Close Menu
    Top News

    ಪರಿವರ್ತನಾ ಕೋ ಆಪರೇಟಿವ್ ಸೊಸೈಟಿಯ ನೂತನ ಕಿನ್ನಿಗೋಳಿ ಶಾಖೆ ಶುಭಾರಂಭ

    November 28, 2026

    ಡಾ. ಎಂ.ಎನ್ ರಾಜೇಂದ್ರ ಕುಮಾರ್ ಸಹಕಾರಿ ಚಳವಳಿಗೆ ಸ್ಫೂರ್ತಿ

    November 27, 2026

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್‌ಗೆ ‘ಕರುನಾಡ ರತ್ನ’ ಪ್ರಶಸ್ತಿ

    November 27, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪರಿವರ್ತನಾ ಕೋ ಆಪರೇಟಿವ್ ಸೊಸೈಟಿಯ ನೂತನ ಕಿನ್ನಿಗೋಳಿ ಶಾಖೆ ಶುಭಾರಂಭ
    News

    ಪರಿವರ್ತನಾ ಕೋ ಆಪರೇಟಿವ್ ಸೊಸೈಟಿಯ ನೂತನ ಕಿನ್ನಿಗೋಳಿ ಶಾಖೆ ಶುಭಾರಂಭ

    adminBy adminNovember 28, 2026

    ಕಿನ್ನಿಗೋಳಿ: ಜಂಕ್ಷನ್ ಬಳಿ ಇರುವ ಉಟೋಪಿಯ ಕಟ್ಟಡದ ಮೊದಲನೇ ಮಹಡಿಯಲ್ಲಿ ಪರಿವರ್ತನಾ ಕೋ ಆಪರೇಟಿವ್ ಸೊಸೈಟಿಯ ನೂತನ ಶಾಖೆ ಉದ್ಘಾಟನೆಯಾಯಿತು.

    https://chat.whatsapp.com/FCEnlTkAKCC0MGPhXtX4i4

    ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗುರುರಾಜ್ ಮಲ್ಲಿಗೆಯಂಗಡಿ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಪರಿವರ್ತನೆ ಆಗಬೇಕೆನ್ನುವ ಉದ್ದೇಶದಿಂದ ಪರಿವರ್ತನಾ ಕೋ ಆಪರೇಟಿವ್ ಸೊಸೈಟಿ ಆರಂಭವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಸ್ಪರ್ಧೆ ಎಂಬುದು ಎಲ್ಲಾ ವಿಭಾಗದಲ್ಲೂ ಸರ್ವೆ ಸಾಮಾನ್ಯ, ಅಂತಹುದರಲ್ಲಿ ಈ ಸೊಸೈಟಿ ಇತರ ಸೊಸೈಟಿಗಳಿಗೆ ಸ್ಪರ್ದೆ ನೀಡಿ ಅತೀ ಕಡಿಮೆ ಅವಧಿಯಲ್ಲಿ ಉತ್ತಮ ವ್ಯವಹಾರ ಹೊಂದಿರುವುದು ಶ್ಲಾಘನೀಯ. ಅತೀ ಹೆಚ್ಚು ಬ್ಯಾಂಕಿಂಗ್ ಹಾಗೂ ಉದ್ದಿಮೆ ಇರುವ ಕಿನ್ನಿಗೋಳಿ ಪರಿಸರದಲ್ಲಿ ನೂತನ ಶಾಖೆ ಆರಂಭಿಸಿ, ಈ ಭಾಗದ ಬಡವರಿಗೆ ಸಾಲ ಸೌಲಭ್ಯ ನೀಡಿ ಅವರ ಆರ್ಥಿಕ ಸಬಲೀಕರಣ ಮಾಡುವ ಸಂಸ್ಥೆಯಾಗಲಿ ಹಾಗೂ ಹೆಚ್ಚಿನ ಸದಸ್ಯರನ್ನು ಸಂಸ್ಥೆಗೆ ಸೇರಿಸುವ ಮೂಲಕ ಜನರ ಪ್ರೀತಿ ವಿಶ್ವಾಸವನ್ನು ಗಳಿಸಲಿ ಎಂದು ಶುಭ ಹಾರೈಸಿದರು.

