ಆಶ್ರಮದಲ್ಲಿ 180 ಮಂದಿಗೆ ವ್ಯವಸ್ಥೆ
ಮಂಗಳೂರು: ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ವಜ್ರಮಹೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಹೊಸಬೆಳಕು ಸೇವಾ ಟ್ರಸ್ಟ್ ಬೈಲೂರು ಇದರ ಆಶ್ರಮವಾಸಿಗಳಿಗೆ ನೆರವು ನೀಡುವ ಕಾರ್ಯಕ್ರಮ ಶನಿವಾರ ಹೊಸಬೆಳಕು ಸೇವಾ ಟ್ರಸ್ಟ್‌ನ ಸಭಾಂಗಣದಲ್ಲಿ ನೆರವೇರಿತು.
ಸಮಾರಂಭದ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅವರು ಆಶ್ರಮಕ್ಕೆ 1300 ವ್ಯಾಟ್ಸ್ ಪ್ರಿಸ್ಟೇಜ್ ಮಿಕ್ಸಿ, 25 ನೀಲ್ ಕಮಲ್ ಚೇರ್, 25 ತಲೆದಿಂಬು, 50 ಕೆಜಿ ಅಕ್ಕಿ ಮತ್ತು ಅಡುಗೆ ಸಾಮಗ್ರಿ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಶ್ರಮ ವಾಸಿಗಳಿಗೆ ನೆರವು ನೀಡಿರುವುದು ಸಂಸ್ಥೆಯ ಸ್ಥಾಪಕಾಧ್ಯಕ್ಷ ದಿ.ಪಾಲ್ಕೆ ಬಾಬುರಾಯ ಆಚಾರ್ ಅವರ ಆತ್ಮಕ್ಕೆ ಖುಷಿ ತಂದಿರಬಹದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಹರಿನಾರಾಯಣ ಭಂಡಿ ಪೆರ್ಡೂರು ಮಾತನಾಡಿ, ಸೇವಾಶ್ರಮದ ಕಾರ್ಯವೈಖರಿಯನ್ನು ಶ್ಲಾಘಿಸಿ ಎಲ್ಲರೂ ಆರೋಗ್ಯವಂತರಾಗಿ ಎಂದು ಶುಭಹಾರೈಸಿದರು. ಸಂಸ್ಥೆಯ ಸಂಸ್ಥಾಪಕಿ ತನುಜಾ ತರುಣ್ ಮಾತನಾಡಿ, ಸುಮಾರು ಹತ್ತು ವರ್ಷಗಳಿಂದ ಆಶ್ರಮದ ನಿರ್ವಹಣೆಯ ಬಗ್ಗೆ ವಿವರಿಸಿ ಸಾಧನೆಯನ್ನು ಬಣ್ಣಿಸಿ, ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಸಂಸ್ಥೆ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಮುಂದುವರಿಯಲಿ. ಭಗವಂತ ಸಂಸ್ಥೆಗೂ, ಆಡಳಿತ ಮಂಡಳಿ ಹಾಗೂ ಎಲ್ಲಾ ಸಿಬ್ಬಂದಿಗಳಿಗೂ ಅನುಗ್ರಹಿಸಲಿ ಎಂದು ಹಾರೈಸಿದರು. ಆಶ್ರಮದ 180 ಮಂದಿಗೆ ಉಪಾಹಾರದ ವ್ಯವಸ್ಥೆ ಮಾಡಲಾಯಿತು.
https://chat.whatsapp.com/KMsVn4jxIFJ7RG1gTWHCLK
ಎಸ್.ಕೆ.ಗೋಲ್ಡ್‌ಸ್ಮಿತ್ಸ್‌ನ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ ಕುತ್ಯಾರು, ಪ್ರಕಾಶ ಆಚಾರ್ಯ ಕುಂಟಾಡಿ, ಉಡುಪಿ ಶಾಖಾ ವ್ಯವಸ್ಥಾಪಕರಾದ ಬಿ.ಲಕ್ಷ್ಮೀನಾರಾಯಣ ಆಚಾರ್ಯ, ಮಾರಾಟಾಧಿಕಾರಿ ಜಯಪ್ರಕಾಶ್ ಬಿ. ಎಸ್, ಸಿಬ್ಬಂದಿಗಳಾದ ಆಡಳಿತ ಕಚೇರಿಯ ಸಹನಾ ಎ, ಮೂಡುಬಿದಿರೆ ಶಾಖೆಯ ಪ್ರಶಾಂತ ಕುಮಾರ್, ಪಡುಬಿದ್ರೆ ಶಾಖೆಯ ಚಂದ್ರಮೋಹನ್, ಕಿನ್ನಿಗೋಳಿ ಶಾಖೆಯ ರಮಾಶ್ರೀ, ಸವಿತಾ, ಸಂದೇಶ್, ಸಂಜಯ್ ಹಾಗೂ ನಿವೃತ್ತ ಶಾಖಾ ವ್ಯವಸ್ಥಾಪಕರಾದ ಬಿ.ನಾಗರಾಜ ಪ್ರಭು ಪೆರ್ಡೂರು, ಮತ್ತು ನಿವೃತ್ತ ಹಿರಿಯ ಸಹಾಯಕಿ ರಜನಿ ಆರ್.ರಾವ್, ಜನತಾನಿಧಿ ಸಂಗ್ರಾಹಕರಾದ ಹರೀಶ್ ಕುಲಾಲ್, ವಾಣಿ, ರವಿರಾಜ್ ಆಚಾರ್ಯ, ಸರಾಫರಾದ ಮಹೇಶಾಚಾರ್ಯ, ಸದಸ್ಯರಾದ ಪ್ರಸನ್ನ ಪ್ರಭು ಉಪಸ್ಥಿತರಿದ್ದರು. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಶಾಖಾ ವ್ಯವಸ್ಥಾಪಕ ನವೀನ್ ಕುಮಾರ್ ವಂದಿಸಿದರು.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ಮೇಲ್ ಮಾಡಿ:
ಇಮೇಲ್: sahakaraspandana@gmail.com
ಮಾಹಿತಿಗೆ: 9901319694