Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರ ಕ್ಷೇತ್ರದಿಂದ ದೇಶದ ಆರ್ಥಿಕತೆಗೆ ಬಹುದೊಡ್ಡ ಪಾಲು
    News

    ಸಹಕಾರ ಕ್ಷೇತ್ರದಿಂದ ದೇಶದ ಆರ್ಥಿಕತೆಗೆ ಬಹುದೊಡ್ಡ ಪಾಲು

    adminBy adminFebruary 19, 2026

    ಬೆಳಗಾವಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಆಶಯ

    ವಿಜಯಪುರ: ಸಹಕಾರ ಸಂಘಗಳು ದೇಶವ್ಯಾಪಿ ಬೆಳೆಯಬೇಕು, ದೇಶದ ಆರ್ಥಿಕತೆಗೆ ಬಹುದೊಡ್ಡ ಪಾಲು ಸಹಕಾರ ಕ್ಷೇತ್ರ ನೀಡುವಂತಾಗಬೇಕು. ಕರ್ನಾಟಕದ ಗದಗ್ ಜಿಲ್ಲೆಯ ಕಣಗಿನಾಳದಲ್ಲಿ ಸಿದ್ದನಗೌಡ ಪಾಟೀಲರು ಪ್ರಥಮ ಸಹಕಾರಿ ಸಂಘ ಪ್ರಾರಂಭಿಸಿದರು ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

    https://chat.whatsapp.com/FCEnlTkAKCC0MGPhXtX4i4
    ವಿಜಯಪುರದ ಭಾವಸಾರ ಸಾಂಸ್ಕೃತಿಕ ಭವನದಲ್ಲಿ ನಡೆದ ವಿಜಯಪುರ ಜಿಲ್ಲಾ ಸೌಹಾರ್ದ ಸಹಕಾರಿಗಳ ಸಮಾವೇಶ ಹಾಗೂ ಷೇರು ಸರ್ಟಿಫಿಕೇಟ್‌ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಘಗಳ ಕಾರ್ಯದಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು. ಸಹಕಾರ ಸಂಘಗಳು ದೇಶವ್ಯಾಪಿಯಾಗಿ ಬೆಳೆಯಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
    ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ನಂಜನ ಗೌಡ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ 1990ರ ದಶಕದಲ್ಲಿ ಅಧಿಕಾರಶಾಹಿ ಪ್ರಾರಂಭವಾಗಿತ್ತು. ಇದರಿಂದಲೇ 1997 ಸೌಹಾರ್ದ ಕಾಯಿದೆ ಬರಲು ಕಾರಣವಾಯಿತು. ಈ ಕಾಯ್ದೆ 2001ರಲ್ಲಿ ಪ್ರಾರಂಭಗೊಂಡು ರಾಜ್ಯಾದ್ಯಂತ ವಿಸ್ತರಿಸಲ್ಪಟ್ಟಿತು. ಸಹಕಾರಿಗಳು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸಹಕಾರಿ ಸಂಘಗಳು, ದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ ಎಂದರು.
    ಮುಖ್ಯ ಅತಿಥಿ, ಸಹಕಾರ ವಲಯದ ಹಿರಿಯ ಮಾರ್ಗದರ್ಶಕರಾದ ಅರವಿಂದ ಜಿ .ದೇಶಪಾಂಡೆ ಮಾತನಾಡಿ, ಸಹಕಾರಿಗಳು ಜನರಿಗೆ ಪಾರದರ್ಶಕತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು. ಸಹಕಾರಿ ಒಕ್ಕೂಟಕ್ಕೆ ಎಲ್ಲ ಸಹಕಾರಿ ಸಂಘಗಳು ಸಹಕರಿಸಬೇಕು. ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರಿಗೆ 50% ಆದ್ಯತೆ ನೀಡಬೇಕು. ಸಹಕಾರಿ ಒಕ್ಕೂಟವು ಸಹಕಾರಿ ಸಂಘ ಅಷ್ಟೇ ಅಲ್ಲದೆ ಇತರೆ ಕ್ಷೇತ್ರಗಳಿಗೆ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.


