Author: admin
ಮಂಗಳೂರು: ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಮಂಗಳೂರು ಇದರ ವತಿಯಿಂದ “ಜೀವನ್ ಫಾರ್ಮ್” ದೇವಿನಗರ, ಕಿನ್ಯಾ, ಉಳ್ಳಾಲದಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಯಿತು. https://chat.whatsapp.com/FCEnlTkAKCC0MGPhXtX4i4 ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರು ಯೋಗ ದಿನಾಚರಣೆಯ ಮಹತ್ವದ ಬಗ್ಗೆ ಸಂಘದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಯೋಗ ಶಿಕ್ಷಕರಾದ ಮೋನಪ್ಪ ಪೂಜಾರಿಯವರು ಸಂಘದ ಸಿಬ್ಬಂದಿಗಳಿಗೆ ಯೋಗದಿಂದ ಆಗುವ ಪ್ರಯೋಜನದ ಮಾಹಿತಿ ನೀಡಿ ಯೋಗಾಸನ ಮಾಡಿಸುವುದರ ಮೂಲಕ ಯೋಗಾಭ್ಯಾಸ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಯೋಗ ಕಲಿಕೆಯಲ್ಲಿ 33 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿರುವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋನಪ್ಪ ಪೂಜಾರಿ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ನಿರ್ದೇಶಕರಾದ ಜಿ.ಪರಮೇಶ್ವರ ಪೂಜಾರಿ, ಆನಂದ್ ಎಸ್.ಕೊಂಡಾಣ, ರಮಾನಾಥ್ ಸನಿಲ್, ಬಿ.ಪಿ. ದಿವಾಕರ್, ಗೋಪಾಲ್ ಎಂ, ಉಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್,…
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಗುರುನಾಥ ಜಾಂತಿಕರ ಅಭಿಪ್ರಾಯ ವಿಜಯಪುರ: ಇಲ್ಲಿನ ಒಕ್ಕೂಟಕ್ಕೆ ಸಹಾಯಕ ನಿಬಂಧಕರನ್ನು ವಸೂಲಾಧಿಕಾರಿಗಳಾಗಿ ಸಂಯುಕ್ತ ಸಹಕಾರಿಯಿಂದ ನೇಮಕ ಮಾಡಿ, ವಿಜಯಪುರ ಜಿಲ್ಲೆ ಸೌಹಾರ್ದ ಸಹಕಾರಿಗಳ ಸಾಲ ವಸೂಲಾತಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಗುರುನಾಥ ಜಾಂತಿಕರ ಹೇಳಿದರು. ವಿಜಯಪುರ ಸೌಹಾರ್ದ ಒಕ್ಕೂಟಕ್ಕೆ ಇತ್ತೀಚೆಗೆ ಭೇಟಿ ನೀಡಿ ಅವರು ಮಾತನಾಡಿದರು. ಸೌಹಾರ್ದ ಸಹಕಾರಿಗಳ ಒಕ್ಕೂಟದ ಈ ಉದ್ದೇಶ ಹಾಗೂ ಕಾರ್ಯ ಶ್ಲಾಘನೀಯ ಎಂದು ಅವರು ಇದೇ ವೇಳೆ ಶ್ಲಾಘಿಸಿದರು. https://chat.whatsapp.com/FCEnlTkAKCC0MGPhXtX4i4 ಈ ಸಂದರ್ಭದಲ್ಲಿ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಒಕ್ಕೂಟದ ನಿರ್ದೇಶಕರ ವತಿಯಿಂದ ಕನಿಷ್ಠ ಪಕ್ಷ ಒಂದು ತಿಂಗಳಲ್ಲಿ ಎರಡು ದಿನ ವಿಜಯಪುರ ನಗರದಲ್ಲಿಯೇ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅವಕಾಶ ಮಾಡಿಕೊಡಲು ವಿನಂತಿಸಲಾಯಿತು, ಇದಕ್ಕೆ ಸ್ಪಂದಿಸಿದ ಜಾಂತಿಕರ ಅವರು ಸಂಯುಕ್ತ ಸಹಕಾರಿಯ ಮಂಡಳಿ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಕಲಬುರಗಿ ಜಿಲ್ಲಾ ಸೌಹಾರ್ದ ಸಹಕಾರಿ…
