ಹಿರೇಕೆರೂರು: ಶ್ರೀ ರಾಮಾಯಣ ಮಹಾಕಾವ್ಯ ಬರೆದ ವಾಲ್ಮೀಕಿ ರತ್ನಾಕರ ಎಂಬ ಹೆಸರಿನಿಂದ ಕಾಡಿನ ದಾರಿಯಲ್ಲಿ ಬರುವವರನ್ನು ಅಡ್ಡಗಟ್ಟಿ ಬೆದರಿಸುತ್ತಿದ್ದ. ಅಂಥ ರತ್ನಾಕರನಿಗೆ ಸಪ್ತ ಋಷಿಗಳ ದರುಶನವಾಗಿ ಮನಸ್ಸು ಪರಿವರ್ತನೆಯಾಗಿ ಮಹಾಮಾನವತಾವಾದಿಯಾಗಲು ಹಂಬಲಿಸಿ ತಪಸ್ಸು ಕೈಗೊಂಡು ತಪಸ್ಸಿನಲ್ಲಿಯೇ ಲೀನವಾದಾಗ ಅವರ ಸುತ್ತಲೂ ಹುತ್ತ ಬೆಳೆದು ಮತ್ತೆ ಸಪ್ತ ಋಷಿಗಳಿಂದಲೇ ತಪಸ್ಸಿನಿಂದ ಜಾಗೃತನಾಗಿ ಇಂದ್ರನಿಂದ ಪ್ರೇರೇಪಿತನಾಗಿ ರಾಮಾಯಣ ಮಹಾಕಾವ್ಯ ಮಹರ್ಷಿ ವಾಲ್ಮೀಕಿಯಾದ. ಮನುಷ್ಯ ಜೀವನದಲ್ಲಿ ತಪ್ಪು ಮಾಡುವುದು ಸಹಜ, ಮುಂದೆ ಅದನ್ನು ತಿದ್ದಿಕೊಂಡು ಪರಿವರ್ತನೆಯಾಗಿ ಮಹಾ ಮಾನವನಾಗುವುದೇ ಮನುಷ್ಯನ ಧ್ಯೇಯವಾಗಬೇಕು ಎಂಬುದನ್ನು ಮಹಾತಪಸ್ವಿ ವಾಲ್ಮೀಕಿ ಜೀವನದಿಂದ ನಾವೆಲ್ಲರೂ ಕಲಿಯಬೇಕು ಎಂದು ಇಲ್ಲಿನ ಸಹಕಾರಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್.ವೀರಭದ್ರಯ್ಯ ಹೇಳಿದರು.
https://chat.whatsapp.com/Ge11n7QCiMj5QyPvCc0H19
ಹಿರೇಕೆರೂರು ಸಹಕಾರಿ ವಿದ್ಯಾಸಂಸ್ಥೆಯ ಬಿ.ಆರ್.ತಂಬಾಕದ ಪ್ರಥಮದರ್ಜೆ ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಎಸ್.ಎಸ್.ಪಾಟೀಲ ಪಿಹೆಚ್.ಡಿ ಸಂಶೋಧನಾ ಕೇಂದ್ರದಲ್ಲಿ ಗುರುವಾರ ಮಹಾತಪಸ್ವಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ರಾಮಚಂದ್ರ, ಸೀತೆ, ಲಕ್ಷ್ಮಣ, ರಾವಣ, ಕುಂಭಕರ್ಣ, ಶೂರ್ಪನಖಿ ಈ ಮಹಾಕಾವ್ಯದಲ್ಲಿ ಪ್ರತಿಯೊಂದು ಪಾತ್ರಗಳೂ ಆದರ್ಶವನ್ನು ಎತ್ತಿ ಹಿಡಿಯುತ್ತವೆ. ಹೀಗೆ ಬೇಡನಾಗಿದ್ದವನು ಭಾರತೀಯ ಸಂಸ್ಕೃತಿಗೆ ಒಂದು ಸಾಂಸ್ಕೃತಿಕ ಮಹಾಕಾವ್ಯ ನೀಡಿ ಪುನೀತರಾಗಿದ್ದಾರೆ. ಅಂತವರ ಬದುಕು ನಮ್ಮೆಲ್ಲರಿಗೂ ಬದುಕಿನಲ್ಲಿ ಅಂಥ ಮಹತ್ವದ ಪರಿವರ್ತನೆ ತರಲಿ ಎಂದು ಅಭಿಪ್ರಾಯಪಟ್ಟರು.
ಹಿರಿಯ ಉಪನ್ಯಾಸಕರಾದ ಸಿ.ಆರ್.ದೂದೀಹಳ್ಳಿ, ಪಿ.ಎಂ.ವಿಜಯಕುಮಾರ, ಪ್ರವೀಣ ಕೂರಗೆರ, ಕಿರಣ ಬಾಗಲರ, ಪ್ರಶಾಂತ ಬಿ.ಎಂ, ಮಲ್ಲಪ್ಪ ಪತ್ತಾರ, ಲಿಂಗರಾಜ ಹಲವಾಲ, ವಿರೂಪಾಕ್ಷಪ್ಪ ಎಸ್.ಕೆ, ಸತೀಶ ಲಮಾಣಿ, ಮಂಜು ನಾಯ್ಕ, ಸುನಿತಾ ದಾಸನಕೊಪ್ಪ, ಎಂ.ವ್ಹಿ.ಬಾಳಿಕಾಯಿ, ಮಂಜುಳಾ ಕಣಗೋಟಗಿ, ಸುರೇಶ ನಾಯ್ಕ ಬಿ. ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com