Close Menu
    Top News

    ಸಹಕಾರ ಸ್ವಾಯತ್ತತೆಗೆ ಕರ್ನಾಟಕದ ಸೌಹಾರ್ದ ಚಳವಳಿ ಮಾದರಿ

    October 5, 2026

    ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯಿಂದ ಉತ್ತಮ ಸೇವೆ

    October 5, 2026

    ಆರೋಗ್ಯದ ಬಗ್ಗೆ ಕಾಳಜಿ ತುಂಬಾ ಮುಖ್ಯ ವಿಷಯ

    October 5, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಆರೋಗ್ಯದ ಬಗ್ಗೆ ಕಾಳಜಿ ತುಂಬಾ ಮುಖ್ಯ ವಿಷಯ
    News

    ಆರೋಗ್ಯದ ಬಗ್ಗೆ ಕಾಳಜಿ ತುಂಬಾ ಮುಖ್ಯ ವಿಷಯ

    adminBy adminOctober 5, 2026

    ಆತ್ಮಶಕ್ತಿ ಸಹಕಾರಿ ಸಂಘದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯಪ್ರಕಾಶ್ ಅಭಿಪ್ರಾಯ

    ಮಂಗಳೂರು: ಆರೋಗ್ಯದ ಬಗ್ಗೆ ನಾವು ವಹಿಸಬೇಕಾದ ಕಾಳಜಿಯು ತುಂಬ ಮುಖ್ಯವಾದ ವಿಷಯ. ವಿದ್ಯಾರ್ಥಿಗಳು ದೈಹಿಕ ಶಿಕ್ಷಣದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯಪ್ರಕಾಶ್ ಹೇಳಿದರು.

    https://chat.whatsapp.com/FCEnlTkAKCC0MGPhXtX4i4
    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ ವತಿಯಿಂದ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಗಾಂಧಿನಗರ ಮಂಗಳೂರು, ಎನೆಸ್‌ಎಸ್‌, ಯೂತ್ ರೆಡ್‌ಕ್ರಾಸ್‌, ಲಯನ್ಸ್ ಮತ್ತು ಲಿಯೋ ಕ್ಲಬ್‌ ಮಂಗಳೂರು ಸಹಭಾಗಿತ್ವದೊಂದಿಗೆ ಶನಿವಾರ ಕಣಚೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ವೈದ್ಯಕೀಯ ತಂಡದ ಸಹಕಾರದೊಂದಿಗೆ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ ಚಿತ್ತರಂಜನ್ ಬೋಳಾರ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರಿಗೂ ಕಣ್ಣು ಅತೀ ಅಮೂಲ್ಯವಾದ ಅಂಗ. ಅದಕ್ಕೆ ತೊಂದರೆ ಬಂದಾಗ ಕೂಡಲೇ ವೈದ್ಯರನ್ನು ಕಂಡು ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಕಣ್ಣಿನ ಬಗ್ಗೆ ನಾವು ಯಾವತ್ತೂ ಜಾಗೃತರಾಗಿರಬೇಕು. ಆತ್ಮಶಕ್ತಿ ಸಹಕಾರಿ ಸಂಘವು ಎಲ್ಲಾ ಶಾಖೆಗಳಲ್ಲಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸುತ್ತ ಬರುತ್ತಿದೆ. ಇದು ಸಂಘದ ವತಿಯಿಂದ ಆಯೋಜಿಸಿರುವ 115ನೇ ಉಚಿತ ಕಣ್ಣಿನ ತಪಾಸಣೆ ಶಿಬಿರ ಎಂದರು.


    ಲಯನ್ಸ್ ಕ್ಲಬ್‌ ಮಂಗಳೂರು ಇದರ ಅಧ್ಯಕ್ಷರಾದ ಲಯನ್ ಹೇಮಾ ರಾವ್‌ ಮಾತನಾಡಿ, ಲಯನ್ಸ್‌ನಿಂದ ಈಗಾಗಲೇ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ಹಲವು ಶಿಬಿರಗಳನ್ನು ನಾವು ಆಯೋಜನೆ ಮಾಡಿದ್ದೇವೆ. ಈ ಬಾರಿ ಕಾಲೇಜಿನಲ್ಲಿ ಆಯೋಜನೆ ಮಾಡುವ ಮೂಲಕ ಶಿಬಿರದ ಪ್ರಯೋಜನವನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತಿದೆ ಎಂದರು.


    ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಜಿ.ಪರಮೇಶ್ವರ ಪೂಜಾರಿ, ರಮಾನಾಥ್ ಸನಿಲ್, ದಿವಾಕರ ಬಿ.ಪಿ, ಗೋಪಾಲ್ ಎಂ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಲಯನ್ಸ್‌ ಕ್ಲಬ್ ಜಿಲ್ಲೆ 317ಡಿಯ ನಿಕಟಪೂರ್ವ ವಲಯಾಧ್ಯಕ್ಷ ಲಯನ್ ಶೀನಾ ಪೂಜಾರಿ, ಕಣಚೂರು ಮೆಡಿಕಲ್‌ ಕಾಲೇಜಿನ ವೈದ್ಯರಾದ ಡಾ.ಸಿಮ್ರಾನ್‌, ಗೋಕರ್ಣನಾಥೇಶ್ವರ ಕಾಲೇಜಿನ ನ್ಯಾಶನಲ್ ಸರ್ವೀಸ್‌ ಸ್ಕೀಮ್‌, ಯೂತ್ ರೆಡ್‌ ಕ್ರಾಸ್‌ ನ ಸಂಯೋಜನಾಧಿಕಾರಿ ಪ್ರತೀಕ್ಷಾ ಮೊದಲಾದವರು ಹಾಜರಿದ್ದರು.
    150ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು. ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ನ್ಯಾಶನಲ್ ಸರ್ವೀಸ್‌ ಸ್ಕೀಮ್‌, ಯೂತ್ ರೆಡ್‌ಕ್ರಾಸ್‌ ಸಂಯೋಜನಾಧಿಕಾರಿ ಬಾಲಚಂದ್ರ ಸ್ವಾಗತಿಸಿ, ಅನುಷಾ ವಂದಿಸಿದರು. ಮಿಥುನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು.

    Athmashakti Vividhoddesha Sahakara Sangha Banking Chittaranjan Bolar Co Operative ministry Cooperative Cooperative Department Cooperative Registrar Shree Gokarnanatheshwara College Mangalore
    Previous Articleನವೆಂಬರ್ 5ರಂದು ನ್ಯಾಷನಲ್ ಫೆಡರೇಶನ್ ಆಫ್ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್ಸ್ ಲಿಮಿಟೆಡ್ ಚುನಾವಣೆ
    Next Article ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯಿಂದ ಉತ್ತಮ ಸೇವೆ

    Related Posts

    ಸಹಕಾರ ಸ್ವಾಯತ್ತತೆಗೆ ಕರ್ನಾಟಕದ ಸೌಹಾರ್ದ ಚಳವಳಿ ಮಾದರಿ

    October 5, 2026

    ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯಿಂದ ಉತ್ತಮ ಸೇವೆ

    October 5, 2026

    ನವೆಂಬರ್ 5ರಂದು ನ್ಯಾಷನಲ್ ಫೆಡರೇಶನ್ ಆಫ್ ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್ಸ್ ಲಿಮಿಟೆಡ್ ಚುನಾವಣೆ

    October 5, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಸಹಕಾರ ಸ್ವಾಯತ್ತತೆಗೆ ಕರ್ನಾಟಕದ ಸೌಹಾರ್ದ ಚಳವಳಿ ಮಾದರಿ

    October 5, 2026

    ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯಿಂದ ಉತ್ತಮ ಸೇವೆ

    October 5, 2026

    ಆರೋಗ್ಯದ ಬಗ್ಗೆ ಕಾಳಜಿ ತುಂಬಾ ಮುಖ್ಯ ವಿಷಯ

    October 5, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.