ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕ್‌ಗಳ ಸಿಬ್ಬಂದಿಗಳು ಮತ್ತು ಆಡಳಿತಾಧಿಕಾರಿಳಿಗೆ ಉಚಿತ ಕೋವಿಡ್ ಲಸಿಕಾ ಶಿಬಿರವು ನಗರದ ಎಮ್.ಸಿ.ಸಿ. ಬ್ಯಾಂಕ್‌ನ ಸಹಯೋಗದೊಂದಿಗೆ ಜರಗಿತು. ಪಟ್ಟಣ ಸಹಕಾರ ಬ್ಯಾಂಕ್‌ಗಲೋಂದಿಗೆ ನಗರದ ಹಲವಾರು ಸಹಕಾರ ಸಂಘಗಳು, ಸೌಹಾರ್ದ ಸಹಕಾರಿಗಳು ಹಾಗೂ ಕೆಲವೊಂದು ರಾಷ್ಟ್ರೀಕೃತ ಬ್ಯಾಂಕುಗಳ ಸಿಬ್ಬಂದಿಗಳು ಕೂಡಾ ಈ ಶಿಬಿರದ ಪ್ರಯೋಜನವನ್ನು ಪಡೆದರು.
ಒಟ್ಟು ದಾಖಲೆಯ 401 ಜನ ಈ ಉಚಿತ ಶಿಬಿರದ ಪ್ರಯೋಜನವನ್ನು ಪಡೆದರು.
ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ಮಂಗಳೂರು ಮಹಾನಗರದ ಮಹಾಪೌರರಾದ ಶ್ರೀ ಪ್ರೇಮಾನಂದ ಶೆಟ್ಟಿಯವರು ಲಸಿಕೆ ಪಡೆಯುವುದರ ಅಗತ್ಯತೆ ಬಗ್ಗೆ ಸ್ಪಷ್ಟ ಪಡಿಸಿದರು. ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮಹಾಮಂಡಳದ ನಿರ್ದೇಶಕರಾದ ಶ್ರೀ ಹರೀಶ್ ಆಚಾರ್ಯ, ಎಮ್.ಸಿ.ಸಿ. ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೋ, ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ನಿರ್ದೇಶಕರಾದ ಶ್ರೀ ಚಿತ್ತರಂಜನ್ ಬೋಳಾರ್, ಜಿಲ್ಲಾ ಲೀಡ್ ಬ್ಯಾಂಕ್ ಮೇನೆಜರ್ ಶ್ರೀ ಪ್ರವೀಣ್ ಕುಮಾರ್, ಎಮ್.ಸಿ.ಸಿ ಬ್ಯಾಂಕ್‌ನ ಉಪ ಮಹಾಪ್ರಬಂಧಕ ಶ್ರೀ ರಾಜ್ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಯೋಗದೊಂದಿಗೆ ಶಿಬಿರವು ಯಶಸ್ವಿಯಾಗಿ ನೆರವೇರಿತು. ಎಮ್.ಸಿ.ಸಿ. ಬ್ಯಾಂಕ್‌ನ ಸಿಬ್ಬಂದಿಗಳು ಸಹಕರಿಸಿದರು.