ಮುಂಬೈ: ಬೋಧನೆ, ಸಂಶೋಧನೆ ಮತ್ತು ಶೈಕ್ಷಣಿಕ ನಾಯಕತ್ವದಲ್ಲಿ ಎರಡು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಪ್ರತಿಷ್ಠಿತ ಶಿಕ್ಷಣ ತಜ್ಞ ಡಾ.ಸುವಕಾಂತ ಮೊಹಾಂತಿ ಅವರನ್ನು ಪುಣೆಯ ವೈಕುಂಠ ಮೆಹ್ತಾ ರಾಷ್ಟ್ರೀಯ ಸಹಕಾರಿ ನಿರ್ವಹಣಾ ಸಂಸ್ಥೆಯ (VAMNICOM) ನಿರ್ದೇಶಕರಾಗಿ ನೇಮಿಸಲಾಗಿದೆ. ಡಾ.ಹೇಮಾ ಯಾದವ್ ಅವರ ಜಾಗದಲ್ಲಿ ಡಾ.ಮೊಹಾಂತಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಕೇಂದ್ರ ಸಹಕಾರ ಸಚಿವ ಅಮಿತ್ ಷಾ ನೇತೃತ್ವದಲ್ಲಿ ಸಹಕಾರ ಸಚಿವಾಲಯವು ಸಹಕಾರಿ ಶಿಕ್ಷಣ ಮತ್ತು ತರಬೇತಿಯ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿರುವ ಸಮಯದಲ್ಲೇ VAMNICOMನಲ್ಲಿ ಡಾ.ಮೊಹಾಂತಿ ಅವರ ನಾಯಕತ್ವವು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ರಾಷ್ಟ್ರೀಯ ಮಟ್ಟದ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪಿಸಲು ಸಂಸತ್ತಿನಲ್ಲಿ ಅಂಗೀಕಾರವಾದ ಮಸೂದೆ, ಜೊತೆಗೆ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್ ಆನಂದ್ (IRMA) ನ ಪ್ರಸ್ತಾವಿತ ಮೇಲ್ದರ್ಜೆಗೇರಿಸುವಿಕೆಯ ಈ ಸಮಯದಲ್ಲೇ ಡಾ.ಮೊಹಾಂತಿಯವರ ನೇಮಕಾತಿ ಮಹತ್ವ ಪಡೆದಿದೆ.
ವ್ಯಾಮ್ನಿಕಾಮ್‌ಗೆ ನಿಯೋಜನೆಗೊಳ್ಳುವ ಮೊದಲು ಮೊಹಾಂತಿಯವರು ಭುವನೇಶ್ವರದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT ವಿಶ್ವವಿದ್ಯಾಲಯ) ದಲ್ಲಿ ಮ್ಯಾನೇಜ್‌ಮೆಂಟ್ ಸ್ಕೂಲ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಪ್ರತಿಷ್ಠಿತ GRiSP ವಿದ್ಯಾರ್ಥಿವೇತನದ ಅಡಿಯಲ್ಲಿ ಅವರು UKಯ ರೀಡಿಂಗ್ ವಿಶ್ವವಿದ್ಯಾಲಯದಿಂದ ಅನ್ವಯಿಕ ಅರ್ಥಶಾಸ್ತ್ರ ಮತ್ತು ಮಾರ್ಕೆಟಿಂಗ್‌ನಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಡಾ.ಮೊಹಾಂತಿ, ಗ್ರಾಮೀಣ ಆರ್ಥಿಕತೆಯೊಂದಿಗಿನ ಅವರ ನಿಕಟ ಸಂಬಂಧ ಮತ್ತು IRMAನಲ್ಲಿನ ಅವರ ಅನುಭವ ಸಹಕಾರ ಕ್ಷೇತ್ರದ ಬೆಳವಣಿಗೆಯಲ್ಲಿ ನಿರೀಕ್ಷೆಗಿಂತ ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಡಾ.ಮೊಹಾಂತಿ ಈ ಹಿಂದೆ HDFC ಚೇರ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಮಾರ್ಕೆಟಿಂಗ್ ವಿಭಾಗದ ಅಧ್ಯಕ್ಷ ಮತ್ತು IRMAನಲ್ಲಿ ಅಸೋಸಿಯೇಟ್ ಡೀನ್ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com