    ಷಣ್ಮುಖಾರೂಡ ಮಠ ವಿಜಯಪುರ ಮತ್ತು ಹುಬ್ಬಳಿಯ ಶಾಂತಾಶ್ರಮದ ಪರಮಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷರಾದ ಸಂಜಯ ಪಾಟೀಲ ಕನಮಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಒಕ್ಕೂಟದ ಧ್ಯೇಯ ಉದೇಶಗಳ ಬಗ್ಗೆ ತಿಳಿಸಿದರು. ಉಪಾಧ್ಯಕ್ಷರಾದ ಚಂದ್ರಶೇಖರ ಕವಟಗಿ ಸ್ವಾಗತ, ಪರಿಚಯ ಮಾಡಿದರು .
    ಸಹಕಾರ ರತ್ನ ಪುರಸ್ಕೃತರಾದ ಶಂಕರಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಷೇರು ಸದಸ್ಯರಿಗೆ ಸರ್ಟಿಫಿಕೇಟ್ ವಿತರಣೆ ಮಾಡಲಾಯಿತು. ಸಹಕಾರ ಭಾರತಿ ಮುಖಂಡರಾದ ಪ್ರಭುದೇವ ಮ್ಯಾಗ್ನೂರ, ರಾಷ್ಟ್ರೀಯ ಸಂಯೋಜಕರಾದ ರಮೇಶ ವೈದ್ಯ, ಹಿರಿಯರಾದ ಸಿದ್ರಾಮಪ್ಪ ಉಪ್ಪಿನ, ಎಂ.ಜಿ. ಪಾಟೀಲ, ಒಕ್ಕೂಟದ ಆಡಳಿತ ಮಂಡಳಿಯ ಸದಸ್ಯರಾದ ಅರುಣ ವಾರದ , ಸುರೇಶ ಬಿರಾದಾರ, ಅರುಣ ಮಠ, ಸಿದ್ದು ಮಲ್ಲಿಕಾರ್ಜುನ್ಮಠ , ಆರ್ ಡಿ ಕುಲಕರ್ಣಿ , ಚಂದ್ರಶೇಖರ ಪಾಟೀಲ , ರಾಜು ಹಂಚಾಟೆ, ಯಮನಪ್ಪ ಸಾತಿಹಾಳ, ಮಲ್ಕಪ್ಪ ರೊಟ್ಟಿ, ವಿವೇಕಾನಂದ ಶಿರೋಳಕರ ಹಾಗೂ ಸಹಕಾರ ಭಾರತೀಯ ಪದಾಧಿಕಾರಿಗಳಾದ ಪರಶುರಾಮ ಚಿಂಚಲಿ ಮತ್ತು ದೀಪಕ ಶಿಂತ್ರೆ ಉಪಸ್ಥಿತರಿದ್ದರು. ಸೋಮನಿಂಗ ಕಟಾವಿ ಕಾರ್ಯಕ್ರಮ ನಿರೂಪಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Abinava Siddarudha Swameeji Anna Saheb Jolle Belagavi DCC Bank Nanjana Gowda Vijayapura Jilla Souharda Sahakarigala Samavesha
    Previous Articleಫೆ.22ರಂದು ಕುದ್ರೋಳಿಯಲ್ಲಿ ಆತ್ಮಶಕ್ತಿ ಸಹಕಾರಿ ಸಂಘದಿಂದ ವೈದ್ಯಕೀಯ, ನೇತ್ರ ತಪಾಸಣಾ ಶಿಬಿರ
    Next Article ಎಂಸಿಸಿ ಬ್ಯಾಂಕಿನಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗೆ ನಾಯಕತ್ವ ಅಧಿವೇಶನ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.