Close Menu
    Top News

    ಪ್ರೇರಣಾ ಮಹಿಳಾ ಸೌಹಾರ್ದ ಸಹಕಾರಿ ಸಂಘದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ

    March 11, 2026

    ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಪ್ರಥಮ ವಾರ್ಷಿಕೋತ್ಸವ

    March 11, 2026

    ದೇಶದಲ್ಲಿ 3.49 ಲಕ್ಷ ಸಹಕಾರ ಸಂಘಗಳು ಲಾಭದಾಯಕ: 47,688 ಸಂಘಗಳು ದಿವಾಳಿ ಹಂತದಲ್ಲಿ

    March 11, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ದೇಶದಲ್ಲಿ 3.49 ಲಕ್ಷ ಸಹಕಾರ ಸಂಘಗಳು ಲಾಭದಾಯಕ: 47,688 ಸಂಘಗಳು ದಿವಾಳಿ ಹಂತದಲ್ಲಿ
    News

    ದೇಶದಲ್ಲಿ 3.49 ಲಕ್ಷ ಸಹಕಾರ ಸಂಘಗಳು ಲಾಭದಾಯಕ: 47,688 ಸಂಘಗಳು ದಿವಾಳಿ ಹಂತದಲ್ಲಿ

    adminBy adminMarch 11, 2026

    ನವದೆಹಲಿ: ಭಾರತದಲ್ಲಿ ಪ್ರಸ್ತುತ 8.48 ಲಕ್ಷ ಸಹಕಾರ ಸಂಘಗಳು ಇದ್ದು, ಇವುಗಳ ಪೈಕಿ 3.49 ಲಕ್ಷ ಸಂಘಗಳು ಲಾಭದಾಯಕ ಸ್ಥಿತಿಯಲ್ಲಿವೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಮಂಗಳವಾರ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

    https://chat.whatsapp.com/FCEnlTkAKCC0MGPhXtX4i4
    ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಮಿತ್‌ ಷಾ ಅವರು, ರಾಷ್ಟ್ರೀಯ ಸಹಕಾರಿ ದತ್ತಸಂಚಯದ (ಎನ್‌ಸಿಡಿ) ಮಾಹಿತಿಯ ಪ್ರಕಾರ, 8.48 ಲಕ್ಷ ಸಹಕಾರ ಸಂಘ ಪೈಕಿ 6.59 ಲಕ್ಷ ಸಹಕಾರಿ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ, 1.41 ಲಕ್ಷ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿಲ್ಲ, ಅದರಲ್ಲೂ ದೇಶಾದ್ಯಂತ 47,688 ಸಹಕಾರ ಸಂಘಗಳು ದಿವಾಳಿ ಹಂತದಲ್ಲಿವೆ. ಕ್ರಿಯಾತ್ಮಕ ಸಂಘಗಳಲ್ಲಿ, 3.49 ಲಕ್ಷ ಸಹಕಾರಿ ಸಂಘಗಳು ಲಾಭದಲ್ಲಿ ನಡೆಯುತ್ತಿದ್ದರೆ, 2.11 ಲಕ್ಷ ಸಂಘಗಳು ನಷ್ಟದಲ್ಲಿವೆ. 99,325 ಸಂಘಗಳ ಲಾಭ ಅಥವಾ ನಷ್ಟದ ಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
    ದೇಶದಲ್ಲಿ ಮಹಾರಾಷ್ಟ್ರವು 2.25 ಲಕ್ಷ ಸಂಘಗಳೊಂದಿಗೆ ಅತಿ ಹೆಚ್ಚು ಸಹಕಾರಿ ಸಂಘಗಳನ್ನು ಹೊಂದಿದೆ. ನಂತರದ ಸ್ಥಾನಗಳಲ್ಲಿ 86,519 ಸಂಘಗಳೊಂದಿಗೆ ಗುಜರಾತ್ ಮತ್ತು 46,969 ಸಂಘಗಳೊಂದಿಗೆ ಕರ್ನಾಟಕ ರಾಜ್ಯಗಳು ಇವೆ. ಬಿಹಾರ, ರಾಜಸ್ಥಾನ ಮತ್ತು ತೆಲಂಗಾಣದಂತಹ ರಾಜ್ಯಗಳೂ ಗಮನಾರ್ಹ ಸಂಖ್ಯೆಗಳ ಸಹಕಾರಿ ಸಂಘಗಳನ್ನು ಹೊಂದಿವೆ ಎಂದು ಅಮಿತ್‌ ಷಾ ತಿಳಿಸಿದ್ದಾರೆ. ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ, ವಿಶೇಷವಾಗಿ ಕೃಷಿ, ಸಾಲ, ಮಾರುಕಟ್ಟೆ ಮತ್ತು ಸಮುದಾಯ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಸಹಕಾರಿ ಸಂಘಗಳ ನಿರ್ಣಾಯಕ ಪಾತ್ರವನ್ನು ಅಂಕಿಅಂಶಗಳು ಒತ್ತಿಹೇಳುತ್ತವೆ ಎಂದು ಅಮಿತ್‌ ಷಾ ಹೇಳಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

     

    Lok Sabha National Cooperative Database profitable Union Cooperation Minister Amit Shah
    Previous Articleಪ್ರಭಾಕರ ಪ್ರಭು ಅವರಿಗೆ ರಾಜ್ಯಮಟ್ಟದ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರದಾನ
    Next Article ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಪ್ರಥಮ ವಾರ್ಷಿಕೋತ್ಸವ

    Related Posts

    ಪ್ರೇರಣಾ ಮಹಿಳಾ ಸೌಹಾರ್ದ ಸಹಕಾರಿ ಸಂಘದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ

    March 11, 2026

    ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಪ್ರಥಮ ವಾರ್ಷಿಕೋತ್ಸವ

    March 11, 2026

    ಪ್ರಭಾಕರ ಪ್ರಭು ಅವರಿಗೆ ರಾಜ್ಯಮಟ್ಟದ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರದಾನ

    March 11, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಪ್ರೇರಣಾ ಮಹಿಳಾ ಸೌಹಾರ್ದ ಸಹಕಾರಿ ಸಂಘದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ

    March 11, 2026

    ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಪ್ರಥಮ ವಾರ್ಷಿಕೋತ್ಸವ

    March 11, 2026

    ದೇಶದಲ್ಲಿ 3.49 ಲಕ್ಷ ಸಹಕಾರ ಸಂಘಗಳು ಲಾಭದಾಯಕ: 47,688 ಸಂಘಗಳು ದಿವಾಳಿ ಹಂತದಲ್ಲಿ

    March 11, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.