ಚನ್ನರಾಯಪಟ್ಟಣ: ಇಲ್ಲಿನ ನುಗ್ಗೆಹಳ್ಳಿ ಶ್ರೀ ಗುರು ರಾಘವೇಂದ್ರ ಸೌಹಾರ್ದ ಸಹಕಾರಿ ಸಂಘದ ಪ್ರಾರಂಭೋತ್ಸವ ಹಾಗೂ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಸಂಘದ ಕಚೇರಿಯಲ್ಲಿ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲೆಯ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ನೆರವೇರಿಸಿದರು. ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಸೌಹಾರ್ದ ಕಾಯ್ದೆಯ ಕುರಿತು ಮಾಹಿತಿ ನೀಡಿ, ನೂತನ ಆಡಳಿತ ಮಂಡಳಿ ಸದಸ್ಯರಿಗೆ ಸಂಯುಕ್ತ ಸಹಕಾರಿ ಪರವಾಗಿ ಅಭಿನಂದನೆ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ನುಗ್ಗೇಹಳ್ಳಿ ಇದರ ಅಧ್ಯಕ್ಷರಾದ ಎನ್.ಡಿ ಶಿವಪ್ಪ, ಸಹಕಾರಿಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com
ವಿಶ್ವಕರ್ಮ ಸಹಕಾರ ಬ್ಯಾಂಕಿನಲ್ಲಿ ಯೋಗ ದಿನ ಆಚರಣೆ ಮಂಗಳೂರು: ಇಂದಿನ ಜಗತ್ತಿನಲ್ಲಿ ಮಾನವನ ಜೀವನ ಶೈಲಿ ಬದಲಾಗುತ್ತಿದೆ. ಪರಿಸರ ಆಹಾರ ಪದ್ಧತಿ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಉದ್ಯೋಗ ಕ್ಷೇತ್ರ, ಉದ್ಯಮ ಕ್ಷೇತ್ರ ಹೆಚ್ಚು ಹೆಚ್ಚು ಒತ್ತಡ ಹೇರುತ್ತಿದೆ. ಇಂದು ಒತ್ತಡ ನಿಭಾವಣೆಯೇ ಅತ್ಯಂತ ಸವಾಲಿನದ್ದಾಗುತ್ತಿದೆ. ಯೋಗಾಧಾರಿತ ಜೀವನ ಕ್ರಮವನ್ನು ಅನುಸರಿಸಿದರೆ ಒತ್ತಡ ರಹಿತ ಜೀವನ ಸಾಧ್ಯ ಎಂದು ತರ್ಜನಿ ಕಮ್ಯುನಿಕೇಷನ್‌ನ ರಮೇಶ್ ಪ್ರಭು ಹೇಳಿದರು. https://chat.whatsapp.com/FCEnlTkAKCC0MGPhXtX4i4 ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನಲ್ಲಿ ಜರುಗಿದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಅವರು ನಿರಂತರ ಯೋಗಾಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನ ವೃದ್ಧಿಯಾಗುತ್ತದೆ. ನಿಯಮಿತವಾಗಿ ಯೋಗ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು ಹಾಗೂ ಉತ್ತಮ ಜೀವನಶೈಲಿಯನ್ನು ರೂಪಿಸಿಕೊಳ್ಳಬಹುದಾಗಿದೆ ಎಂದು ಯೋಗದ ಮಹತ್ವವನ್ನು ತಿಳಿಸಿದರು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ…
ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯಿಂದ ವಿಶ್ವ ಯೋಗ ದಿನಾಚರಣೆ ಮಂಗಳೂರು: ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ವತಿಯಿಂದ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಭಾನುವಾರ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ಪಿ. ಉಪೇಂದ್ರ ಆಚಾರ್ಯ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಾನವರಲ್ಲಿ ಸಂಪತ್ತಿಗಿಂತ ಆರೋಗ್ಯ ಚೆನ್ನಾಗಿದ್ದರೆ ಏನನ್ನು ಕೂಡ ಸಾಧಿಸಬಹುದು ಎಂದು ತಿಳಿಸಿದರು. https://chat.whatsapp.com/FCEnlTkAKCC0MGPhXtX4i4 ಯೋಗ ಶಿಕ್ಷಕರಾದ ಸುರೇಂದ್ರ ಆಚಾರ್ಯ ಮಾತನಾಡಿ ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಸಿದರು. ಯೋಗ ಗುರು ಗಣೇಶ ಆಚಾರ್ಯ ಯೋಗಾಸನವನ್ನು ಸದಸ್ಯರು ಮತ್ತು ಸಿಬ್ಬಂದಿಯವರಿಗೆ ಕಲಿಸಿದರು. ನವೀನ್ ಕುಮಾರ್ ಮತ್ತು ಸಂಸ್ಥೆಯ ನಿರ್ದೇಶಕರಾದ ವೈ.ವಿ.ವಿಶ್ವಜ್ಞಮೂರ್ತಿ, ವಿ.ಜಯ ಅಚಾರ್, ಶಶಿಕಾಂತ್ ಆಚಾರ್ಯ ಮತ್ತು ಮಲ್ಲಪ್ಪ ಎನ್. ಪತ್ತಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ಕೃಷ್ಣಾಪುರ ಸಭಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸದಸ್ಯ ಗ್ರಾಹಕರು ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.…
ಬಂಟ್ವಾಳ: ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರ ತುಂಬಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ರಾಜ್ಯ ಸರಕಾರದ ಸಹಭಾಗಿತ್ವದ ಮಹತ್ವಾಕಾಂಕ್ಷೆಯ ಯೋಜನೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು 2026-27ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಜಾರಿಗೊಳಿಸಿದೆ. https://chat.whatsapp.com/FCEnlTkAKCC0MGPhXtX4i4 ಇದರಂತೆ ಅಡಿಕೆ, ಕರಿಮೆಣಸು ಬೆಳೆಗಳಿಗೆ ಸಂಬಂಧಿಸಿದಂತೆ ಬೆಳೆ ವಿಮೆ ಮಾಡಲು ಪ್ರೀಮಿಯಂ ಪಾವತಿಸಲು ಪ್ರಾರಂಭವಾಗಿದ್ದು, ಬೆಳೆ ಸಾಲ ಪಡೆದಿರುವ ರೈತರು ತಾವು ಬೆಳೆ ಸಾಲ ಪಡೆದಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಸಿ ಪ್ರೀಮಿಯಂ ಮೊತ್ತ ಪಾವತಿಸಬಹುದು. ಬೆಳೆ ಸಾಲ ಹೊಂದಿಲ್ಲದ ರೈತರು ಸಹ ಈ ಯೋಜನೆಯಡಿಯಲ್ಲಿ ಪ್ರೀಮಿಯಂ ಮೊತ್ತ ಪಾವತಿಸಿ ಯೋಜನೆಯ ಸದುಪಯೋಗ ಪಡೆಯಬಹುದು ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈತರು…
ಮುಂಬೈ: ಕರ್ನಾಟಕ ಮೂಲದ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್, ಆ ಬ್ಯಾಂಕಿನ ಪರವಾನಗಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ತಕ್ಷಣಕ್ಕೆ ಲಿಕ್ವಿಡೇಟರ್ ನೇಮಿಸಲು ಆದೇಶ ಹೊರಡಿಸುವಂತೆ, ಕರ್ನಾಟಕ ಸಹಕಾರ ಸಂಘದ ರಿಜಿಸ್ಟ್ರಾರ್, ರಿಸರ್ವ್ ಬ್ಯಾಂಕ್ ಅನ್ನು ಕೋರಿದೆ. https://chat.whatsapp.com/FCEnlTkAKCC0MGPhXtX4i4 ಕರ್ನಾಟಕದ ಗಡಿಭಾಗ ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿರುವ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲೈಸೆನ್ಸ್ ಅನ್ನು ಪರವಾನಗಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ, ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಮಾಡಿದೆ. ಗುರುವಾರದಿಂದ (ಜೂನ್ 18) ಯಾವುದೇ ವಹಿವಾಟು ನಡೆಸದಂತೆ ನಿರ್ಬಂಧ ಹೇರಿದೆ. ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಹದೆಗೆಟ್ಟ ಹಿನ್ನಲೆಯಲ್ಲಿ, ರಿಸರ್ವ್ ಬ್ಯಾಂಕ್ ಈ ನಿರ್ಧಾರ ತೆಗೆದುಕೊಂಡಿದೆ. ಬ್ಯಾಂಕ್ ವಹಿವಾಟು ಮುಕ್ತಾಯಗೊಳಿಸಲು, ಲಿಕ್ವಿಡೇಟರ್ ನೇಮಿಸಲು ಆದೇಶ ಹೊರಡಿಸುವಂತೆ, ಕರ್ನಾಟಕ ಸಹಕಾರ ಸಂಘಗಳ ರಿಜಿಸ್ಟ್ರಾರ್ ರಿಸರ್ವ್ ಬ್ಯಾಂಕಿಗೆ ( RBI ) ಮನವಿ ಸಲ್ಲಿಸಿದೆ. ಭವಿಷ್ಯದಲ್ಲಿ ಮತ್ತೆ ಲಾಭ ಗಳಿಸುವ ಆಶಾಭಾವ…
ವಿಜಯಪುರ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟಕ್ಕೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಗುರುನಾಥ ಜಾಂತೀಕರ ಭೇಟಿ
ವಿಜಯಪುರ: ವಿಜಯಪುರ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟಕ್ಕೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಬೆಂಗಳೂರು ನಿರ್ದೇಶಕ ಗುರುನಾಥ ಜಾಂತೀಕರ ಶುಕ್ರವಾರ ಭೇಟಿ ನೀಡಿದರು. https://chat.whatsapp.com/FCEnlTkAKCC0MGPhXtX4i4 ಅವರನ್ನುಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಒಕ್ಕೂಟಕ್ಕೆ ಒಬ್ಬ ಸಹಾಯಕ ನಿಬಂಧಕರನ್ನು ಸಂಯುಕ್ತ ಸಹಕಾರಿಯಿಂದ ನೇಮಕ ಮಾಡಿಕೊಂಡು ಸಾಲ ವಸೂಲಾತಿ ಮಾಡಿಕೊಡಲು ವಿನಂತಿಸಲಾಯಿತು. ಕನಿಷ್ಠ ಒಂದು ತಿಂಗಳಲ್ಲಿ ಎರಡು ದಿನ ಬಂದು ಇಲ್ಲಿಯೇ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅವಕಾಶ ಮಾಡಿಕೊಡಲು ವಿನಂತಿಸಲಾಯಿತು. ಇದಕ್ಕೆ ಸ್ಪಂದಿಸಿದ ಜಾಂತೀಕರ ಅವರು ಸಂಯುಕ್ತ ಸಹಕಾರಿಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಸಭೆಯಲ್ಲಿ ಗುಲ್ಬರ್ಗಾ ಜಿಲ್ಲೆಯ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಎಸ್.ಎಸ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಒಕ್ಕೂಟದ ನಿರ್ದೇಶಕರಾದ ಅರುಣ್ ವಾರದ, ದಿಲೀಪ್ ಶಿಂತ್ರೆ, ಯಮನಪ್ಪ ಸಾತೀಹಾಳ, ಪರಶುರಾಮ ಚಿಂಚಲಿ, ಅರುಣ ಮಠ, ಸಿದ್ದು ಮಲ್ಲಿಕಾರ್ಜುನಮಠ ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com
