Close Menu
    Top News

    ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮ್ಯಾರಥಾನ್‌ ಸಂಪನ್ನ

    October 27, 2026

    ವಿಮಾನಯಾನಕ್ಕೂ ಸಹಕಾರ ಕ್ಷೇತ್ರ ಲಗ್ಗೆ!!

    October 27, 2026

    ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಸಂಭ್ರಮಕ್ಕೆ ನಾಳೆ ಚಾಲನೆ: ಬೆಳ್ಳಿ ಹಬ್ಬಕ್ಕೆ 25 ಕಾರ್ಯಕ್ರಮಗಳ ಮೆರುಗು

    October 27, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಸಂಭ್ರಮಕ್ಕೆ ನಾಳೆ ಚಾಲನೆ: ಬೆಳ್ಳಿ ಹಬ್ಬಕ್ಕೆ 25 ಕಾರ್ಯಕ್ರಮಗಳ ಮೆರುಗು
    News

    ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಸಂಭ್ರಮಕ್ಕೆ ನಾಳೆ ಚಾಲನೆ: ಬೆಳ್ಳಿ ಹಬ್ಬಕ್ಕೆ 25 ಕಾರ್ಯಕ್ರಮಗಳ ಮೆರುಗು

    adminBy adminOctober 27, 2026

    ಮಂಗಳೂರು: 2002ರಲ್ಲಿ ಸ್ಥಾಪನೆಯಾಗಿರುವ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘವು ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ಅಕ್ಟೋಬರ್ 28ರಂದು ಬೆಳ್ಳಿ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ಲಭಿಸಲಿದೆ. ರಜತ ಸಂಭ್ರಮ ವಿಶೇಷವಾಗಿ ಅಶಕ್ತರಿಗೆ ಬೆಂಬಲ, ಸಾಧಕರಿಗೆ ಸನ್ಮಾನ, ದಿವ್ಯಾಂಗರಿಗೆ ಪ್ರೋತ್ಸಾಹ ಸಹಿತ 25 ಕಾರ್ಯಕ್ರಮಗಳು ವರ್ಷವಿಡೀ ಸಂಪನ್ನಗೊಳ್ಳಲಿದೆ.

