ದಿನಾಂಕ:20.11.2023 ರಂದು ಸೋಮವಾರ ಬೆಳಗ್ಗೆ 09.00ಗಂಟೆಗೆ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆವರಣದಲ್ಲಿ ಜರುಗಲಿರುವ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ, ಕರ್ನಾಟಕ ರಾಜ್ಯ ಸಹಕಾರ ಚಳುವಳಿಯ ಬೆಳವಣಿಗೆಗೆ ಶ್ರೀಯುತರು ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು “ಸಹಕಾರ ರತ್ನ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಿದೆ.
ಸಹಕಾರ ಕ್ಷೇತ್ರದ ಅನುಭವ :
ಸುರೇಶ್ ರೈ ಯವರು ಕಳೆದ 25 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು ದಿವ್ಯಜ್ಯೋತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 7 ವರ್ಷ 6 ತಿಂಗಳು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸಂಸ್ಥೆಯನ್ನು ಯಶಸ್ವಿ ಸೊಸೈಟಿಯಾಗಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಿರುತ್ತಾರೆ.
ಶ್ರೀಯುತರು 2011ರಲ್ಲಿ ಓಡಿಯೂರು ಶ್ರೀ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿಯನ್ನು ಆರಂಭಿಸಿ, ಸ್ಥಾಪಕಾಧ್ಯಕ್ಷರಾಗಿ ಪ್ರಸ್ತುತ ಸಹಕಾರಿಯ ಅಧ್ಯಕ್ಷರ ನೆಲೆಯಲ್ಲಿ ಕಾರ್ಯನಿರ್ವಹಿಸಿ ಸಂಸ್ಥೆಯನ್ನು ರಾಜ್ಯದಲ್ಲೇ ಒಂದು ಮಾದರಿ ಸೌಹಾರ್ದ ಸಹಕಾರಿಯಾಗಿ ಕಟ್ಟಿಬೆಳೆಸಿರುತ್ತಾರೆ.
ಓಡಿಯೂರು ಶ್ರೀ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿಯ ಮೂಲಕ ಸುಮಾರು 6500ಕ್ಕೂ ಹೆಚ್ಚಿನ ಸ್ವಸಹಾಯ ಗುಂಪುಗಳನ್ನು ರಚಿಸಿ ಸುಮಾರು 50,000ಕ್ಕೂ ಹೆಚ್ಚಿನ ಗ್ರಾಮೀಣ ಭಾಗದ ಬಡ/ಹಿಂದುಳಿದ ಮಹಿಳೆಯರಿಗೆ ಸಾಲ ಸೌಲಭ್ಯದ ಜೊತೆಗೆ ಅವರ ಜೀವನಾಭಿವೃದ್ಧಿ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದ್ದಲ್ಲದೆ ಗುಂಪಿನ ಸದಸ್ಯರಿಗೆ ಮರಣ ಸಂತ್ವಾನ ನಿಧಿಯ ಮೂಲಕ ಕಷ್ಟದ ಸಂದರ್ಭದಲ್ಲಿ ನೆರವಾಗಿರುತ್ತಾರೆ.
