Close Menu
    Top News

    ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ 90.25 ಲಕ್ಷ ರೂ. ಲಾಭ, ಶೇ.20 ಡಿವಿಡೆಂಡ್ ಘೋಷಣೆ

    October 1, 2026

    ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಯನ ಪ್ರವಾಸ

    October 1, 2026

    ಭಾರತ್ ಟ್ಯಾಕ್ಸಿ ಪ್ರಥಮ ವಾರ್ಷಿಕ ಮಹಾಸಭೆ

    October 1, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ 90.25 ಲಕ್ಷ ರೂ. ಲಾಭ, ಶೇ.20 ಡಿವಿಡೆಂಡ್ ಘೋಷಣೆ
    News

    ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ 90.25 ಲಕ್ಷ ರೂ. ಲಾಭ, ಶೇ.20 ಡಿವಿಡೆಂಡ್ ಘೋಷಣೆ

    adminBy adminOctober 1, 2026

    ಮಂಗಳೂರು: ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ, ಮಂಗಳೂರು ಇದರ 29ನೇ ವಾರ್ಷಿಕ ಮಹಾಸಭೆ ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ಸಂಘದ ಅಧ್ಯಕ್ಷ ಜೆ.ಕೃಷ್ಣ ಪಾಲೆಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರ ಸಂಪೂರ್ಣ ಸಹಕಾರದಿಂದ ಸಂಘವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಸಂಘವು 2025-26ನೇ ಸಾಲಿನಲ್ಲಿ 90,25,671.66 ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು. ಸಂಘವು ಸಾಲ ಹಾಗೂ ಠೇವಣಿಗಳಿಗೆ ಆಕರ್ಷಕ ಬಡ್ಡಿ ನೀಡಿಯೂ ಅಧಿಕ ಲಾಭ ಗಳಿಸಿದೆ. ಸಂಘದಲ್ಲಿ 7,000ಕ್ಕಿಂತ ಹೆಚ್ಚು ಸದಸ್ಯರಿದ್ದು, 2,09,74,255.00 ರೂ. ಪಾಲು ಬಂಡವಾಳ ಹೊಂದಿದೆ. ಠೇವಣಿ ಸಂಗ್ರಹದಲ್ಲೂ ಸಂಘವು ಗಮನಾರ್ಹ ಸಾಧನೆ ಮಾಡಿದೆ. ಕಳೆದ ವರ್ಷಾಂತ್ಯಕ್ಕೆ ಠೇವಣಿ 92,02,37,119 ರೂ. ನಿಂದ ವರದಿ ವರ್ಷದಲ್ಲಿ 95,66,31,634.29 ರೂ. ಗೆ ಏರಿಕೆಯಾಗಿದೆ. ಸಂಘದ ಒಟ್ಟು ವ್ಯವಹಾರ 563 ಕೋಟಿ ರೂ. ಆಗಿದೆ ಎಂದರು.


    ಸಂಘದ ಸ್ವಂತ ಆಡಳಿತ ಕಚೇರಿ ತೆರೆಯಲಾಗಿದ್ದು ಗ್ರಾಹಕರ ಸೌಲಭ್ಯಕ್ಕೆ ಪ್ರಧಾನ ಕಚೇರಿಯಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕ್‌ನ ಎಟಿಎಂ ಕೂಡ ಇದ್ದು ಸಂಘದ ವೆಬ್‌ಸೈಟ್ ಹಾಗೂ ಸಹಕಾರಿ ಆ್ಯಪ್ ಅಳವಡಿಸಲಾಗಿದೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು. ಸಂಘವು ಅಂತರ್ ಜಿಲ್ಲಾ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಶಾಖೆ ತೆರೆಯಲು ಯೋಜನೆ ಹಮ್ಮಿಕೊಂಡಿದೆ. ಸದ್ಯದಲ್ಲೇ ಕಿನ್ನಿಗೋಳಿಯಲ್ಲಿ ಶಾಖೆ ತೆರೆಯಲಿದೆ. ಈಗಾಗಲೇ ಮೂಡುಬಿದಿರೆಯಲ್ಲಿ ಶಾಖೆಯನ್ನು ತೆರೆಯಲಾಗಿದೆ ಎಂದು ಕೃಷ್ಣ ಪಾಲೆಮಾರ್ ತಿಳಿಸಿದರು.
    ಸಂಘದ ನಿರ್ದೇಶಕ ಹೃದಯ ತಜ್ಞ, ಡಾ|ಎಚ್ ಪ್ರಭಾಕರ್ ಅವರು ರಾಷ್ಟ್ರೀಯ ಮಟ್ಟದ ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ದಿನೇಶ್ ರಾವ್, ನಿರ್ದೇಶಕ ರಾಮಚಂದ್ರ ಕೆ.ಎಸ್, ರಂಜನ್ ಕೆ.ಎಸ್‌, ವಾರಿಜಾ ಕೆ., ಡಾ.ಮಂಜುಳಾ ಎ ರಾವ್, ಡಾ|ಎಚ್ ಪ್ರಭಾಕರ್, ಅನಿಲ್ ಬೇಕಲ್ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದನ್ ಕೋಟೆಕಾರ್‌ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು.

    Banking Co Operative ministry Cooperative Department Cooperative Registrar Krishna Palemar Sahakara Spandana Shree Lakshmanananda Vividhoddesha Sahakara Sangha
    Previous Articleದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಯನ ಪ್ರವಾಸ

    Related Posts

    ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಯನ ಪ್ರವಾಸ

    October 1, 2026

    ಭಾರತ್ ಟ್ಯಾಕ್ಸಿ ಪ್ರಥಮ ವಾರ್ಷಿಕ ಮಹಾಸಭೆ

    October 1, 2026

    ಅಕ್ಟೋಬರ್ 4ರಂದು ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸಿಬ್ಬಂದಿ, ನಿರ್ದೇಶಕರ ಕಾರ್ಯತತ್ಪರತೆ ಕುರಿತು ಕ್ಲಸ್ಟರ್ ತರಬೇತಿ

    October 1, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ 90.25 ಲಕ್ಷ ರೂ. ಲಾಭ, ಶೇ.20 ಡಿವಿಡೆಂಡ್ ಘೋಷಣೆ

    October 1, 2026

    ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಯನ ಪ್ರವಾಸ

    October 1, 2026

    ಭಾರತ್ ಟ್ಯಾಕ್ಸಿ ಪ್ರಥಮ ವಾರ್ಷಿಕ ಮಹಾಸಭೆ

    October 1, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.