    https://chat.whatsapp.com/FCEnlTkAKCC0MGPhXtX4i4
    ರಜತ ಮಹೋತ್ಸವಕ್ಕೆ ನಾಳೆ ವಿಧ್ಯುಕ್ತ ಚಾಲನೆ ದೊರೆಯಲಿದ್ದು, ಬಂಟ್ಸ್ ಹಾಸ್ಟೆಲ್ ಬಳಿಯ ಸುಜೀರ್‌ ಸಿ.ವಿ.ನಾಯಕ್ ಹಾಲ್‌ನಲ್ಲಿ ಉದ್ಘಾಟನೆ ನೆರವೇರಲಿದೆ. ರಜತ ವರ್ಷದ ಸಂಖ್ಯೆಯನ್ನು ಸಾಂಕೇತಿಸಿ 25 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದಲ್ಲಿನ ಅಶಕ್ತರು, ಅಸಹಾಯಕರು, ರೋಗಿಗಳ ನೋವಿಗೆ ಸ್ಪಂದಿಸಲು ಸಂಸ್ಥೆ ತೀರ್ಮಾನಿಸಿದೆ. ಮೊಂಟೆಪದವಿನ ದಿವ್ಯಾಂಗ ಚೇತನರ ಸಂಸ್ಥೆಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದು ಇದನ್ನು ಸಂಸ್ಥೆಯ ಸಂಚಾಲಕ ವಿನೋದ್ ಶೆಣೈ ಅವರಿಗೆ ಹಸ್ತಾಂತರಿಸಲಾಗುವುದು. ತೀರಾ ಬಡ ಕುಟುಂಬಗಳ 25 ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಮಾರಕ ಕಾಯಿಲೆ ಪೀಡಿತ 25 ರೋಗಿಗಳಿಗೆ ಹಣಕಾಸು ನೆರವು, ಪ್ರಕೃತಿ ಸಂರಕ್ಷಣೆ ಉದ್ದೇಶದಿಂದ 1000 ಸಸಿಗಳನ್ನು ನೆಡುವುದು ಕೂಡ ಕಾರ್ಯಕ್ರಮಗಳ ಯಾದಿಯಲ್ಲಿದೆ. ಆರ್ಥಿಕ ನೆರವನ್ನು ಹಂತ ಹಂತವಾಗಿ ಅರ್ಹರಿಗೆ ಹಸ್ತಾಂತರಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ಶೆಣೈ ತಿಳಿಸಿದ್ದಾರೆ.
    ಕೃಷಿ-ಉದ್ಯಮ ರಂಗದಲ್ಲಿನ ಅಪೂರ್ವ ಸಾಧನೆಗಾಗಿ ಅಚ್ಯುತ ನಾಯಕ್ ಕಡಬ, ಸರಕಾರಿ ಶಾಲಾ ಪ್ರತಿಭಾನ್ವಿತ ಬಡ ಮಕ್ಕಳಿಗೆ 20 ಕೋಟಿ ರೂ.ಗಳಿಗೂ ಅಧಿಕ ಸ್ಕಾಲರ್ ಶಿಪ್ ಮಂಜೂರು ಮಾಡಿಸಿದ ಖ್ಯಾತಿಯ ನಾರಾಯಣ ಮಾಸ್ಟರ್, ದಿವ್ಯಾಂಗ ಮಕ್ಕಳಿಗಾಗಿ ವಸತಿ ಶಾಲೆಗಳ ನಿರ್ಮಿಸಿ ಪೋಷಿಸುತ್ತಿರುವ ವಿನೋದ್ ಶೆಣೈ, ಸಾಕ್ಷರತಾ ರಂಗಕ್ಕೆ ಕೊಡುಗೆ ನೀಡಿದ ಹರೇಕಳ ಹಾಜಬ್ಬ, ಕುತ್ತಾರು ಮಂಗಳಾ ಸೇವಾ ಟ್ರಸ್ಟ್ ಸಂಚಾಲಕ ಪಿ.ಅನಂತಕೃಷ್ಣ ಭಟ್, ವೈದ್ಯಕೀಯ ರಂಗದಲ್ಲಿನ ಸಾಧನೆಗಾಗಿ ಡಾ| ಸುಚೇತ, ಡಾ| ಪ್ರವೀಣ್ ಮತ್ತು ಡಾ| ಕೆ.ಪಿ.ಶೆಣೈ, ಯಕ್ಷಗಾನ ಸಾಹಿತ್ಯ ರಂಗದಲ್ಲಿನ ಸಾಧನೆಗೆ ಭಾಸ್ಕರ ರೈ ಕುಕ್ಕುವಳ್ಳಿ, ಧಾರ್ಮಿಕ ಕ್ಷೇತ್ರದಲ್ಲಿನ ಸಾಧಕ ಸಂಜೀವ ನಾಯಕ ಕಲ್ಲೇಗ, ಜೀ ಕನ್ನಡ ಸರಿಗಮಪ ವಿಜೇತ ಬಾಲ ಪ್ರತಿಭೆ ಅಶ್ಮಿತ್ ಎ.ಜಿ. ಅವರನ್ನು ಸಮಾರಂಭದಲ್ಲಿ ಸಮ್ಮಾನಿಸಲಾಗುವುದು.

    ರಜತ ಮಹೋತ್ಸವ ಉದ್ಘಾಟನಾ ದಿನವಾದ ಅ.28 ರಂದು ಬೆಳಗ್ಗೆ 9.30 ಕ್ಕೆ ಅಶ್ಮಿತ್ ಎ.ಕೆ. ಅವರಿಂದ ಸಂಗೀತ ಕಾರ್ಯಕ್ರಮವಿದೆ. 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಆರೆಸ್ಸೆಸ್ ದಕ್ಷಿಣ-ಮಧ್ಯ ಕ್ಷೇತ್ರ ಸಂಘಚಾಲಕ್ ಡಾ| ವಾಮನ ಶೆಣೈ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಅಧ್ಯಕ್ಷ ಜಿ. ನಂಜನಗೌಡ ರಜತಮಹೋತ್ಸವ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಸಾಧಕರನ್ನು ಸಮ್ಮಾನಿಸುವರು. ಸಂಸದ ಕ್ಯಾ। ಬ್ರಿಜೇಶ್ ಚೌಟ ಅಶಕ್ತ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಿಸುವರು. ಶಾಸಕ ಡಿ. ವೇದವ್ಯಾಸ ಕಾಮತ್ 2027ರ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದು, ಶ್ರೀ ಪೂರ್ಣಾನಂದ ಸಹಕಾರಿ ಸಂಸ್ಥೆ ಅಧ್ಯಕ್ಷ ಗಣೇಶ್ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ.

