Author: admin

ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕ್‌ ಲಿಮಿಟೆಡ್‌ ಐವತ್ತನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಂಡಿರುವ ಸ್ವಚ್ಛ ಭಾರತ್‌ ಕಾರ್ಯಕ್ರಮವು ಅ.19ರಂದು ಬ್ಯಾಂಕಿನ ಕಾರ್ಕಳ ಮತ್ತು ಉಡುಪಿ ಶಾಖೆಗಳಲ್ಲಿ ನಡೆಯಲಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ವಿಶ್ವಕರ್ಮ ಸಹಕಾರ ಬ್ಯಾಂಕಿನ ಈ ಎರಡು ಶಾಖೆಗಳ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದ್ದು ಬ್ಯಾಂಕಿನ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಉಡುಪಿ ಶಾಖೆಯ ವತಿಯಿಂದ ಉಡುಪಿ ಶ್ರೀಕೃಷ್ಣ ಮಠದ ಪರಿಸರದಲ್ಲಿ ಬೆಳಗ್ಗೆ 7.30ರಿಂದ 9ರ ತನಕ ಸ್ವಚ್ಛತಾ ಕಾರ್ಯ ನಡೆಯಲಿದೆ. ಕಾರ್ಕಳ ಶಾಖೆಯ ವತಿಯಿಂದ ಕೃಕಳ ಅನಂತಶಯನ ರಸ್ತೆಯಲ್ಲಿ ಬೆಳಗ್ಗೆ 7.30ರಿಂದ 9ರ ತನಕ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದು ವಿಶ್ವಕರ್ಮ ಬ್ಯಾಂಕಿನ ಪ್ರಕಟಣೆ ತಿಳಿಸಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಕೆ.ಜಿ.ಗೆ 351 ರೂ.ಗಿಂತ ಕಡಿಮೆ ಮೌಲ್ಯದ ಉತ್ಪನ್ನಕ್ಕೆ ನಿಷೇಧ ಮಂಗಳೂರು: ವಿದೇಶಗಳಿಂದ ಹುರಿದ ರೂಪದಲ್ಲಿ ಕನಿಷ್ಠ ದರದಲ್ಲಿ ಅಡಕೆ ಆಮದಾಗುತ್ತಿದ್ದ ಹಿನ್ನೆಲೆಯಲ್ಲಿ ದೇಶದ ಆಂತರಿಕ ಮಾರುಕಟ್ಟೆಯಲ್ಲಿ ಅಡಕೆ ದರ ಇಳಿಕೆಯಾಗಿತ್ತು. ಇದನ್ನು ತಪ್ಪಿಸಲು ಸರ್ಕಾರ ಆಮದು ಬೆಲೆ ಕೆ.ಜಿ.ಗೆ 351 ರೂ. ನಿಗದಿಪಡಿಸಿ ಬೆಲೆ ಇಳಿಕೆಗೆ ಕಡಿವಾಣ ಹಾಕಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ಈ ಕುರಿತು ಅಧಿಸೂಚನೆ ಹೊರಡಿಸಿರುವ ವಿದೇಶಿ ವ್ಯಾಪಾರ ನಿರ್ದೇಶನಾಲಯ, 351 ರೂ.ಗಳಿಗಿಂತ ಕಡಿಮೆ ಸಿಐಎಫ್ ಮೌಲ್ಯ ಹೊಂದಿರುವ ಹುರಿದ ಅಡಕೆ ಆಮದನ್ನು ನಿಷೇಧಿಸಲಾಗಿದೆ. ಆದರೆ ಈ ನಿಷೇಧ ವಿಶೇಷ ಆರ್ಥಿಕ ವಲಯದಲ್ಲಿರುವ ಶೇ.100 ಪ್ರತಿಶತ ರಫ್ತು ಆಧಾರಿತ ಘಟಕಗಳ ಆಮದುಗಳಿಗೆ ಮತ್ತು ಮುಂಗಡ ಅಧಿಕಾರ ಯೋಜನೆಯಡಿ ಆಮದು ಮಾಡಿಕೊಳ್ಳುವವರಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ. ವಿದೇಶದಿಂದ ಕಡಿಮೆ ಬೆಲೆಗೆ ಆಮದಾಗುತ್ತಿದ್ದ ಅಡಕೆ ರಾಜ್ಯದ ಬೆಳೆಗಾರರನ್ನು ಕಂಗೆಡಿಸಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಭೀತಿ ಎದುರಾಗಿತ್ತು. ಇದರಿಂದ ಆಮದು ಬೆಲೆ ಹೆಚ್ಚಿಸುವಂತೆ ಕ್ಯಾಂಪ್ಕೊ ಸಹಿತ ಹಲವು ಸಂಘಟನೆಗಳು ಒತ್ತಾಯಿಸಿದ್ದವು. ಇದೀಗ ಕೇಂದ್ರದ ಈ…

