ಉಪಾಧ್ಯಕ್ಷರಾಗಿ ಸಂಜೀವ ಅಡ್ಯಾರ್ ಆಯ್ಕೆ
ಸುಗಮವಾಗಿ ನಡೆದ ಚುನಾವಣಾ ಪ್ರಕ್ರಿಯೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ನೂತನ ಅಧ್ಯಕ್ಷರಾಗಿ ಮಾತೃಭೂಮಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಭಾಸ್ಕರ ದೇವಸ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಫಲ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪಂಪ್‌ವೆಲ್‌ನಲ್ಲಿರುವ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಕಚೇರಿಯಲ್ಲಿ ಬುಧವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಚುನಾವಣಾ ರಿಟರ್ನಿಂಗ್ ಅಧಿಕಾರಿ ನವೀನ್ ಕುಮಾರ್ ಎಂ.ಎಸ್, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು. ನಿರ್ದೇಶಕರಾಗಿ ವಲ್ಸರಾಜ್ ಎ(ಸ್ವಸ್ತಿಕ್ ಸೌಹಾರ್ದ), ಹರೀಶ ಪುತ್ತೂರಾಯ(ಶಿವಳ್ಳಿ ಸಂಪದ), ದೇವಿಪ್ರಸಾದ್ ಕೆ(ಶ್ರೀ ಸರಸ್ವತಿ ಕ್ರೆಡಿಟ್ ), ಸುಮಲತಾ ನವೀನ್‌ಚಂದ್ರ ಸುವರ್ಣ(ಶ್ರೀ ಗುರು ಸೌಹಾರ್ದ), ವಿನೋದರ ಪೂಜಾರಿ(ಭಾರತ್ ಸೌಹಾರ್ದ), ಗಣೇಶ್ ಶೆಣೈ(ಶ್ರೀ ಪೂರ್ಣಾನಂದ), ಲ್ಯಾನ್ಸಿ ಎ.ಪಿರೇರ(ಬೆಳ್ತಂಗಡಿ ಪ್ರೇರಣಾ ಸೌಹಾರ್ದ), ಅಮೃತ್ ರೈ.ಯು(ಸಮಷ್ಟಿ ಸೌಹಾರ್ದ), ಎಂ.ಎಸ್.ಗುರುರಾಜ್(ಶ್ರೀಶಾ), ಸುಧಾಕರ್(ಗ್ರಾಮ ಸಮೃದ್ಧಿ ಸೌಹಾರ್ದ), ದಾಮೋದರ ಕುಲಾಲ್(ಶ್ರೀಮಾತಾ ಸೌಹಾರ್ದ), ಉರ್ಬಾನ್ ಪಿಂಟೋ(ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ), ನಾರಾಯಣ ಶೆಟ್ಟಿ(ಶ್ರೀರಾಮ ಸೌಹಾರ್ದ), ಚಂದ್ರಶೇಖರ ಕುಮಾರ್(ಶ್ರೀ ಗುರುಶಕ್ತಿ), ಜಗದೀಶ್ ಕೆ.ಆರ್(ಮಂಗಳೂರು ನ್ಯಾಯವಾದಿಗಳ ಸೌಹಾರ್ದ), ಫ್ಲೇವಿ ಡಿಸೋಜ(ಪ್ರೇರಣಾ ಮಹಿಳಾ ವಿವಿಧೋದ್ದೇಶ) ಮತ್ತು ಸರ್ಫರಾಜ್(ಕಾರುಣ್ಯ ಸೌಹಾರ್ದ) ಅವರನ್ನು ಆಯ್ಕೆ ಮಾಡಲಾಯಿತು.
ಹಿರಿಯ ಸಹಕಾರಿ ಎಸ್.ಆರ್.ಸತೀಶ್ಚಂದ್ರ, ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಸ್ಥಾಪಕಾಧ್ಯಕ್ಷ ಎ.ಸುರೇಶ್ ರೈ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ.ಭಟ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ವಿಜಯ ಬಿ.ಎಸ್. ಉಪಸ್ಥಿತರಿದ್ದರು. ಒಕ್ಕೂಟದ ಸಿಇಒ ಚೇತನ್ ಕೊಟ್ಟಾರಿ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.
