Close Menu
    Top News

    ನಾಮ್‌ ಫೌಂಡೇಷನ್‌ ಮೂಲಕ ಸಹಕಾರಿ ಕ್ಷೇತ್ರದಲ್ಲೂ ಕೊಡುಗೆ ಸಲ್ಲಿಸಿದ್ದ ನಾನಾ ಪಾಟೇಕರ್‌

    October 8, 2026

    ಸಹಕಾರಿ ಬ್ಯಾಂಕ್‌ಗಳಲ್ಲಿ ವಂಚನೆ ಪ್ರಕರಣ: 20 ಕಡೆ ಜಾರಿ ನಿರ್ದೇಶನಾಲಯ ಶೋಧ

    October 8, 2026

    ನಾಲ್ಕು ವರ್ಷಗಳ ಬಳಿಕ ರೆಪೋ ರೇಟ್‌ ಏರಿಸಿದ ರಿಸರ್ವ್ ಬ್ಯಾಂಕ್

    October 8, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀಶಾ ಸೌಹಾರ್ದ ಸಹಕಾರಿ ಸಂಘ ಅರ್ಧ ಆರ್ಥಿಕ ವರ್ಷದ ಅಂತ್ಯಕ್ಕೆ ಸೊಸೈಟಿಯ ಲಾಭಾಂಶ ಶೇ.35 ಏರಿಕೆ
    News

    ಶ್ರೀಶಾ ಸೌಹಾರ್ದ ಸಹಕಾರಿ ಸಂಘ ಅರ್ಧ ಆರ್ಥಿಕ ವರ್ಷದ ಅಂತ್ಯಕ್ಕೆ ಸೊಸೈಟಿಯ ಲಾಭಾಂಶ ಶೇ.35 ಏರಿಕೆ

    adminBy adminOctober 8, 2026

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸೌಹಾರ್ದ ಸಹಕಾರಿ ಸಂಸ್ಥೆ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯು 2026ನೇ ಅರ್ಧ ಆರ್ಥಿಕ ವರ್ಷ ಸೆ.30ರ ಅಂತ್ಯದಲ್ಲಿ ಕಳೆದ ಸಾಲಿಗಿಂತ ಶೇ.35 ಹೆಚ್ಚಿನ ನಿವ್ವಳ ಲಾಭ ಗಳಿಸಿ ಅಪೂರ್ವ ಸಾಧನೆ ಮಾಡಿದೆ. ಗಳಿಸಿದ ಲಾಭದಲ್ಲಿ ತೆಗೆದಿಟ್ಟ ಒಟ್ಟು ರಿಸರ್ವ್ ಫಂಡ್ 6 ಕೋಟಿ ರೂ. ಇದ್ದು ಇದು ಸಂಸ್ಥೆಯ ಸದೃಢತೆಯ ಸಂಕೇತವಾಗಿದೆ. ಅಲ್ಲದೆ ಕಳೆದ ತಿಂಗಳು ಒಂದು ಕೋಟಿಯ ವೆಚ್ಚದಲ್ಲಿ ಸ್ವಂತ ಜಾಗವನ್ನೂ ಖರೀದಿಸಿ ಆರನೇ ಶಾಖೆಯನ್ನೂ ತೆರೆಯಲಾಗಿದೆ.

