ್ಷೇತ್ರದಲ್ಲಿ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಮಾದರಿ ಕಾರ್ಯ
    Next Article ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಐದನೇ ವರ್ಷದ ಸಂಭ್ರಮಾಚರಣೆ

    Related Posts

    ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಐದನೇ ವರ್ಷದ ಸಂಭ್ರಮಾಚರಣೆ

    May 21, 2026

    ಸಹಕಾರ ಕ್ಷೇತ್ರದಲ್ಲಿ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಮಾದರಿ ಕಾರ್ಯ

    May 20, 2026

    ನಾಳೆ ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಐದನೇ ವರ್ಷಾಚರಣೆ

    May 19, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಐದನೇ ವರ್ಷದ ಸಂಭ್ರಮಾಚರಣೆ

    May 21, 2026

    ಉಡುಪಿಯ ವೈಜ್ಞಾನಿಕ ಮುಕುಟಕ್ಕೆ ‘ಪ್ರೊ. ಯು.ಆರ್. ರಾವ್ ವಿಜ್ಞಾನ ಕೇಂದ್ರ’ದ ಗರಿ ಕ್ಯಾಂಪ್ಕೊ ಹಿಂದಿನ ಪ್ರಸ್ತಾವನೆಯ ಪ್ರತಿಫಲ

    May 21, 2026

    ಸಹಕಾರ ಕ್ಷೇತ್ರದಲ್ಲಿ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಮಾದರಿ ಕಾರ್ಯ

    May 20, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.