Read More

ಮಂಗಳೂರು: ಇಲ್ಲಿನ ಜೈಲು ರಸ್ತೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕೋಳಿ ಸಾಕಣೆದಾರರ ವಿವಿಧೋದ್ದೇಶ ಸಹಕಾರಿ ಸಂಘದ 2025ರಿಂದ 2030ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ದಯಾನಂದ ಅಡ್ಯಾರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. https://chat.whatsapp.com/JVAtKKe2M19AFO3W5629ZS?mode=ems_copy_t ಸಂಘದ ನಿರ್ದೇಶಕರ ಚುನಾವಣೆಯು ಇತ್ತೀಚೆಗೆ ನಡೆದಿದ್ದು ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಸಹಕಾರ ಭಾರತಿ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅನಂತರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ದಯಾನಂದ ಅಡ್ಯಾ‌ರ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಜಯಪ್ರಕಾಶ್ ಕೆ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಗಣೇಶ್ ಕೆ., ಅರುಣ್ ಕುಮಾರ್, ಪಾರ್ವತಿ ಭೋಜರಾಜ್, ಸುಜಯ ಹೇಮಚಂದ್ರ, ಶ್ರೀನಿವಾಸ, ಪ್ರಭಾಮಾಲಿನಿ, ದಿನೇಶ, ನೀಲಪ್ಪ ನಾಯ್ಕ ಆಯ್ಕೆಯಾಗಿದ್ದಾರೆ. ಚುನಾವಣೆಯನ್ನು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ನಡೆಸಿಕೊಟ್ಟರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಬಿ.ಎನ್.ಸದಾನಂದ ಉಪಾಧ್ಯಕ್ಷರಾಗಿ ಆಯ್ಕೆ ಮೈಸೂರು: ಸಹಕಾರ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಮುಂದುವರಿಸಿರುವ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ ಹರೀಶ್‌ ಗೌಡ ಮೈಸೂರು ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿ ಯೂನಿಯನ್‌ ನಿರ್ದೇಶಕರಾಗಿ ಆಯ್ಕೆಯಾದ ಅವರು ಮೊದಲ ಆಯ್ಕೆಯಲ್ಲೇ ಅಧ್ಯಕ್ಷರಾಗಿ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ. https://chat.whatsapp.com/JVAtKKe2M19AFO3W5629ZS?mode=ems_copy_t ಇತ್ತೀಚೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜಿ.ಡಿ ಹರೀಶ್‌ ಗೌಡ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರನ್ನಾಗಿ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಬಿ.ಎನ್‌ ಸದಾನಂದ ಅವರನ್ನು ಆರಿಸಲಾಯಿತು. ನಿರ್ದೇಶಕರಾಗಿ ಶಾಸಕ ಜಿ.ಟಿ.ದೇವೇಗೌಡ, ಮುಡಾ ಮಾಜಿ ಅಧ್ಯಕ್ಷ ಹೆಜ್.ವಿ.ರಾಜೀವ್, ಕೆ.ಎಸ್.ಕುಮಾ‌ರ್‌, ಶಿವಗಾಮಿ, ಪ್ರಶಾಂತ್‌ ತಾತಾಚಾರ್, ಸೋಮಶೇಖರ್, ಕೆ.ಉಮಾಶಂಕರ್, ಎ.ಟಿ.ಸೋಮಶೇಖರ್, ಕುರಹಟ್ಟಿ ಮಹೇಶ್, ಹನಮನಾಳ ಸಿದ್ದೇಗೌಡ, ಕೆ.ಕುಮಾ‌ರ್, ಮಲ್ಲಣ್ಣ, ಬಿ.ಎನ್. ಸದಾನಂದ ಮರ್ಚಂಟ್ಸ್‌ ಬ್ಯಾಂಕ್ ಆನಂದ್, ಬಿ.ವಿ.ಗುರುರಾಜ್ ಸೇರಿ ಒಟ್ಟು 15 ಮಂದಿ ಆಯ್ಕೆಯಾಗಿದ್ದಾರೆ. 15 ಸದಸ್ಯರ ಪೈಕಿ ಎರಡು ಕ್ಷೇತ್ರಗಳಿಗೆ ಚುನಾವಣೆ ನಡೆದು ಉಳಿದ ಎಲ್ಲಾ ಕ್ಷೇತ್ರದಲ್ಲಿ ಅವಿರೋಧ ಆಯ್ಕೆ…

Read More

ಬ್ಯಾಂಕ್‌ಗಳ ಮೆಗಾ ವಿಲೀನಕ್ಕೆ ಇನ್ನೊಂದು ಸುತ್ತಿನ ಸಿದ್ಧತೆ, ಮರೆಯಾಗಲಿವೆಯೇ ಹಲವು ಬ್ಯಾಂಕುಗಳು? ನವದೆಹಲಿ: ಸಾರ್ವಜನಿಕ ವಲಯದ ಹಲವು ಬ್ಯಾಂಕುಗಳು ದೊಡ್ಡ ಪ್ರಮಾಣದಲ್ಲಿ ವಿಲೀನಗೊಂಡು ಇನ್ನೂ ಹತ್ತು ವರ್ಷಗಳು ಸಂದಿಲ್ಲ, ಅಷ್ಟರಲ್ಲೇ ಮತ್ತೊಂದು ಸುತ್ತಿನ ಬ್ಯಾಂಕುಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮತ್ತೊಂದು ಹಂತದ ದೊಡ್ಡ ಪ್ರಮಾಣದ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ ಸಣ್ಣ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ದೊಡ್ಡ ಬ್ಯಾಂಕುಗಳೊಂದಿಗೆ ವಿಲೀನಗೊಳಿಸುವ ಮಹತ್ವದ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ. ಒಂದು ವೇಳೆ ಇದು ಕಾರ್ಯಗತಗೊಂಡರೆ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದ್ದು, 2027ರೊಳಗೆ ಈ ವಿಲೀನ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ಗುರಿ ಇದೆ ಎನ್ನಲಾಗಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ಕಡಿಮೆ ಸಂಖ್ಯೆಯ, ಆದರೆ ಆರ್ಥಿಕವಾಗಿ ಬಲಿಷ್ಠವಾಗಿರುವ ಬ್ಯಾಂಕ್‌ಗಳನ್ನು ರಚಿಸಿ, ದೇಶದ ಮುಂದಿನ ಹಂತದ ಸಾಲ ವಿಸ್ತರಣೆ ಮತ್ತು ಆರ್ಥಿಕ ಸುಧಾರಣೆಗಳಿಗೆ ಬೆಂಬಲ ನೀಡುವುದು ಈ ವಿಲೀನದ ಮುಖ್ಯ ಉದ್ದೇಶವಾಗಿದೆ. ಸರ್ಕಾರದ ಮೂಲಗಳ ಪ್ರಕಾರ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಒಬಿ), ಸೆಂಟ್ರಲ್ ಬ್ಯಾಂಕ್ ಆಫ್…