    ಸಾಮಾಜಿಕ ಕಾರ್ಯಕರ್ತರಾದ ಬಿ.ಕೆ ಇಮ್ತಿಯಾಜ್ ಮಾತನಾಡಿ , ಇವತ್ತಿನ ಸವಾಲಿನ ಕಾಲಘಟ್ಟದಲ್ಲಿ ಸಾಧಿಸಿ ತೋರಿಸಬೇಕು ಎಂದು ಛಲ ಬಿಡದೆ ಬಹಳ ಸಣ್ಣ ಅವಧಿಯಲ್ಲಿ ಮೂರು ಶಾಖೆಗಳನ್ನು ಆರಂಭಿಸಿದ ಕೃಷ್ಣಾನಂದ ಡಿ. ಯವರ ನೇತೃತ್ವದ ಪರಿವರ್ತನಾ ಕೋ ಆಪರೇಟಿವ್ ಸೊಸೈಟಿಗೆ ಅಭಿನಂದನೆಯನ್ನು ಸಲ್ಲಿಸಿದರು. ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಕೋ ಆಪರೇಟಿವ್ ಸೊಸೈಟಿಗಳ ಬಗ್ಗೆ ನಾವೆಲ್ಲರೂ ವಿಮರ್ಶೆ ಮಾಡಬೇಕು ಏಕೆಂದರೆ ರಾಷ್ಟ್ರೀಕೃತ ಬ್ಯಾಂಕುಗಳು ಸೇವೆ ಮಾಡುವುದರೊಂದಿಗೆ ಪ್ರತೀಯೊಂದಕ್ಕೂ ವಿವಿಧ ಶುಲ್ಕಗಳನ್ನು ವಿಧಿಸುತ್ತದೆ. ಹಾಗಾಗಿ ಅಂತಹ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸವಾಲನ್ನು ನೀಡಬೇಕಾದರೆ ಜನಸೋಮಾನ್ಯರಾದ ನಾವೆಲ್ಲರೂ ಇಂತಹ ಕೋ ಆಪರೇಟಿವ್ ಸೊಸೈಟಿಗಳನ್ನು ಬೆಳೆಸಬೇಕಾದಂತಹ ಅನಿವಾರ್ಯತೆ ಇದೆ ಎಂದರು.

    ವೇದಿಕೆಯಲ್ಲಿ ನಂದಿನಿ ಪತ್ತಿನ ಸಹಕಾರ ಸಂಘದ ‌ಸಿಇಓ ಶಶಿಧರ ಶೆಟ್ಟಿ ಕಟೀಲು, ಉದ್ಯಮಿ ಶರತ್ ಕುಮಾರ್ , ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ವನಿತಾ ಅರುಣ್ ಭಂಡಾರಿ, ಮಂಗಳೂರು ವಿಮಾನ ನಿಲ್ದಾಣ ನಿರ್ವ‌ಸಿತರ ಸಂಘದ ಅಧ್ಯಕ್ಷರಾದ ವೆಂಕಪ್ಪ ಬಜ್ಪೆ, ಮಂಗಳೂರು ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಪದ್ಮನಾಭ ಬಿ. ಮತ್ತಿತರರು ಉಪಸ್ಥಿತರಿದ್ದರು. ಸೊಸೈಟಿಯ ಸಿ.ಇ.ಓ ಶ್ರೀಮತಿ ರೀಷಾ ಪ್ರಸ್ತಾವನೆಗೈದರು, ಉಪಾಧ್ಯಕ್ಷೆ ಶ್ರೀಮತಿ ವೈಶಾಲಿ ಕಾರ್ಯಕ್ರಮ ನಿರೂಪಿಸಿದರು, ಶಾಖಾ ಪ್ರಬಂಧಕಿ ಕು.ಶ್ರೇಯಾ ಸ್ವಾಗತಿಸಿದರು, ಮಂಗಳೂರು ಶಾಖಾ ಪ್ರಬಂಧಕಿ ಶ್ರೀಮತಿ ಲಾವಣ್ಯ ವಂದಿಸಿದರು.

    Co Operative ministry Cooperative Cooperative Department Cooperative Registrar Parivarthana Co Operative Society Bajpe Utopia building
    Previous Articleಡಾ. ಎಂ.ಎನ್ ರಾಜೇಂದ್ರ ಕುಮಾರ್ ಸಹಕಾರಿ ಚಳವಳಿಗೆ ಸ್ಫೂರ್ತಿ

    Related Posts

    ಡಾ. ಎಂ.ಎನ್ ರಾಜೇಂದ್ರ ಕುಮಾರ್ ಸಹಕಾರಿ ಚಳವಳಿಗೆ ಸ್ಫೂರ್ತಿ

    November 27, 2026

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್‌ಗೆ ‘ಕರುನಾಡ ರತ್ನ’ ಪ್ರಶಸ್ತಿ

    November 27, 2026

    ನಾಳೆ ಪರಿವರ್ತನಾ ಕೋ ಆಪರೇಟಿವ್‌ ಸೊಸೈಟಿಯ ಕಿನ್ನಿಗೋಳಿ ಶಾಖೆ ಉದ್ಘಾಟನೆ

    November 26, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಪರಿವರ್ತನಾ ಕೋ ಆಪರೇಟಿವ್ ಸೊಸೈಟಿಯ ನೂತನ ಕಿನ್ನಿಗೋಳಿ ಶಾಖೆ ಶುಭಾರಂಭ

    November 28, 2026

    ಡಾ. ಎಂ.ಎನ್ ರಾಜೇಂದ್ರ ಕುಮಾರ್ ಸಹಕಾರಿ ಚಳವಳಿಗೆ ಸ್ಫೂರ್ತಿ

    November 27, 2026

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್‌ಗೆ ‘ಕರುನಾಡ ರತ್ನ’ ಪ್ರಶಸ್ತಿ

    November 27, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.