    ಸಹಕಾರ ಭಾರತಿ ರಾಜ್ಯಾಧ್ಯಕ್ಷರಾದ ಪ್ರಭುದೇವ ಮಾಗನೂರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಮಂಜುನಾಥ ಎಸ್‌.ಕೆ, ಭಾರತಿ ಜಿ.ಭಟ್‌, ಸಹಕಾರಿ ಸಂಘಗಳ ಉಪನಿಬಂಧಕರಾದ ಎಚ್‌.ಎನ್‌ ರಮೇಶ್‌, ಗ್ರಾಹಕರ ವ್ಯವಹಾರಗಳ ಸಚಿವಾಲಯದ ಎನ್‌ಬಿಎಸ್‌ಎಸ್‌ ವೈದ್ಯಕೀಯ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಡಾ.ಸೋಮಶೇಖರ್‌ ಎಂ.ವಿ, ಕುಡಾಳ ದೇಶಸ್ಥ ಆದ್ಯ ಗೌಡ್‌ ಬ್ರಾಹ್ಮಣ ದ.ಕ. ಜಿಲ್ಲಾ ಅಧ್ಯಕ್ಷರಾದ ಪ್ರವೀಣ್‌ ಸಂಜೀವ ದರ್ಬೆ, ಮಣಿಪಾಲ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಶಾಶ್ವತ ಟ್ರಸ್ಟಿ ದಿನೇಶ ಶ್ರೀಧರ ಸಾಮಂತ ಶಿವಪಾಡಿ, ದ.ಕ. ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಭಾಸ್ಕರ ದೇವಸ್ಯ, ಪುರೋಹಿತ ಪ್ರಶಾಂತ್‌ ಭಟ್‌, ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಸುಧಾಕರ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    Banking Co Operative ministry Cooperative Cooperative Department Cooperative Registrar Ganesh Shenoy Sahakara Spandana Shree Poornananda Vividhoddesha Souharda Sahakari Sangha Sujeer C.V Nayak Hall
    Previous Articleಆತ್ಮಶಕ್ತಿ ಸಹಕಾರಿ ಸಂಘದ ಸಮಾಜಮುಖಿ ಕೆಲಸಗಳು ಶ್ಲಾಘನೀಯ
    Next Article ವಿಮಾನಯಾನಕ್ಕೂ ಸಹಕಾರ ಕ್ಷೇತ್ರ ಲಗ್ಗೆ!!

    Related Posts

    ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮ್ಯಾರಥಾನ್‌ ಸಂಪನ್ನ

    October 27, 2026

    ವಿಮಾನಯಾನಕ್ಕೂ ಸಹಕಾರ ಕ್ಷೇತ್ರ ಲಗ್ಗೆ!!

    October 27, 2026

    ಆತ್ಮಶಕ್ತಿ ಸಹಕಾರಿ ಸಂಘದ ಸಮಾಜಮುಖಿ ಕೆಲಸಗಳು ಶ್ಲಾಘನೀಯ

    October 27, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮ್ಯಾರಥಾನ್‌ ಸಂಪನ್ನ

    October 27, 2026

    ವಿಮಾನಯಾನಕ್ಕೂ ಸಹಕಾರ ಕ್ಷೇತ್ರ ಲಗ್ಗೆ!!

    October 27, 2026

    ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಸಂಭ್ರಮಕ್ಕೆ ನಾಳೆ ಚಾಲನೆ: ಬೆಳ್ಳಿ ಹಬ್ಬಕ್ಕೆ 25 ಕಾರ್ಯಕ್ರಮಗಳ ಮೆರುಗು

    October 27, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.