Read More

ಉಡುಪಿ: ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಕುಂದಾಪುರದ ಜನಶ್ರೀ ಸೌಹಾರ್ದ ಸಹಕಾರಿ ಸಂಘದ ಜಗನ್ನಾಥ ಶೆಟ್ಟಿ ಪಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಿರಿಯಾರದ ಜೈಗಣೇಶ್‌ ಸೌಹಾರ್ದ ಸಹಕಾರಿ ಸಂಘದ ಅಶೋಕ್‌ ಪ್ರಭು ಆಯ್ಕೆಯಾಗಿದ್ದಾರೆ. https://chat.whatsapp.com/JVAtKKe2M19AFO3W5629ZS?mode=ems_copy_t ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಆಯ್ಕೆ ನಡೆಯಿತು. ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿತ್‌ ಜಿ.ಸಾಲ್ಯಾನ್‌ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಮಂಜನಾಥ ಎಸ್‌.ಕೆ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್‌ ಬಿ.ಎಸ್‌ ಉಪಸ್ಥಿತರಿದ್ದರು. ನಿರ್ದೇಶಕರಾಗಿ ಉಡುಪಿ ವಲಯದಿಂದ ಸುಧೀರ್‌ ನಾಯಕ್‌ -ಹಂಸ ಚೈತನ್ಯ ಸೌಹಾರ್ದ ಸಹಕಾರಿ ಸಂಘ ಉಡುಪಿ, ಬಿ.ಮಧುಸೂದನ್‌ ನಾಯಕ್‌ -ನಿರ್ಮಾಣ್‌ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಉಡುಪಿ, ಸುಧಾಕರ ಕೆ. ಮುಳೂರು – ಅನಂತಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಉಡುಪಿ, ರಾಮ್‌ ವಿ.ಕುಂದರ್‌ -ಶ್ರೀರಸ್ತು ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿ ಉಡುಪಿ, ಕಾಪು ವಲಯದಿಂದ ನವೀನ್‌ಚಂದ್ರ ಎಸ್‌.ಸುವರ್ಣ – ಅಡ್ವೆ ವಿವಿಧೋದ್ದೇಶ…

Read More

ನವದೆಹಲಿ: ಭಾರತದ ಸಹಕಾರಿ ಚಳವಳಿಯ ಭವಿಷ್ಯದ ಬಗ್ಗೆ ಹೊಸ ಚಿಂತನೆ ಸೃಜಿಸುವ ಪ್ರಯತ್ನವೊಂದರಲ್ಲಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮವು (NCDC), MyGov ಸಹಭಾಗಿತ್ವದಲ್ಲಿ “ಬದಲಾಗುತ್ತಿರುವ ಕಾಲದಲ್ಲಿ ಸಹಕಾರಿ ಸಂಸ್ಥೆಗಳ ಹೆಚ್ಚುತ್ತಿರುವ ಮಹತ್ವ” (“Increasing Significance of Cooperatives in Changing Times.”) ಎಂಬ ವಿಷಯದ ಕುರಿತು ರಾಷ್ಟ್ರವ್ಯಾಪಿ ಪ್ರಬಂಧ ಸ್ಪರ್ಧೆ ಆಯೋಜಿಸಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ಸ್ಪರ್ಧೆಯಲ್ಲಿ ಯಾವುದೇ ವಯೋಮಿತಿಯ ನಾಗರಿಕರು ಮುಕ್ತವಾಗಿ ಭಾಗವಹಿಸಬಹುದು. ವೇಗವಾಗಿ ವಿಕಸನಗೊಳ್ಳುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಸನ್ನಿವೇಶದಲ್ಲಿ ಸಹಕಾರಿ ಸಂಸ್ಥೆಗಳು ವಿವಿಧ ಸಮುದಾಯಗಳಿಗೆ ಹೇಗೆ ಹೊಂದಿಸಿಕೊಳ್ಳಬಹುದು, ವಿಸ್ತರಿಸಬಹುದು ಮತ್ತು ಸಬಲೀಕರಣಗೊಳಿಸಬಹುದು ಎಂಬುದರ ಕುರಿತು ಮೂಲ ವಿಚಾರಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ. ಸಹಕಾರಿ ಕ್ಷೇತ್ರವು ಸಮಗ್ರ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಸ್ಥಳೀಯ ಸ್ವಾವಲಂಬನೆಯನ್ನು ಸಾಧಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ಎನ್‌ಸಿಡಿಸಿ ಪ್ರತಿಪಾದಿಸುತ್ತದೆ. ಕೃಷಿ, ಹೈನುಗಾರಿಕೆ, ವಸತಿ, ಸಾಲ, ಮೀನುಗಾರಿಕೆ ಮತ್ತು ಸೇವೆಗಳಂತಹ ಕ್ಷೇತ್ರಗಳು, ನೀತಿಗಳು ಮತ್ತು ಡಿಜಿಟಲ್ ರೂಪಾಂತರಕ್ಕೆ ಒಳಗಾಗುತ್ತಿರುವ ಸಮಯದಲ್ಲಿ, ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವ ಬಗ್ಗೆ…