ಮೂಡುಬಿದಿರೆ: ಕರಿಂಜೆಯ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘದ ಪ್ರಥಮ ಶಾಖೆ ಮದ್ದಡ್ಕದಲ್ಲಿ ಸಾಮಾನ್ಯ ಸೇವಾ ಕೇಂದ್ರ ಮತ್ತು ಇ-ಸ್ಟಾಂಪಿಂಗ್ ಸೌಲಭ್ಯದ ಉದ್ಘಾಟನೆ ಶುಕ್ರವಾರ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಸಂಸ್ಥೆಯ ಸಂಸ್ಥಾಪಕ, ಗೌರವ ಮಾರ್ಗದರ್ಶಕರಾಗಿರುವ ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮನುಷ್ಯನ ಸ್ವಭಾವ, ಕಾರ್ಯ ಚಟುವಟಿಕೆಯಲ್ಲಿ ವ್ಯತ್ಯಾಸ ಇರಬಹುದು, ಸ್ವಸಹಾಯ ಸಂಘದಲ್ಲಿದ್ದುಕೊಂಡು ಜಾತಿ ಮತ ಭೇದವನ್ನು ತೊರೆದು ಈ ಸಂಸ್ಥೆಯಲ್ಲಿ ನಾವು ಇದ್ದೇವೆ ಎಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರನ್ನು ಕಂಡು ತುಂಬ ಹೆಮ್ಮೆಯನ್ನುಂಟು ಮಾಡಿದೆ. ಹಾಗೆಯೇ ಇದೀಗ ಕುವೆಟ್ಟು -ಮೂಡುಬಿದಿರೆಗೆ ಗ್ರಾಮ ಸಮೃದ್ದಿ ಸಹಕಾರಿ ಸಂಘ ವಿಸ್ತರಿಸಿದೆ. ಮುಂದೆ ಮಂಗಳೂರು ಮತ್ತು ಗ್ರಾಮೀಣ ಪ್ರದೇಶವಾದ ಅಳಿಯೂರು ಗ್ರಾಮಗಳಲ್ಲಿ ಶಾಖೆಯು ಪ್ರಾರಂಭಗೊಳ್ಳಲಿದೆ. ನಮ್ಮ ಸಂಸ್ಥೆಯಿಂದ ಸದಸ್ಯರಿಗೆ ಉತ್ತಮವಾದ ಸೇವೆ ನೀಡುವ ದೃಷ್ಟಿಯಿಂದ ಸಾಮಾನ್ಯ ಸೇವಾ ಕೇಂದ್ರ ಮತ್ತು ಇ- ಸ್ಟಾಂಪಿಂಗ್ ಉದ್ಘಾಟನೆ ಮಾಡಲಾಯಿತು ಎಂದು ಹೇಳಿದರು. ಸಂಘದ ಅಧ್ಯಕ್ಷ ಸುಧಾಕರ ನೂಯಿ ಮಾತನಾಡಿ, ಸಂಸ್ಥೆಯು…
ಮಂಡ್ಯ: ಇಲ್ಲಿನ ಕೆ.ಆರ್ ಸಾಗರದ ಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಜಗದೀಶ್ ಆಯ್ಕೆಯಾಗಿದ್ದಾರೆ. https://chat.whatsapp.com/FCEnlTkAKCC0MGPhXtX4i4 12 ಸದಸ್ಯರಿರುವ ಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಐವರು ಸದಸ್ಯರು ಗೈರುಹಾಜರಾಗಿದ್ದರು. ಹಿಂದಿನ ಅಧ್ಯಕ್ಷರು ನೀಡಿದ್ದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.ಜಗದೀಶ್ ಮತ್ತು ಲಕ್ಷ್ಮೀ ನಾಮಪತ್ರ ಸಲ್ಲಿಸಿದ್ದರು. ಮತದಾನಕ್ಕೆ ಲಕ್ಷ್ಮೀ ಸೇರಿದಂತೆ ಐವರು ಗೈರಾಗಿದ್ದ ಕಾರಣ ಡಿ.ಜಗದೀಶ್ ವಿಜೇತರಾದರು. ಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ ಚುನಾವಣಾಧಿಕಾರಿಯಾಗಿದ್ದರು. ಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸಿದ್ದರಾಜು, ಮಾಜಿ ಅಧ್ಯಕ್ಷ ಸುಪ್ರಿಯಾ ರವಿಕುಮಾರ್, ಮಾಜಿ ಅಧ್ಯಕ್ಷ ಬಿ.ವಿ.ಹರೀಶ್, ಸದಸ್ಯ ಪರಶುರಾಮ, ಎಂ.ಎಚ್.ಶ್ರೀನಿವಾಸ್, ಕಿರಣ್, ಗ್ರಾಮದ ಯಜಮಾನರಾದ ಶ್ರೀನಿವಾಸೇಗೌಡ, ಮುಖಂಡರಾದ ರವಿಕುಮಾರ್, ರವಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ರಜಿನಿ, ದೇವರಾಜು, ಪುನೀತ್ ಮೊದಲಾದವರು ನೂತನ ಅಧ್ಯಕ್ಷ ಡಿ.ಜಗದೀಶ್ ಅವರನ್ನು ಅಭಿನಂದಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ…
