ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಹಕಾರಿ ಸಪ್ತಾಹದ ಧ್ವಜಾರೋಹಣ ನೆರವೇರಿಸಿ ಗೋಪಿನಾಥ್ ಪಡoಗ ಅಭಿಪ್ರಾಯ
ಮೂಲ್ಕಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವು ಉತ್ತುಂಗಕ್ಕೆ ಏರಲು ಸಹಕಾರಿಗಳು ಇತರೆ ಸಹಕಾರಿ ಸಂಸ್ಥೆಗಳಿಗೆ ನೀಡುತ್ತಿರುವ ಸಹಕಾರವೇ ಕಾರಣ ಎಂದು ಮೂಲ್ಕಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ (ಕ್ಷೀರ ಸಾಗರ) ಇದರ ಅಧ್ಯಕ್ಷರಾದ ಗೋಪಿನಾಥ್ ಪಡಂಗ ಹೇಳಿದರು.
ಅವರು ಶುಕ್ರವಾರ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಹಕಾರಿ ಸಪ್ತಾಹದ ಧ್ವಜಾರೋಹಣದ ನೆರವೇರಿಸಿ ಮಾತನಾಡಿದರು.
https://chat.whatsapp.com/JVAtKKe2M19AFO3W5629ZS?mode=ems_copy_t
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಚ್ ವಸಂತ್ ಬೆರ್ನಾಡ್, ಸುಮಾರು 80 ವರ್ಷಗಳ ಇತಿಹಾಸ ಇರುವ ಮೂಲ್ಕಿ ಕ್ಷೀರ ಸಾಗರದ ಅಧ್ಯಕ್ಷತೆಯನ್ನು ವಹಿಸಿದ್ದ ಗೋಪಿನಾಥ್ ಪಡಂಗರವರ ನಾಯಕತ್ವದಲ್ಲಿ ಈ ಸಂಸ್ಥೆ ಇನ್ನಷ್ಟು ಬೆಳೆಯಲಿ, ಸಹಕಾರಿಗಳೆಲ್ಲರೂ ನಿಮ್ಮೊಂದಿಗೆ ಇದ್ದೇವೆಂದು ಹೇಳಿದರು.
ಹಿರಿಯ ಸಹಕಾರಿ, ಪಿಸಿಎ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಮಾಧವ ತಿಂಗಳಾಯ, ಹಳೆಯಂಗಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾದ ಶೆರ್ಲಿ ಬಂಗೇರ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಪ್ರಿಯದರ್ಶಿನಿ ಸಹಕಾರ ಸಂಘ ನಿಯಮಿತ ಹಳೆಯಂಗಡಿ ಇದರ ನಿರ್ದೇಶಕರಾದ ಜೈ ಕೃಷ್ಣ ಕೋಟ್ಯಾನ್ ಇವರನ್ನು ಗೌರವಿಸಲಾಯಿತು.

ಮಾಧವ ತಿಂಗಳಾಯರು ಮಾತನಾಡಿ ಅತ್ಯಲ್ಪ ಅವಧಿಯಲ್ಲಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಉನ್ನತ ಅಭಿವೃದ್ಧಿ ಪಡೆದಿರುವುದಲ್ಲದೇ ನಮ್ಮಂತಹ ಸಹಕಾರಿಗಳನ್ನು ಗೌರವಿಸಿರುವುದು ಮಾದರಿಯಾಗಿದೆ. ಸಂಸ್ಥೆ ಬೆಳವಣಿಗೆಯಲ್ಲಿ ನಾವು ಪ್ರಿಯದರ್ಶಿನಿ ಯೊಂದಿಗೆ ಇದ್ದೇವೆ ಎಂದು ನುಡಿದರು.
ವೇದಿಕೆಯಲ್ಲಿ ಹಿರಿಯ ನಿರ್ದೇಶಕರಾದ ಉಮಾನಾಥ್ ಜೆ ಶೆಟ್ಟಿಗಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಅಝೀಝ್, ಅಬ್ದುಲ್ ಖಾದರ್, ಶಶಿಕಲಾ ಕರಿತೋಟ, ಪಿಸಿಎ ಬ್ಯಾಂಕ್ ನ ನಿರ್ದೇಶಕರಾದ ಧರ್ಮಾನಂದ ಶೆಟ್ಟಿಗಾರ್ ಹಾಜರಿದ್ದರು.
ಸ್ವಸಹಾಯ ಗುಂಪಿನ ಪ್ರೇರಕಿ ನಿರಂಜಲ ಪ್ರಾರ್ಥಿಸಿದರು, ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸ್ವಾಗತಿಸಿ, ಸಾಲ ವಿಭಾಗದ ಪ್ರಬಂಧಕಿ ಅಕ್ಷತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಲೆಕ್ಕಿಗರಾದ ಲೋಲಾಕ್ಷಿ ವಂದಿಸಿದರು.