Read More

ಅಧ್ಯಕ್ಷರಾಗಿ ಪ್ರಶಾಂತ್‌ ಎ.ಗಟ್ಟಿ, ಉಪಾಧ್ಯಕ್ಷರಾಗಿ ಸಚಿನ್‌ ಕುಮಾರ್‌ ಆಯ್ಕೆ ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್‌ಕಾಮ್ಸ್‌) ಮಂಗಳೂರು ಇದರ ಅಧ್ಯಕ್ಷರಾಗಿ ಪ್ರಶಾಂತ್‌ ಎ.ಗಟ್ಟಿ, ಉಪಾಧ್ಯಕ್ಷರಾಗಿ ಸಚಿನ್‌ ಕುಮಾರ್‌ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಮಂಗಳೂರು ಹಾಪ್‌ಕಾಮ್ಸ್‌ ಆಡಳಿತ ಕಿಸಾನ್ ಸಂಘ ಬೆಂಬಲಿತ ಸಹಕಾರ ಭಾರತಿ ತೆಕ್ಕೆಗೆ ಲಭಿಸಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ನಿರ್ದೇಶಕ ಮಂಡಳಿಗೆ ಇತ್ತೀಚೆಗೆ ಅವಿರೋಧ ಆಯ್ಕೆ ನಡೆದಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್‌ ಇವರು ನಡೆಸಿಕೊಟ್ಟರು. ಸಭೆಯಲ್ಲಿ ನಿರ್ದೇಶಕರಾದ ಜಯಪ್ರಕಾಶ್‌ ಕೂಜುಗೋಡು, ಜಯಕುಮಾರ್‌ ಪರ್ಕಳ, ಹರೀಶ್‌, ಯಶೋದರ ಶೆಟ್ಟಿ ಬಿ., ಕೆ.ಲಕ್ಷ್ಮೀನಾರಾಯಣ ಉಡುಪ, ಸೀತಾರಾಮ ಗಾಣಿಗ, ರತ್ನರಾಜ್‌ ಪಿ., ಅನಂತಪದ್ಮನಾಭ ಉಡುಪ ಕೆ., ವಿಜಯ ರೈ, ಚೀಂಪ, ಸುಂದರ ನಾಯ್ಕ, ಮಮತಾ ಎಂ.ಶೆಟ್ಟಿ, ಸುಭದ್ರಾ ರಾವ್‌ ಉಪಸ್ಥಿತರಿದ್ದರು. ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಪ್ರವೀಣ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು…