    https://chat.whatsapp.com/FCEnlTkAKCC0MGPhXtX4i4
    ಸಹಕಾರಿಯ ಉದ್ಯೋಗಿಗಳ ಸಭೆಯಲ್ಲಿ ಸಮಾಲೋಚನಾ ಮಾತನಾಡಿದ ಶ್ರೀಶಾ ಸೌಹಾರ್ದ ಸೊಸೈಟಿಯ ಅಧ್ಯಕ್ಷ ಎಂ.ಎಸ್. ಗುರುರಾಜ್ ಅವರು, ಶ್ರೀಶಾ ಸೊಸೈಟಿಯ ನಿವ್ವಳ ಲಾಭ 2025ರ ಸೆ.30ಕ್ಕೆ 95 ಲಕ್ಷ ರೂ.ಗಳಿದ್ದರೆ ಈ ಅರ್ಧ ಆರ್ಥಿಕ ವರ್ಷ, ಸೆ.30ರಂದು 140 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಶೇ.35 ಪ್ರಗತಿ ಸಾಧಿಸಿದೆ. ಸಾಮಾನ್ಯವಾಗಿ ಯಾವುದೇ ಹಣಕಾಸು ಸಂಸ್ಥೆಗಳಿಗೆ ಮಳೆ, ಶೈಕ್ಷಣಿಕ ವರ್ಷದ ಆರಂಭವೂ ಸೇರಿದಂತೆ ಅನೇಕ ಕಾರಣಗಳಿಂದ ಮೊದಲ ಅರ್ಧ ಆರ್ಥಿಕ ವರ್ಷದಲ್ಲಿ ಲಾಭ ಗಳಿಕೆಯ ಪ್ರಮಾಣ ಕಡಿಮೆ ಇರುವುದು ಸ್ವಾಭಾವಿಕ. ಈ ಅವಧಿಯಲ್ಲಿಯೇ ಹೆಚ್ಚಿನ ಶ್ರಮ ವಹಿಸಿ ಹೆಚ್ಚಿನ ಲಾಭ ಗಳಿಸುವುದು ಶ್ರೀಶಾ ಸೊಸೈಟಿಯ ಯೋಚನೆ. ಇದು ಆರ್ಥಿಕ ವರ್ಷದ ಅಂತ್ಯದ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದರು.
    ಸಂಸ್ಥೆಯ ಈ ಸಾಧನೆಗೆ ಆಡಳಿತ ಮಂಡಳಿಯ ಶಿಸ್ತುಬದ್ಧ ಮತ್ತು ಹೊಂದಾಣಿಕೆಯಿಲ್ಲದ ಆಡಳಿತ ಮತ್ತು ಸಹಕಾರಿಯ ಸಿಬ್ಬಂದಿ ವರ್ಗದ ಅವಿರತ ಶ್ರಮ ಮತ್ತು ನಗುಮುಖದ ಸೇವೆಯೇ ಕಾರಣ. ಆದ್ದರಿಂದಲೇ ಅನೇಕ ವರ್ಷಗಳಿಂದ ಸದಸ್ಯರಿಗೆ ನಿರಂತರ ಶೇ.25 ಡಿವಿಡೆಂಡ್‌ ನೀಡಲು ಸಾಧ್ಯವಾಗುತ್ತಿದೆ. ನಿವ್ವಳ ಲಾಭ ಗಳಿಕೆಯ ಹೆಚ್ಚಳಕ್ಕೆ ಸದಸ್ಯರ ಅವಶ್ಯಕತೆಗಳಿಗೆ ನಾವು ನೀಡುವ ತಡಮಾಡದ ಸ್ಪಂದನೆ ಹಾಗೂ ಸಾಲ ವಸೂಲಾತಿಯೇ ಕಾರಣ ಎಂದರು.
    ಕಳೆದ ತಿಂಗಳು ಸೆಪ್ಟೆಂಬರ್‌ನಲ್ಲಿ ಪದವಿನಂಗಡಿಯ ಸನ್ನಿಧಿ ಎನ್‌ಕ್ಲೇವ್‌ ವಾಣಿಜ್ಯ ಕಟ್ಟಡದಲ್ಲಿ ಸ್ವಂತ ಸ್ಥಳವನ್ನು ಖರೀದಿಸಿ 6ನೇ ಶಾಖೆಯನ್ನು ತೆರೆಯಲಾಗಿದ್ದು, ಸದಸ್ಯರ ಉತ್ತಮ ಸ್ಪಂದನೆಯಿಂದಾಗಿ ಶಾಖೆಯು ಅತ್ಯುತ್ತಮ ವ್ಯವಹಾರ ನಡೆಸುತ್ತಿದೆ. ಶ್ರೀಶಾ ಸೊಸೈಟಿಯು ಆರಂಭದ ದಿನಗಳಿಂದಲೂ ಲಾಭದ ದೊಡ್ಡ ಪಾಲನ್ನು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಮರಳಿ ಸಮಾಜಕ್ಕೆ ನೀಡುತ್ತ ಬಂದಿದ್ದು ಮಾದರಿಯಾಗಿದೆ. ರಾಜ್ಯದ ಅನೇಕ ಜಿಲ್ಲೆಗಳ ಸೌಹಾರ್ದ ಸೊಸೈಟಿಗಳ ಆಡಳಿತ ಮಂಡಳಿಯವರು ಆಡಳಿತ ಮತ್ತು ನಿರ್ವಹಣೆಗಳ ಅಧ್ಯಯನಕ್ಕಾಗಿ ಶ್ರೀಶಾ ಸೊಸೈಟಿಗೆ ಭೇಟಿ ನೀಡುತ್ತಿವೆ. 2024ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು ಇದರ ವತಿಯಿಂದ ಉತ್ತಮ ಸಹಕಾರಿ ಎಂಬ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್. ಗುರುರಾಜ್ ಅವರಿಗೆ ನೀಡಿ ಸಮ್ಮಾನಿಸಿದ್ದನ್ನು ಇಲ್ಲಿ ಸ್ಮರಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

