ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ (ನಿ) ಇದರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡ ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ ನಿ. ಇದರ 34ನೇ ಮಹಾ ಸಭೆಯು ದಿನಾಂಕ: 4.09.2023ರಂದು ನಗರದ “ಹೋಟೇಲ್ ಶ್ರೀನಿವಾಸ್ “ನಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಸಿ. ಪ್ರಭಾಕರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಕಾರ್ಯವೈಖರಿ, ಮತ್ತು ಸಂಘ ಬೆಳೆಯಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ಮಾಡುವ ಇಂಗಿತ ವ್ಯಕ್ತಪಡಿಸಿ ಸದಸ್ಯರೆಲ್ಲರೂ ಒಗ್ಗಟ್ಟಿನಲ್ಲಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೋರಿದರು.
ವರದಿ ವರ್ಷದಲ್ಲಿ ಸಂಘವು ಒಟ್ಟು 4013 ಸದಸ್ಯರನ್ನು ಹೊಂದಿದ್ದು ರೂ. 5,42,00,500 ಪಾಲು ಬಂಡವಾಳವನ್ನು, ರೂ. 47,30,92,595 ಠೇವಣಿ ಹೊಂದಿದ್ದು, ರೂ.61,48,98,037 ದುಡಿಯುವ ಬಂಡವಾಳದೊಂದಿಗೆ ಒಟ್ಟು ರೂ.90,01,83,530 ವ್ಯವಹಾರ ನಡೆಸಿದ್ದು ವರ್ಷಾಂತ್ಯಕ್ಕೆ ಒಟ್ಟು ರೂ.43,21,21,950 ಹೊರಬಾಕಿ ಸಾಲ ಇರುತ್ತದೆ.
ನಿಧನ ಹೊಂದಿದ ಸಂಘದ ಸದಸ್ಯರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ರಾಜ್ಯ ಮಟ್ಟದ ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಿಕ್ಷಕರನ್ನು ಗೌರವಿಸಲಾಯಿತು. ಸಂಘದ ಸದಸ್ಯರ ಮಕ್ಕಳಲ್ಲಿ 2022-2023ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಈ ಪ್ರತಿಭಾ ಪುರಸ್ಕಾರದ ಪ್ರಾಯೋಜಕತ್ವವನ್ನು ವಹಿಸಿದ ಸಂಘದ ಸದಸ್ಯರಾದ ಮಿಲಾಗ್ರಿಸ್ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ಶ್ರೀ ಸ್ಟ್ಯಾನಿ ಫ್ರಾನ್ಸಿಸ್ ಬಾರೆಟ್ಟೊರವರನ್ನು ಅಭಿನಂದಿಸಲಾಯಿತು.
ಸದಸ್ಯರಾದ ಕಲಾಶ್ರೀ ವಿದ್ವಾನ್ ಶ್ರೀ ಕೆ. ಚಂದ್ರಶೇಖರ ನಾವಡರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಸಂಘದ 2022-2023ನೇ ಸಾಲಿನ ವರದಿ, ಲೆಕ್ಕ ಪತ್ರ ಮಂಡನೆ, ಸದಸ್ಯರ ಪ್ರಶ್ನೆಗಳಿಗೆ ಸಮಜಾಯಿಸಿಕೆ, ಅಂದಾಜು ಆಯ್ಯವ್ಯಯದ ಮಂಡನೆ ಇತ್ಯಾದಿಗಳನ್ನು ಕಾರ್ಯ ಸೂಚಿಯಂತೆ ನೆರವೇರಿಸಲಾಯಿತು.
ಸಂಘದ ನಿರ್ದೇಶಕರುಗಳಾದ ಶ್ರೀ ರಾಮಶೇಷ ಶೆಟ್ಟಿ, ಶ್ರೀ ಉದಯಶಂಕರ ನಾಯ್ಕ್ ಟಿ., ಶ್ರೀ ಪಿ. ಡಿ. ಶೆಟ್ಟಿ, ಶ್ರೀ ಅಂಬರೀಶ್, ಶ್ರೀ ಸುರೇಶ್ ರಾವ್ ಬಿ., ಶ್ರೀಮತಿ ಹಿಲ್ಡಾ ಕ್ಲೆಮೆನ್ಸಿಯಾ ಪಿಂಟೋ, ಶ್ರೀ ವಸಂತ ಕೆ., ಶ್ರೀ ಪುಟ್ಟಸ್ವಾಮಿ ಆರ್., ಶ್ರೀ ವಿಜಯ ಆಳ್ವ, ಶ್ರೀ ಮಾರ್ಕ್ ಜೆ. ಮೆಂಡೋನ್ಸಾ, ಶ್ರೀ ಚಂದ್ರಶೇಖರ್ ಸಿ. ಎಚ್, ಶ್ರೀ ತಿಪ್ಪೋಜಿ ಎಮ್. ವೈ, ಶ್ರೀಮತಿ ರೀಟಾ ಡೆಸಾ, ಶ್ರೀಮತಿ ವನಿತಾ, ಶ್ರೀ ಉಸ್ಮಾನ್ ಜಿ. ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಶ್ರೀಮತಿ ಶರ್ಮಿಳಾ ಕೆ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಶ್ರೀ ಕೆ. ಎಂ. ಕೆ. ಮಂಜನಾಡಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.