ಶಿವಮೊಗ್ಗ: ನ್ಯಾಶನಲ್ ಸೆಂಟರ್ ಫಾರ್ ಕೋ ಆಪರೇಟಿವ್ ಎಜುಕೇಶನ್(ಎನ್‌ಸಿಸಿಇ), ತೋಟಗಾರಿಕಾ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಶಿಕಾರಿಪುರ, ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ ಸಂಘ ಶಿಕಾರಿಪುರ ಇವರ ಸಂಯುಕ್ತ ಆಶ್ರಯದಲ್ಲಿ ಶಿಕಾರಿಪುರ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ್ತು ಮಾರಾಟ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಎರಡು ದಿನಗಳ ನಾಯಕತ್ವ ಅಭಿವೃದ್ದಿ ತರಬೇತಿ ಹಾಗೂ ಒಂದು ದಿನದ ಅಧ್ಯಯನ ಪ್ರವಾಸ ಕಾರ್ಯಕ್ರಮ ಮಾರ್ಚ್ 22 ಮತ್ತು 23ರಂದು ಶಿಕಾರಿಪುರದ ದಿ.ಅರ್ಬನ್ ಬ್ಯಾಂಕ್‌ನ ರಜತ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
https://chat.whatsapp.com/EbVKVnWB6rlHT1mWtsgbch
ಮಾರ್ಚ್ 22ರಂದು ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕಾ ಮಹಾಮಂಡಳದ ಅಧ್ಯಕ್ಷ, ಸಹಕಾರ ರತ್ನ ಡಾ.ಬಿ.ಡಿ.ಭೂಕಾಂತ್ ಉದ್ಘಾಟಿಸಲಿದ್ದಾರೆ. ತೋಟಗಾರಿಕಾ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಅಧ್ಯಕ್ಷ ಸಂಗಪ್ಪ ಎಚ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಿವಮೊಗ್ಗ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್ ಕಲ್ಮನೆ, ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎಂ.ಬಿ ಚೆನ್ನವೀರಪ್ಪ, ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕರಾದ ಟಿ.ಶಿವಶಂಕರ್, ಡಿ.ಎಲ್ ಬಸವರಾಜ್, ಚಂದ್ರಶೇಖರ ಗೌಡ್ರು, ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ವೃತ್ತಿಪರ ನಿರ್ದೇಶಕ ಎಚ್.ಎಸ್ ರವೀಂದ್ರ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಹಣಕಾಸು ಮತ್ತು ವ್ಯಾಪಾರ ಅಭಿವೃದ್ಧಿ ಯೋಜನೆ, ಆಧುನಿಕ ಕೃಷಿ ಪದ್ಧತಿ, ಆಧುನಿಕ ಹೈನುಗಾರಿಕೆ ಪದ್ಧತಿ ಈ ವಿಷಯಗಳಲ್ಲಿ ಉಪನ್ಯಾಸ ನಡೆಯಲಿದೆ.
ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಉಪಾಧ್ಯಕ್ಷೆ ಶಾಂತಲಾ ಭೂಕಾಂತ್, ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ನಿರ್ದೇಶಕರಾದ ಮಂಗಳ ವಿಶ್ವೇಶ್ವರಯ್ಯ, ಕವಿತಾ ಸುರೇಶ್, ಶಶಿಕಲಾ ರುದ್ರೇಶ್, ಶಿವಮ್ಮ ಬಸವರಾಜಪ್ಪ, ಕರ್ನಾಟಕ ರಾಜ್ಯ ಚಲನಚಿತ್ರ & ಲಲಿತಕಲಾ ಮಹಾಮಂಡಳ ನಿರ್ದೇಶಕರಾದ ಮೀನಾಕ್ಷಿ ಚಂದ್ರಪ್ಪ, ಲಲಿತಮ್ಮ ಶಿವಪ್ಪ, ಕರ್ನಾಟಕ ರಾಜ್ಯ ಪರಿಸರ, ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಸಿ.ಲೋಕೇಶ್ವರ, ಶಿವಮೊಗ್ಗ ಜಿಲ್ಲಾ ಸಹಕಾರಿ ಮಾರಾಟ ಒಕ್ಕೂಟದ ಅಧ್ಯಕ್ಷ ಉಂಬೈಬೈಲು ಮೋಹನ್, ಟಿ.ಎ.ಪಿ.ಸಿ.ಎಂ.ಎಸ್, ಶಿಕಾರಿಪುರ ಅಧ್ಯಕ್ಷ ಸುಧೀರ್, ಶಿಕಾರಿಪುರ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಲೋಹಿತ್ ಕುಮಾರ್, ಶಿಕಾರಿಪುರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮಲ್ಲಣ್ಣಾರ್ಯ ಹೊನ್ನಶೆಟ್ಟರ್, ಮ್ಯಾಮ್ಕೋಸ್ ಶಿವಮೊಗ್ಗ ನಿರ್ದೇಶಕ ವೀರೇಶ್, ಶಿವಮೊಗ್ಗ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸತೀಶ್, ಶಿವಮೊಗ್ಗ ಜಿಲ್ಲಾ ಸಹಕಾರಿ ಮಾರಾಟ ಒಕ್ಕೂಟದ ನಿರ್ದೇಶಕರಾದ ಎಂ.ನಾಗರಾಜಸ್ವಾಮಿ, ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸರಬರಾಜು ಮಾರಾಟ ಸಹಕಾರ ಸಂಘದ ನಿರ್ದೇಶಕರಾದ ಬಿ.ಕೆ. ಗುರುರಾಜ್, ಮೀನಾಕ್ಷಿ ಬಸವರಾಜ್, ಲತಾ ರವಿಕುಮಾರ್, ಶಿವಮೊಗ್ಗ ಹಾಪ್‌ಕಾಮ್ಸ್ ನಿರ್ದೇಶಕಿ ಶಾರದಮ್ಮ ನರಸಿಂಹಮೂರ್ತಿ, ಶಿವಮೊಗ್ಗ ಜಿಲ್ಲಾ ಸಹಕಾರ ಮಾರಾಟ ಒಕ್ಕೂಟದ ನಿರ್ದೇಶಕರಾದ ಚನ್ನಬಸಪ್ಪ, ಮೇಘರಾಜ್, ರುದ್ರಗೌಡ್ರು, ಶಿಕಾರಿಪುರ ಶ್ರೀ ಬಸವೇಶ್ವರ ಸಹಕಾರ ಒಕ್ಕೂಟದ ನಿರ್ದೇಶಕಿ ಶಶಿಕಲಾ ಮಂಜಪ್ಪ, ಶಿಕಾರಿಪುರ ತೋಟಗಾರಿಕಾ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಉಪಾಧ್ಯಕ್ಷ ಪಿ.ದೊಡ್ಡಪ್ಪ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಾರ್ಚ್ 23ರಂದು ಮಧ್ಯಾಹ್ನ 3ಕ್ಕೆ ಸಮಾರೋಪ ನಡೆಯಲಿದ್ದು, ಶಿಕಾರಿಪುರ ಶ್ರೀ ಬಸವೇಶ್ವರ ಸಹಕಾರ ಒಕ್ಕೂಟದ ಅಧ್ಯಕ್ಷ ಟಿ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಅಗಡಿ ಅಶೋಕ್ ಸಮಾರೋಪ ಭಾಷಣ ಮಾಡಲಿದ್ದಾರೆ. ಸಾಗರ ಉಪವಿಭಾಗ ಸಹಾಕಾರ ಸಂಘಗಳ ಸಹಾಯಕ ನಿಬಂಧಕ ಸತೀಶ್ ಕುಮಾರ್, ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ.ನಾಗರಾಜ, ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘದ ಉಪಾಧ್ಯಕ್ಷ ಪರಶುರಾಮ ಚೌಟಗಿ, ಕರ್ನಾಟಕ ರಾಜ್ಯ ಪರಿಸರ, ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘದ ಉಪಾದ್ಯಕ್ಷ ದೇವರಾಜ್ ಬಿ.ಸಿ., ಕರ್ನಾಟಕ ರಾಜ್ಯ ಚಲನಚಿತ್ರ & ಲಲಿತಕಲಾ ಮಹಾಮಂಡಳ ನಿರ್ದೇಶಕ ಟಿ.ಬಿ ತೀರ್ಥಪ್ರಸನ್ನ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಮಮತಾ ಚಂದ್ರಕುಮಾರ್, ಶಿವಮೊಗ್ಗ ಜಿಲ್ಲಾ ಸಹಕಾರ ಮಾರಾಟ ಒಕ್ಕೂಟದ ಉಪಾಧ್ಯಕ್ಷ ಸಿ.ಪಿ ಹೆಗ್ಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com