Read More

ಮಂಗಳೂರು: ಇಲ್ಲಿನ ಜನತಾ ಬಜಾರ್‌ (ದಕ್ಷಿಣ ಕನ್ನಡ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ) ಆಡಳಿತ ಮಂಡಳಿಗೆ ಭಾನುವಾರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಎಲ್ಲ ಕ್ಷೇತ್ರಗಳಲ್ಲೂ ಆಯ್ಕೆಯಾಗಿದ್ದಾರೆ. 14 ಸ್ಥಾನಗಳ ಪೈಕಿ 13 ಮಂದಿ ಅವಿರೋಧ ಆಯ್ಕೆಯಾಗಿದ್ದು, ಒಂದು ಸ್ಥಾನಕ್ಕೆ ಚುನಾವಣೆ ನಡೆಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಎ ಕೆಟಗರಿಯಿಂದ ದಿನೇಶ್‌ ಹೆಗ್ಡೆ, ಸಿ ಕೆಟಗರಿಯಿಂದ ಪುರುಷೋತ್ತಮ ಭಟ್‌, ಪ್ರಸನ್ನ, ಮೋಹನ್‌ ಕುಂಬ್ಳೇಕರ್‌, ಹಿಂದುಳಿದ ವರ್ಗ ಶಾಂತಾ ಆರ್‌, ಉದಯ ಮಾದೋಡಿ, ಪರಿಶಿಷ್ಟ ಜಾತಿ ಭಾಗೀರಥಿ ಮುರುಳ್ಯ, ಪರಿಶಿಷ್ಟ ಪಂಗಡ ಪಕೀರಪ್ಪ, ಮಹಿಳಾ ವಿಭಾಗ ಮದಲಾಕ್ಷಿ, ಸುಜಯ ಹೇಮಚಂದ್ರ, ಎಫ್‌ ಕೆಟಗರಿಯಿಂದ ಬಿ.ಜನಾರ್ದನ, ನವೀನ್‌ ಬಾಳುಗೋಡು, ಶಶಿಧರ ಶೆಟ್ಟಿ ಮತ್ತು ದಯಾನಂದ ಅಡ್ಯಾರ್‌ ಆಯ್ಕೆಯಾಗಿದ್ದಾರೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ವಿಶ್ವಕರ್ಮ ಬ್ಯಾಂಕ್‌ ಅಧ್ಯಕ್ಷ ಡಾ. ಎಸ್ ಆರ್ ಹರೀಶ್ ಆಚಾರ್ಯ ಅಭಿಮತ ಮಂಗಳೂರು: ಸ್ವಚ್ಛತೆಯ ಕಾರ್ಯ ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ. ನಮ್ಮ ಮನೆ ಮಾತ್ರವಲ್ಲ, ನಮ್ಮ ನಾಗರೀಕ ಪರಿಸರದ ಜವಾಬ್ಧಾರಿಯು ನಮ್ಮೆಲ್ಲರ ವೈಯಕ್ತಿಕ ಜವಾಬ್ದಾರಿಯಾಗಿದೆ. ಆದುದರಿಂದ ನಮ್ಮ ಕಸ, ನಮ್ಮ ಜವಾಬ್ದಾರಿ ಎಂಬ ಮಂತ್ರದಂತೆ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವ ಕಾರ್ಯದಲ್ಲಿ ನಾವು ಮುಂದುವರಿಯಬೇಕಾಗಿದೆ ಎಂದು ಡಾ. ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದರು. https://chat.whatsapp.com/JVAtKKe2M19AFO3W5629ZS?mode=ems_copy_t ಅವರು ವಿಶ್ವಕರ್ಮ ಸಹಕಾರ ಬ್ಯಾಂಕ್ ಆಯೋಜಿಸಿರುವ ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ಸ್ವಯಂಸೇವಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಕಾರ್ಯಕ್ರಮದ “ಸ್ವಚ್ಛತಾ ಹೀ ಸೇವಾ “ ಎಂಬ ಧ್ಯೇಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬ್ಯಾಂಕ್ ತನ್ನ ಸ್ವರ್ಣ ಜಯಂತಿಯ ಹಿನ್ನಲೆಯೊಳಗೆ ಎಲ್ಲಾ ಶಾಖೆಗಳು ಮತ್ತು ಅದರ ಗ್ರಾಹಕರೊಂದಿಗೆ ಈ ಆಂದೋಲನದಲ್ಲಿ ಕೈಜೋಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದರು. ವಿಶ್ವಕರ್ಮ ಸಹಕಾರ…

Read More