Close Menu
    Top News

    ಪ್ರಿಯದರ್ಶಿನಿ ಸೊಸೈಟಿ ರಾಜ್ಯವ್ಯಾಪ್ತಿ ಹರಡಲಿ : ವಿನಯಕುಮಾರ ಸೊರಕೆ ಹಾರೈಕೆ

    October 25, 2026

    ಸಹಕಾರ ಸಪ್ತಾಹ ಅಂಗವಾಗಿ ಮಂಡೆಕೋಲು ಪ್ಯಾಕ್ಸ್‌ನಿಂದ ನಾಳೆ ಮ್ಯಾರಥಾನ್‌ ಸ್ಪರ್ಧೆ

    October 24, 2026

    ಅಕ್ಟೋಬರ್‌ 28ರಂದು ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭ

    October 24, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪ್ರಿಯದರ್ಶಿನಿ ಸೊಸೈಟಿ ರಾಜ್ಯವ್ಯಾಪ್ತಿ ಹರಡಲಿ : ವಿನಯಕುಮಾರ ಸೊರಕೆ ಹಾರೈಕೆ
    News

    ಪ್ರಿಯದರ್ಶಿನಿ ಸೊಸೈಟಿ ರಾಜ್ಯವ್ಯಾಪ್ತಿ ಹರಡಲಿ : ವಿನಯಕುಮಾರ ಸೊರಕೆ ಹಾರೈಕೆ

    adminBy adminOctober 25, 2026

    ಉಡುಪಿ: ಐದು ವರ್ಷಗಳ ಹಿಂದೆ ಪ್ರಾರಂಭಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಮೂಲದ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅತಿ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಯುವಜನತೆಗೆ ಉದ್ಯೋಗದ ಸೃಷ್ಟಿಯ ಮೂಲಕ ಸಮಾಜದಲ್ಲಿ ಸಹಕಾರವೇ ಮೂಲ ತತ್ವ ಎಂಬಂತೆ ಕೆಲಸ ಮಾಡುತ್ತಿರುವ ಈ ಸೊಸೈಟಿಯು ರಾಜ್ಯವ್ಯಾಪ್ತಿ ಶಾಖೆಗಳೊಂದಿಗೆ ಹರಡಲಿ ಎಂದು ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಶುಭ ಹಾರೈಸಿದರು.

    https://chat.whatsapp.com/FCEnlTkAKCC0MGPhXtX4i4

    ಅವರು ಉಡುಪಿಯ ಸನಿಲ್ ಪ್ಲಾಜಾದಲ್ಲಿ ನೂತನವಾಗಿ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಐದನೇ ಶಾಖೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
    ದೀಪ ಬೆಳಗಿಸಿದ ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಮಾತನಾಡಿ, ಸೊಸೈಟಿ ಅಧ್ಯಕ್ಷರಾದ ವಸಂತ್ ಬೆರ್ನಾರ್ಡ್ ಅವರ ಸ್ವಾರ್ಥರಹಿತ ಕಾರ್ಯದಕ್ಷತೆಯಿಂದಾಗಿ ಸೊಸೈಟಿಯು ಉನ್ನತ ಸ್ಥಾನಕ್ಕೆ ಏರುತ್ತಿದೆ. ಉದ್ಯೋಗ ಸೃಷ್ಟಿಯ ಮೂಲಕ ಬಡಜನರ ಕಣ್ಣೀರು ಒರೆಸುವ ಕಾರ್ಯ ಶ್ಲಾಘನೀಯ. ಸರ್ವೇ ಜನ: ಸುಖಿನೋ ಭವಂತು ಎಂಬಂತೆ ಈ ಸೊಸೈಟಿಯು ಕಾರ್ಯನಿರ್ವಹಿಸುತ್ತಿದ್ದು, ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಹಾರೈಸುತ್ತಿದ್ದೇನೆ ಎಂದರು.
    ಸೇಫ್ ಲಾಕರ್ ಉದ್ಘಾಟನೆ ಮಾಡಿದ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸ್ಪರ್ಧೆ ನೀಡುವ ಜಿಲ್ಲೆಯ ಸಹಕಾರಿ ಸೊಸೈಟಿಗಳಲ್ಲಿ ಒಂದಾದ ಪ್ರಿಯದರ್ಶಿನಿ ಕೋ ಆಪರೇಟರ್ ಸೊಸೈಟಿ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.
    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಅವರು ಕಂಪ್ಯೂಟರ್ ವ್ಯವಸ್ಥೆ ಚಾಲನೆ ಮಾಡಿದರು. ಪ್ರಿಯದರ್ಶಿನಿ ಸ್ವಸಹಾಯ ಪ್ರಥಮ ಗುಂಪಿನ ಸದಸ್ಯರಿಗೆ ದಾಖಲೆ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಬೆಳಪು ಡಾ.ಐಕಳಬಾವ ದೇವಿಪ್ರಸಾದ್ ಶೆಟ್ಟಿಯವರು ಹಸ್ತಾಂತರಿಸಿದರು.
    ಮೂಲ್ಕಿ ಸೀಮೆಯ ಸಾವಂತ ಅರಸ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು.


    ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್, ಉಡುಪಿ ಜಿಲ್ಲಾ ಕೇಂದ್ರ ಸಹಕಾರಿ ಯೂನಿಯನ್ ಮತ್ತು ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಲಿ. ಇದರ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ, ಶ್ರೀ ಸರಸ್ವತಿ ಕೋ ಆಪರೇಟಿವ್ ಸೊಸೈಟಿ, ಪಡುಕುತ್ಯಾರ್ ಉಡುಪಿ ಇದರ ಅಧ್ಯಕ್ಷರಾದ ಬಿ. ಸೂರ‍್ಯಕುಮಾರ್, ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ ಉಡುಪಿ ಇದರ ನಿರ್ದೇಶಕರಾದ ಡಾ| ಸುಶೀಲ್ ಜತ್ತನ್ನ, ಹೈಟೆಕ್ ಮೆಡಿಕೇರ್ ಹಾಸ್ಪಿಟಲ್ ಉಡುಪಿ ಇದರ ಎಂ.ಡಿ. ಡಾ| ಟಿ. ಎಸ್. ರಾವ್, ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘ ಉಡುಪಿ ಇದರ ಅಧ್ಯಕ್ಷರಾದ ಶ್ರೀಧರ್ ದೇವಾಡಿಗ, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಇದರ ಅಧ್ಯಕ್ಷರಾದ ರಮೇಶ್ ಕಾಂಚನ್, ಉಡುಪಿ ಹೋಮಿಯೋಪಥಿಕ್ ಫಿಶಿಷಿಯನ್ ಡಾ| ಬೆರಿಲ್ ಎ. ಬೆರ್ನಾರ್ಡ್, ಕಟ್ಟಡ ಮಾಲೀಕರಾದ ಶ್ರೀ ಶಂಭು ಎ.ಸನಿಲ್ ಭಾಗವಹಿಸಿದರು.

    https://news.sahakaraspandana.in/wp-content/uploads/2026/10/VID-20261025-WA0081.mp4

    ಸೊಸೈಟಿ ಅಧ್ಯಕ್ಷರಾದ ಎಚ್ ವಸಂತ್ ಬೆರ್ನಾರ್ಡ್ ಸ್ವಾಗತಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ವಂದಿಸಿದರು. ನಿರ್ದೇಶಕರುಗಳಾದ ಉಮಾನಾಥ ಜೆ. ಶೆಟ್ಟಿಗಾರ್, ಧನಂಜಯ ಮಟ್ಟು, ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್, ಡಾ|| ಶೆರಿಲ್ ಅಯೋನ ಐಮನ್, ರೇಖಾ ಶೆಟ್ಟಿ, ಹರೀಶ್ ಎನ್ ಪುತ್ರನ್, ನವೀನ್ ಸಾಲ್ಯಾನ್ ಪಂಜ, ಮೋಹನದಾಸ್, ಅನಿಲ್ ಪೂಜಾರಿ ಸಸಿಹಿತ್ಲು, ರಜಿಯಾ ಬಾನು, ಕರಿಯ ಕಾಡಿಗ ಉಪಸ್ಥಿತರಿದ್ದರು.
    ಶಾಖಾ ಪ್ರಬಂಧಕರಾದ ನಿಶಾ ಸುಹೈಲ್ ಡೇನಿಯಲ್ ಕಾರ್ಯಕ್ರಮ ನಿರೂಪಿಸಿದರು. ಲೆಕ್ಕಿಗರಾದ ಲೋಲಾಕ್ಷಿ, ವಿವಿಧ ಶಾಖಾ ಪ್ರಬಂಧಕರಾದ ಮೋಹನ್‌ದಾಸ್, ಪ್ರಜ್ಞಾಶ್ರೀ, ಅಕ್ಷತಾ ಶೆಟ್ಟಿ ಎಮ್, ಅಭಿಷ್ಟಾ ಜೈನ್, ಅಂಜಲಿ ಎಸ್ ದೇವಾಡಿಗ ಸಹಕರಿಸಿದರು.

    Co Operative ministry Cooperative Cooperative Department Cooperative Registrar Priyadarshini Co Operative Society Sanil Plaza Udupi Vinaykumar sorake
    Previous Articleಸಹಕಾರ ಸಪ್ತಾಹ ಅಂಗವಾಗಿ ಮಂಡೆಕೋಲು ಪ್ಯಾಕ್ಸ್‌ನಿಂದ ನಾಳೆ ಮ್ಯಾರಥಾನ್‌ ಸ್ಪರ್ಧೆ

    Related Posts

    ಸಹಕಾರ ಸಪ್ತಾಹ ಅಂಗವಾಗಿ ಮಂಡೆಕೋಲು ಪ್ಯಾಕ್ಸ್‌ನಿಂದ ನಾಳೆ ಮ್ಯಾರಥಾನ್‌ ಸ್ಪರ್ಧೆ

    October 24, 2026

    ಅಕ್ಟೋಬರ್‌ 28ರಂದು ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭ

    October 24, 2026

    ನಾಳೆ ಮರೋಳಿಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 116ನೇ ಉಚಿತ ವೈದ್ಯಕೀಯ ಶಿಬಿರ

    October 24, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಪ್ರಿಯದರ್ಶಿನಿ ಸೊಸೈಟಿ ರಾಜ್ಯವ್ಯಾಪ್ತಿ ಹರಡಲಿ : ವಿನಯಕುಮಾರ ಸೊರಕೆ ಹಾರೈಕೆ

    October 25, 2026

    ಸಹಕಾರ ಸಪ್ತಾಹ ಅಂಗವಾಗಿ ಮಂಡೆಕೋಲು ಪ್ಯಾಕ್ಸ್‌ನಿಂದ ನಾಳೆ ಮ್ಯಾರಥಾನ್‌ ಸ್ಪರ್ಧೆ

    October 24, 2026

    ಅಕ್ಟೋಬರ್‌ 28ರಂದು ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭ

    October 24, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.