    Banking Co Operative ministry Cooperative Cooperative Department Cooperative Registrar M S Gururaj Shreesha Souharda Co Operative Society
    Previous Articleಸದಸ್ಯ ಕೇಂದ್ರಿತ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸಿ
    Next Article ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಿರ್ದೇಶಕರು, ಸಿಬ್ಬಂದಿಗೆ ಕ್ಲಸ್ಟ‌ರ್ ತರಬೇತಿ ಶಿಬಿರ

    Related Posts

    ನಾಮ್‌ ಫೌಂಡೇಷನ್‌ ಮೂಲಕ ಸಹಕಾರಿ ಕ್ಷೇತ್ರದಲ್ಲೂ ಕೊಡುಗೆ ಸಲ್ಲಿಸಿದ್ದ ನಾನಾ ಪಾಟೇಕರ್‌

    October 8, 2026

    ಸಹಕಾರಿ ಬ್ಯಾಂಕ್‌ಗಳಲ್ಲಿ ವಂಚನೆ ಪ್ರಕರಣ: 20 ಕಡೆ ಜಾರಿ ನಿರ್ದೇಶನಾಲಯ ಶೋಧ

    October 8, 2026

    ನಾಲ್ಕು ವರ್ಷಗಳ ಬಳಿಕ ರೆಪೋ ರೇಟ್‌ ಏರಿಸಿದ ರಿಸರ್ವ್ ಬ್ಯಾಂಕ್

    October 8, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ನಾಮ್‌ ಫೌಂಡೇಷನ್‌ ಮೂಲಕ ಸಹಕಾರಿ ಕ್ಷೇತ್ರದಲ್ಲೂ ಕೊಡುಗೆ ಸಲ್ಲಿಸಿದ್ದ ನಾನಾ ಪಾಟೇಕರ್‌

    October 8, 2026

    ಸಹಕಾರಿ ಬ್ಯಾಂಕ್‌ಗಳಲ್ಲಿ ವಂಚನೆ ಪ್ರಕರಣ: 20 ಕಡೆ ಜಾರಿ ನಿರ್ದೇಶನಾಲಯ ಶೋಧ

    October 8, 2026

    ನಾಲ್ಕು ವರ್ಷಗಳ ಬಳಿಕ ರೆಪೋ ರೇಟ್‌ ಏರಿಸಿದ ರಿಸರ್ವ್ ಬ್ಯಾಂಕ್

    October 8, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.