ಓಡಿಯೂರು ಶ್ರೀ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿಯನ್ನು ರೂ. 250 ಕೋಟಿಗೂ ಹೆಚ್ಚಿನ ಠೇವಣಿ ಮತ್ತು ಸಾಲ ಯೋಜನೆಗಳ ಮೂಲಕ ಯಶಸ್ವಿಗೊಳಿಸುವಲ್ಲಿ ಶ್ರಮವಹಿಸಿದ್ದು ಮಾತ್ರವಲ್ಲದೆ ಸಂಸ್ಥೆಯ ಆರಂಭದಿಂದಲೇ ಸದಸ್ಯರಿಗೆ 15% ನಿರಂತರ ಡಿವಿಡೆಂಡ್ ನೀಡುತ್ತಾ ಬರುವ ಜನಸ್ನೇಹಿ ಸಂಸ್ಥೆಯನ್ನಾಗಿ ಬೆಳೆಸಿರುತ್ತಾರೆ. ಸದ್ರಿ ಸಹಕಾರಿಯು ಪ್ರಸ್ತುತ 19 ಶಾಖೆಗಳನ್ನು ಹೊಂದಿದ್ದು, ಸಹಕಾರಿ ಮತ್ತು ಗ್ರಾಮ ವಿಕಾಸ ಯೋಜನೆಯಡಿ ಸುಮಾರು 350ಕ್ಕೂ ಹೆಚ್ಚಿನ ಉದ್ಯೋಗಾವಕಾಶ ನೀಡಿದೆ. ಅದರಲ್ಲಿ 95% ಉದ್ಯೋಗವನ್ನು ಮಹಿಳೆಯರಿಗೆ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿರುತ್ತಾರೆ.
ಕೋವಿಡ್ ಸಂದರ್ಭದಲ್ಲಿ ರಿಕ್ಷಾ ಚಾಲಕರಿಗೆ ಇನ್ಶೂರೆನ್ಸ್ ಕಟ್ಟಲು ಬಡ್ಡಿರಹಿತ ಸಾಲದ ಯೋಜನೆಗಳನ್ನು ರೂಪಿಸುವಲ್ಲಿ ಶ್ರೀಯುತರ ಪಾತ್ರವಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾವಯವ ಸುಸ್ಥಿರ ಕೃಷಿ ಅಭಿಯಾನದ ಮೂಲಕ ರೈತರಿಗೆ ತೋಟದಲ್ಲಿಯೇ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿ ಸುಮಾರು 10,000 ರೈತರು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ ದಕ್ಚಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಸ್ಥಾಪಕಾಧ್ಯಕ್ಷರಾಗಿ ಜಿಲ್ಲೆಯ ಸೌಹಾರ್ದ ಸಹಕಾರಿಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ.
ಲಯನ್ಸ್ ಸಂಸ್ಥೆಯಲ್ಲಿ ಸಕ್ರಿರಾಗಿ ಹಲವಾರು ಸಮಾಜಮುಖಿ ಕೆಲಸದಲ್ಲಿ ಭಾಗಿಯಾಗಿದ್ದು ಪ್ರಸ್ತುತ ಲಯನ್ಸ್ ನ ಕ್ಯಾಬಿನೆಟ್ ಮೆಂಬರ್ ಆಗಿರುತ್ತಾರೆ.
ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ ಸೇವೆಸಲ್ಲಿಸುವ ಮುಖಾಂತರ ಸಹಕಾರ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿರುತ್ತಾರೆ.
ಬಂಟರ ಯಾನೆ ನಾಡವರ ಸಂಘ (ರಿ ).ದಲ್ಲಿ ಹಲವಾರು ಜವಾಬ್ದಾರಿ ನಿರ್ವಹಿಸಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಪ್ರಸ್ತುತ ಸಂಸ್ಥೆಯಿಂದ ನಡೆಸುವ ಬಂಟ್ಸ್ ಹಾಸ್ಟೆಲ್ ನ ಸಂಚಾಲಕರಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಇವರು ಮಕರ ಜ್ಯೋತಿ ಇದರ ವ್ಯವಸ್ಥಾಪಕ ನಿರ್ದೇಶಕರಾಗಿ , ಜಯಂಬಿಕ ಚಿಟ್ಸ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕರಾಗಿ, ತರ್ಜನಿ ಇನ್ಸೂರೆನ್ಸ್ ಬ್ರೋಕರೇಜ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕರಾಗಿ, ದಿವ್ಯಜೋತಿ ಎಂಟರ್‌ಪ್ರೈಸ್ ಇದರ ಮಾಲೀಕರಾಗಿ ಜಿಲ್ಲೆಯಲ್ಲಿ ಯಶಸ್ವಿ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.