ಜನಸಂಖ್ಯೆಯ 30 ಶೇಕಡಾ ಪ್ರಮಾಣ ಸಹಕಾರ ಸಂಘಗಳ ಸದಸ್ಯರು!
ದೇಶ ಪುಟ್ಟದಾದರೂ ಸಹಕಾರ ಕ್ಷೇತ್ರದ ಬೆಳವಣಿಗೆ ಮಾದರಿ
ಮಂಗಳೂರು: ವಿಶ್ವ ಭೂಪಟದಲ್ಲಿ ಆ ದೇಶ ಪುಟ್ಟದಾಗಿದ್ದು ಕರ್ನಾಟಕದಷ್ಟೂ ಜನಸಂಖ್ಯೆಯನ್ನು ಹೊಂದಿಲ್ಲ. ಆದರೆ ಸಹಕಾರ ಕ್ಷೇತ್ರಕ್ಕೆ ಆ ದೇಶದ ಕೊಡುಗೆ ಅದ್ವಿತೀಯವಾದುದು. ಕೇವಲ 52 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಆ ದೇಶದ ಜನ ತಮ್ಮ ದೇಶದ ಜಿಡಿಪಿಗೆ ಕೊಡುವ ಕೊಡುಗೆ ಆ ದೇಶದ ಒಟ್ಟು ಜಿಡಿಪಿಯ ಐದನೇ ಒಂದು ಪಾಲು. ಅಂದರೆ ಶೇ.20ರಷ್ಟು.
ಯಾವುದು ಆ ದೇಶ ಎಂಬ ಕುತೂಹಲ ಸಹಜ. ಉತ್ತರ ನ್ಯೂಜಿಲೆಂಡ್. ಒಂದು ಸಂಶೋಧನೆಯ ಪ್ರಕಾರ ನ್ಯೂಜಿಲೆಂಡ್‌ಗೆ ಆ ದೇಶದ ಸಹಕಾರ ಕ್ಷೇತ್ರದಿಂದ ಶೇ.18-20ರಷ್ಟು ಕೊಡುಗೆ ಲಭಿಸುತ್ತಿದ್ದು ಇದು ವಿಶ್ವದಲ್ಲೇ ಅತಿ ಹೆಚ್ಚು. ನ್ಯೂಜಿಲೆಂಡ್‌ನ ಒಟ್ಟು ಜನಸಂಖ್ಯೆಯ ಶೇ.30ರಷ್ಟು (ಸರಿಸುಮಾರು 1.50 ಮಿಲಿಯ) ಜನ ಸಹಕಾರಿ ಕ್ಷೇತ್ರದ ಸದಸ್ಯರಾಗಿದ್ದು, ಸುಮಾರು 50,000 ಉದ್ಯೋಗಿಗಳು ಇಲ್ಲಿನ ಸಹಕಾರಿ ಕ್ಷೇತ್ರದ ಉದ್ಯೋಗಿಗಳಿದ್ದಾರೆ.
https://chat.whatsapp.com/Ge11n7QCiMj5QyPvCc0H19
ಒಂದು ಅಂಕಿ ಆಂಶದ ಪ್ರಕಾರ ನ್ಯೂಜಿಲೆಂಡ್‌ನ ಅಗ್ರ 30 ಕೋ ಆಪರೇಟಿವ್ ಸೊಸೈಟಿಗಳಿಂದಲೇ ದೇಶದ ಜಿಡಿಪಿಯ ಶೇ.13ರಷ್ಟು ಕೊಡುಗೆ ಸಿಗುತ್ತಿದೆ. ಇವೇ 30 ಸೊಸೈಟಿಗಳು ದೇಶದ 41,000ಕ್ಕೂ ಅಧಿಕ ಜನರಿಗೆ ಉದ್ಯೋಗ ಒದಗಿಸುತ್ತಿವೆ.
