ಬಜ್ಪೆ: ಪರಿವರ್ತನಾ ಕೋ ಆಪರೇಟಿವ್ ಸೊಸೈಟಿ ಬಜ್ಪೆ ಇದರ ನೂತನ ಕಿನ್ನಿಗೋಳಿ ಶಾಖೆಯ ಉದ್ಘಾಟನಾ ಸಮಾರಂಭ ನವೆಂಬರ್ 27ರಂದು ಬೆಳಗ್ಗೆ 10ಕ್ಕೆ ಉಲ್ಲಂಜೆಯ ರಾಮ ಮಂದಿರ ರಸ್ತೆಯ ಉಟೋಪಿಯ ಕಟ್ಟಡದ ಮೊದಲನೇ ಮಹಡಿಯಲ್ಲಿ ನಡೆಯಲಿದೆ.
https://chat.whatsapp.com/FCEnlTkAKCC0MGPhXtX4i4
ಪರಿವರ್ತನಾ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಾನಂದ ಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗುರುರಾಜ್ ಮಲ್ಲಿಗೆಯಂಗಡಿ ಉದ್ಘಾಟಿಸುವರು. ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಜೋಸೆಫ್ ಕ್ವಾಡ್ರಸ್, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಕೌನ್ಸಿಲರ್ ದಾಮೋದರ್ ಶೆಟ್ಟಿ ಕೊಡೆತ್ತೂರು, ಕಟೀಲು ಶ್ರೀ ದುರ್ಗಾಪರಮೇಶ್ವರಿ ಪದವಿಪೂರ್ವ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲರಾದ ಸೋಮಪ್ಪ ಅಲಂಗಾರ್, ಕಿನ್ನಿಗೋಳಿಯ ಯುವ ಉದ್ಯಮಿ ಶರತ್ ಕುಮಾರ್ ಎಚ್.ಆರ್, ಕ.ರ.ಸಂ.ಸ (ಸ್ವಾಭಿಮಾನಿ ಬಿ.ಕೃಷ್ಣಪ್ಪ ಬಳಗ) ಇದರ ದ.ಕ. ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ, ಕಟೀಲು ನಂದಿನಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ಕಟೀಲು, ಸಾಮಾಜಿಕ ಕಾರ್ಯಕರ್ತರಾದ ಬಿ.ಕೆ ಇಮ್ತಿಯಾಜ್, ವನಿತಾ ಅರುಣ್ ಭಂಡಾರಿ ಬಜ್ಪೆ, ಮಂಗಳೂರು ವಿಮಾನ ನಿಲ್ದಾಣ ನಿರ್ವಸಿತರ ಅ ಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಪ್ಪ, ಕಟ್ಟಡದ ಮಾಲೀಕರಾದ ಕೆ.ವೇದವ್ಯಾಸ ಉಡುಪ, ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಉಪಕುಲಸಚಿವರಾದ ಪದ್ಮನಾಭ ಬಿ., ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಶಿವಲಿಂಗಯ್ಯ, ಕಟೀಲು ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಷಾ, ಗ್ರಾಮೀಣ ಅಂಚೆ ನೌಕರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹರೀಶ್ವರ ರಾವ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಸ್ಥೆಯ ಉಪಾಧ್ಯಕ್ಷರಾದ ವೈಶಾಲಿ, ಸಿಇಒ ರೀಷಾ, ಶಾಖಾ ವ್ಯವಸ್ಥಾಪಕರಾದ ಲಾವಣ್ಯ ಮತ್ತು ಶ್ರೇಯಾ, ನಿರ್ದೇಶಕರಾದ ಜಯಲಕ್ಷ್ಮೀ, ಕರುಣಾಕರ, ರುಕ್ಮಯ ಅಮೀನ್, ಆಲ್ವಿನ್ ಎಫ್.ಡಿಸೋಜ, ರಾಘವೇಂದ್ರ, ಕಮಲಾಕ್ಷ, ಪದ್ಮನಾಭ ಅಮೀನ್, ಸತೀಶ್ ಎಂ.ಜಿ., ಯಮುನಾ ಕಾಂಚನ್, ನಂದಾಕ್ಷಿ, ಎಂ.ಕೆ ಅಶ್ರಫ್ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


