ವರ್ಗೀಸ್ ಕುರಿಯನ್ ಬಳಿಕ ಈ ಪ್ರಶಸ್ತಿ ಪಡೆದ ಎರಡನೇ ಭಾರತೀಯನೆಂಬ ಹೆಗ್ಗಳಿಕೆ
ನವದೆಹಲಿ: ಭಾರತೀಯ ರೈತರ ರಸಗೊಬ್ಬರ ಸಹಕಾರಿ ಲಿಮಿಟೆಡ್ನ (ಇಫ್ಕೋ) ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಯು.ಎಸ್.ಅವಸ್ಥಿ ಅವರಿಗೆ ಮಂಗಳವಾರ ಪ್ರಸಕ್ತ ಸಾಲಿನ ಐಸಿಎ(ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟ)ದ ಪ್ರತಿಷ್ಠಿತ ರಾಕ್‌ಡೇಲ್ ಪಯೋನಿಯರ್ಸ್ ಪುರಸ್ಕಾರ ಪ್ರದಾನ ಮಾಡಲಾಯಿತು.
https://chat.whatsapp.com/Ge11n7QCiMj5QyPvCc0H19
ದೆಹಲಿಯಲ್ಲಿ ನಡೆಯುತ್ತಿರುವ ಐಸಿಎ ಸಮಾರಂಭದಲ್ಲಿ ಈ ಪುರಸ್ಕಾರ ಪ್ರದಾನ ಮಾಡಲಾಯಿತು. 2000ನೇ ಇಸವಿಯಲ್ಲಿ ಈ ಪುರಸ್ಕಾರ ನೀಡುವುದನ್ನು ಆರಂಭಿಸಲಾಗಿದ್ದು, ಇದು ಸಹಕಾರಿ ವಲಯದಲ್ಲಿ ನೀಡುತ್ತಿರುವ ಉತ್ಕೃಷ್ಟ ಸೇವೆಗೆ ಸಹಕಾರಿ ಸಾಧಕ ವ್ಯಕ್ತಿ ಅಥವಾ ಸಂಸ್ಥೆಗೆ ಐಸಿಎ ನೀಡುತ್ತಿರುವ ಅತ್ಯುನ್ನತ ಪುರಸ್ಕಾರವಾಗಿದೆ. ಡಾ.ಅವಸ್ಥಿ ಈ ಪುರಸ್ಕಾರ ಪಡೆಯುತ್ತಿರುವ ಎರಡನೇ ಭಾರತೀಯರಾಗಿದ್ದು, 2001ರಲ್ಲಿ ಡಾ.ವರ್ಗೀಸ್ ಕುರಿಯನ್ ಈ ಪುರಸ್ಕಾರ ಪಡೆದಿದ್ದ ಮೊದಲ ಭಾರತೀಯ ಎನಿಸಿದ್ದರು.
ಐಸಿಎ ಅಧ್ಯಕ್ಷ ಆರಿಯಲ್ ಗ್ವಾರ್ಕೋ ಡಾ.ಅವಸ್ಥಿ ಅವರಿಗೆ ಪುರಸ್ಕಾರ ಪ್ರದಾನ ಮಾಡಿದರು. ಇಫ್ಕೋ ಆಶ್ರಯದಲ್ಲಿ ನವದೆಹಲಿಯಲ್ಲಿ ಐಸಿಎಯ ಸಾಮಾನ್ಯ ಸಭೆ ಮತ್ತು ಜಾಗತಿಕ ಸಹಕಾರ ಅಧಿವೇಶನ ನಡೆಯುತ್ತಿದ್ದು ನ.30ರಂದು ಕೊನೆಗೊಳ್ಳಲಿದೆ.
ಡಾ.ಅವಸ್ಥಿ ಅವರು ವಿಶೇಷ ರಾಸಾಯನಿಕ ಇಂಜಿನಿಯರ್ ಆಗಿದ್ದು, 1976ರಲ್ಲಿ ಇಫ್ಕೋಗೆ ಸೇರಿದ್ದರು. ಆ ಬಳಿಕ ಹಂತಹಂತವಾಗಿ ಉನ್ನತಿ ಸಾಧಿಸುತ್ತ ಬಂದ ಇಫ್ಕೋ 292 ಶೇಕಡಾದಿಂದ 688 ಶೇಕಡಾವರೆಗೆ ನಿವ್ವಳ ಮೌಲ್ಯ ಏರಿಕೆಯಾಗಿತ್ತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com