ನ್ಯೂಜಿಲೆಂಡ್‌ನಲ್ಲಿ ಸಹಕಾರಿ ಕ್ಷೇತ್ರ ಬೆಳೆದುಬಂದ ರೀತಿ:
1846: ನ್ಯೂಜಿಲೆಂಡ್‌ನಿಂದ ಮೊದಲ ಡೈರಿ ಉತ್ಪನ್ನ ರಫ್ತು
1864: ನ್ಯೂಜಿಲೆಂಡ್‌ನ ಮೊದಲ ಕೋ ಆಪರೇಟಿವ್ ಸೊಸೈಟಿ(ಬಿಲ್ಡಿಂಗ್ ಸೊಸೈಟಿ) -ನೆಲ್ಸನ್ ಬಿಲ್ಡಿಂಗ್ ಸೊಸೈಟಿ ಕಾರ್ಯಾರಂಭ
1869: ಸೌತ್‌ಲ್ಯಾಂಡ್ ಬಿಲ್ಡಿಂಗ್, ಲ್ಯಾಂಡ್ ಮತ್ತು ಇನ್‌ವೆಸ್ಟ್‌ಮೆಂಟ್ ಸೊಸೈಟಿ (ಈಗಿನ ಎಸ್‌ಬಿಎಸ್ ಬ್ಯಾಂಕ್) ಆರಂಭ
1871: ಒಟಾಗೊದಲ್ಲಿ ನ್ಯೂಜಿಲೆಂಡ್‌ನ ಮೊದಲ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭ
1908: ಕೈಗಾರಿಕಾ ಮತ್ತು ಪ್ರಾವಿಡೆಂಟ್ ಸೊಸೈಟಿ ಕಾಯ್ದೆ ಅಂಗೀಕಾರ
1920-1940: 600ರಷ್ಟು ಹಾಲು ಉತ್ಪಾದಕ ಕಂಪನಿಗಳು, ಈ ಪೈಕಿ ಶೇ.85ರಷ್ಟು ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ್ದು, ಮತ್ತು ಉಳಿದ ಕ್ಷೇತ್ರಗಳಲ್ಲೂ ಸಹಕಾರಿಗಳ ಸಹಭಾಗಿತ್ವದಲ್ಲಿ ಸಂಘಗಳ ಸ್ಥಾಪನೆ(ಉದಾಹರಣೆ: ವೈದ್ಯಕೀಯ, ಆಹಾರ, ಮಾರುಕಟ್ಟೆ, ತೋಟಗಾರಿಕೆ, ವಿದ್ಯುತ್, ಸಹಕಾರ ಬ್ಯಾಂಕ್ ಇತ್ಯಾದಿ)
1940-1980: ಈ 40 ವರ್ಷಗಳ ಅವಧಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ವಿವಿಧ ವಲಯಗಳ ಸಹಕಾರ ಸಂಘಗಳ ಸ್ಥಾಪನೆ
1984: ನ್ಯೂಜಿಲೆಂಡ್ ಕೃಷಿ ಸಹಕಾರ ಸಂಘಗಳ ಸಂಘ(ಈಗಿನ ಕೋಆಪರೇಟಿವ್ ಬ್ಯುಸಿನೆಸ್ ನ್ಯೂಜಿಲೆಂಡ್) ಆರಂಭ
1996: ದಿ ಕೋ ಆಪರೇಟಿವ್ ಕಂಪನಿ ಆಕ್ಟ್ ಅಂಗೀಕಾರ
2012: ಅಂತಾರಾಷ್ಟ್ರೀಯ ಸಹಕಾರ ವರ್ಷದ ಅಂಗವಾಗಿ ನಡೆಸಿದ ಸಮೀಕ್ಷೆಯಲ್ಲಿ ವಿಶ್ವಸಂಸ್ಥೆಯು ನ್ಯೂಜಿಲೆಂಡ್ ಜಾಗತಿಕ ಸಹಕಾರ ವಲಯದಲ್ಲೇ ಅತಿ ಹೆಚ್ಚಿನ ಸಹಕಾರ ಆರ್ಥಿಕತೆ ಎಂದು ಘೋಷಿಸಿತು
2017: ನ್ಯೂಜಿಲೆಂಡ್‌ನಲ್ಲಿ ಮೊದಲ ಸಲ ಸಹಕಾರಿ ಆರ್ಥಿಕತೆಯನ್ನು ಪ್ರಕಟಿಸಲಾಯಿತು
2020: ವ್ಯವಹಾರ ಶಿಕ್ಷಣದಲ್ಲಿ ಸಹಕಾರಿ ಶಿಕ್ಷಣವನ್ನು ಸಂಯೋಜಿಸಲು ಕೋಆಪರೇಟಿವ್ ಬ್ಯುಸಿನೆಸ್ ನ್ಯೂಜಿಲೆಂಡ್ ಸಂಸ್ಥೆಯು ಮಾಸ್ಸಿ ವಿಶ್ವವಿದ್ಯಾಲಯದ ಜೊತೆ ಒಪ್ಪಂದ ಮಾಡಿಕೊಂಡಿದೆ.