ಆಯ್ಕೆ ಪ್ರಕ್ರಿಯೆಯ ಬಳಿಕ ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಹಿರಿಯ ಸಹಕಾರಿ ಎಸ್.ಆರ್ ಸತೀಶ್ಚಂದ್ರ, ಸೌಹಾರ್ದ ಸಹಕಾರಿಗೆ ವೇಗ, ಆಧುನಿಕತೆ ದೊರಕಿಸಿಕೊಡಬೇಕಿದೆ. ಆ ನಿಟ್ಟಿನಲ್ಲಿ ಹೊಸ ತಂಡದ ಕೆಲಸ ಮುಂದೆ ಸಾಗಲಿ. ಸೌಹಾರ್ದದ ಅಭಿವೃದ್ಧಿ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತಾಗಬೇಕು. ನಮ್ಮ ನಂತರ ಒಬ್ಬ ಸಕ್ರಿಯ ನಾಯಕ ತಯಾರಾದರೆ ಮಾತ್ರ ನಮ್ಮ ನಾಯಕತ್ವಕ್ಕೆ ಬೆಲೆ ಬರುವುದು ಎಂದು ಹೇಳಿದರು.
ಒಕ್ಕೂಟದ ಸ್ಥಾಪಕಾಧ್ಯಕ್ಷ ಎ.ಸುರೇಶ್ ರೈ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ಹೊಸ ಮುಖಗಳು ಬರಬೇಕು. ಒಕ್ಕೂಟದಲ್ಲಿ ಒಳ್ಳೆಯ ವ್ಯವಸ್ಥೆ ಇಟ್ಟುಕೊಂಡು ರಾಜ್ಯಕ್ಕೆ ಮಾದರಿಯಾಗಿ ಬೆಳೆದು ಬರಬೇಕು. ನಮ್ಮ ಚಿಂತನೆಗಳು, ಚರ್ಚೆಗಳು ಅಬಿವೃದ್ಧಿ ಬಗ್ಗೆ ಇರಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ.ಭಟ್ ಮಾತನಾಡಿ, ಹೊಸ ತಂಡ ಜವಾಬ್ದಾರಿ ವಹಿಸಿಕೊಂಡ ಬಳಿಕ ಹಳೇ ಬೇರು, ಹೊಸ ಚಿಗುರು ಎಂಬಂತೆ ಕೆಲಸ ಮಾಡಬೇಕಿದೆ. ನಮ್ಮ ಜವಾಬ್ದಾರಿಯ ಮಹತ್ವ ಅರಿತು ಜೊತೆಯಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಜಿಲ್ಲಾ ಸಂಯೋಜಕ ವಿಜಯ ಬಿ.ಎಸ್. ಮಾತನಾಡಿ, ಈ ಆಯ್ಕೆ ಪ್ರಕ್ರಿಯೆಯ ಬಳಿಕ ಹೊಸ ಜವಾಬ್ದಾರಿ ಸಮಿತಿಯ ಹೆಗಲೇರಿದೆ. ನೂತನ ಯೋಜನೆ, ಕಾರ್ಯಗಳೊಂದಿಗೆ ಮಂಗಳೂರು ಸಹಕಾರಿಯ ಹಬ್ ಆಗಿ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷರಿಗೆ ಜವಾಬ್ದಾರಿ ಹಸ್ತಾಂತರ ಮಾಡಲಾಯಿತು. ನಿರ್ದೇಶಕರಾದ ಲ್ಯಾನ್ಸಿ ಪಿರೇರ, ಎಂ.ಎಸ್.ಗುರುರಾಜ್ ಮತ್ತು ಸುಮಲತಾ ಸುವರ್ಣ ಶುಭ ಹಾರೈಸಿದರು. ದೇವಿಪ್ರಸಾದ್ ಕೆ ವಂದಿಸಿದರು.
ಹೊಸ ಜವಾಬ್ದಾರಿಯಲ್ಲಿ ಅನೇಕ ಸವಾಲುಗಳಿದ್ದು ಅವನ್ನೆಲ್ಲ ಮೀರಿ ಗೆಲ್ಲಬೇಕಿದೆ. ಇಲ್ಲಿ ಅವಿರೋಧ ಆಯ್ಕೆ ಎಂಬುದು ಎಲ್ಲರಿಗೂ ಮಾದರಿ. ಈ ಚುನಾವಣಾ ಪ್ರಕ್ರಿಯೆ ಎಲ್ಲರಿಗೂ ಮೇಲ್ಪಂಕ್ತಿಯಾಗಬೇಕು. ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ಅಧ್ಯಕ್ಷ ಹುದ್ದೆ ಹೊಸ ಜವಾಬ್ದಾರಿ. ಇಲ್ಲಿ ಅವಿರೋಧ ಆಯ್ಕೆ ಪ್ರಕ್ರಿಯೆಗೆ ಸಹಕರಿಸಿದ ಎಲ್ಲರಿಗೂ ವಂದನೆಗಳು.
ಭಾಸ್ಕರ ದೇವಸ್ಯ, ಅಧ್ಯಕ್ಷರು, ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com