2020ರ ಅಂಕಿ ಅಂಶ ಪ್ರಕಾರ ನ್ಯೂಜಿಲೆಂಡ್‌ನಲ್ಲಿ ಅಗ್ರ 10 ಸಹಕಾರ ಸಂಘಗಳ ಆದಾಯ(ಮಿಲಿಯನ್‌ಗಳಲ್ಲಿ)
1. ಫಾಂಟೆರಾ ಕೋ ಆಪರೇಟಿವ್ ಗ್ರೂಪ್ – 20,282
2. ಫುಡ್‌ಸ್ಟಫ್ಸ್ –ನಾರ್ತ್ ಐಲ್ಯಾಂಡ್ – 3,543
3. ಝೆಸ್ಪ್ರಿ – 3,341
4. ಫುಡ್‌ಸ್ಟಫ್ಸ್ –ಸೌತ್ ಐಲ್ಯಾಂಡ್ – 3,188
5. ಅಲಾಯನ್ಸ್ ಗ್ರೂಪ್ – 1,834
6. ಸಿಲ್ವರ್ ಫರ್ನ್ ಫಾರ್ಮ್ಸ್ – 1,249
7. ಸದರ್ನ್ ಕ್ರಾಸ್ ಮೆಡಿಕಲ್ ಕೇರ್ ಸೊಸೈಟಿ – 1,138
8. ಫಾರ್ಮ್‌ಲ್ಯಾಂಡ್ಸ್ ಕೋ ಆಪರೇಟಿವ್ ಸೊಸೈಟಿ -1,105
9. ಬ್ಯಾಲೆನ್ಸ್ ಆಗ್ರಿ-ನ್ಯೂಟ್ರಿಶನ್ಸ್ -891
10. ರಾವೆನ್ಸ್‌ಡೌನ್ ಫರ್ಟಿಲೈಸರ್ಸ್ ಕೋ ಆಪರೇಟಿವ್ -750
2020ರ ಅಂಕಿ ಅಂಶ ಪ್ರಕಾರ ನ್ಯೂಜಿಲೆಂಡ್‌ನಲ್ಲಿ ಅಗ್ರ 10 ಸಹಕಾರ ಸಂಘಗಳಲ್ಲಿರುವ ಉದ್ಯೋಗಿಗಳು
1. ಫಾಂಟೆರಾ ಕೋ ಆಪರೇಟಿವ್ ಗ್ರೂಪ್ – 19,593
2. ಅಲಾಯನ್ಸ್ ಗ್ರೂಪ್ -5,000
3. ಈಸ್ಟ್‌ಪ್ಯಾಕ್ -3,600
4. ಫುಡ್‌ಸ್ಟಫ್ಸ್ –ನಾರ್ತ್ ಐಲ್ಯಾಂಡ್ – 1,197
5. ಫುಡ್‌ಸ್ಟಫ್ಸ್ –ಸೌತ್ ಐಲ್ಯಾಂಡ್ – 1,867
6. ಫಾರ್ಮ್‌ಲ್ಯಾಂಡ್ಸ್ ಕೋ ಆಪರೇಟಿವ್ ಸೊಸೈಟಿ -1,400
7. ಬ್ಯಾಲೆನ್ಸ್ ಆಗ್ರಿ-ನ್ಯೂಟ್ರಿಶನ್ಸ್ -819
8. ಲೈವ್‌ಸ್ಟಾಕ್ ಇಂಪ್ರೂವ್‌ಮೆಂಟ್ ಕಾರ್ಪೊರೇಶನ್ – 806
9. ಎಫ್‌ಎಂಜಿ -750
10. ರಾವೆನ್ಸ್‌ಡೌನ್ ಫರ್ಟಿಲೈಸರ್ಸ್ ಕೋ ಆಪರೇಟಿವ್ -650
2020ರ ಅಂಕಿ ಅಂಶ ಪ್ರಕಾರ ನ್ಯೂಜಿಲೆಂಡ್‌ನಲ್ಲಿ ಅಗ್ರ 10 ಸಹಕಾರ ಸಂಘಗಳಲ್ಲಿರುವ ಸದಸ್ಯರು
1. ಸದರ್ನ್ ಕ್ರಾಸ್ ಮೆಡಿಕಲ್ ಕೇರ್ ಸೊಸೈಟಿ – 8,79,198
2. ದಿ ಕೋ ಆಪರೇಟಿವ್ ಬ್ಯಾಂಕ್ – 1,67,000
3. ಯೂನಿಯನ್ ಬೆನೆಫಿಟ್ಸ್ ಮೆಡಿಕಲ್ ಸೊಸೈಟಿ – 91,909
4. ಸೌತ್‌ಲ್ಯಾಂಡ್ ಬಿಲ್ಡಿಂಗ್ ಸೊಸೈಟಿ -78,928
5. ಎಫ್‌ಎಂಜಿ -75,000
6. ಫಾರ್ಮ್‌ಲ್ಯಾಂಡ್ಸ್ ಕೋ ಆಪರೇಟಿವ್ ಸೊಸೈಟಿ -72,000
7. ಮೆಡಿಕಲ್ ಅಶೂರೆನ್ಸ್ ಸೊಸೈಟಿ -37,165
8. ರಾವೆನ್ಸ್‌ಡೌನ್ ಫರ್ಟಿಲೈಸರ್ಸ್ ಕೋ ಆಪರೇಟಿವ್ -23,000
9. ಸಿಲ್ವರ್ ಫರ್ನ್ ಫರ್ಮ್ಸ್ -21,016
10. ಇಎ ನೆಟ್‌ವರ್ಕ್ಸ್ – 18,000
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com