Close Menu
    Top News

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    September 22, 2026

    ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    September 22, 2026

    ಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ

    September 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ
    News

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    adminBy adminSeptember 22, 2026

    ಮಂಗಳೂರು: ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಶನಿವಾರ ಪಡೀಲ್‌ ಕರ್ಮಾರ್‌ನ ರಾಧಾ ಕೇಸಲ್‌ನಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ಶಾಸಕರಾದ ವೇದವ್ಯಾಸ ಕಾಮತ್ ಉದ್ಘಾಟಿಸಿದರು. ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌ ಸತೀಶ್ಚಂದ್ರ ದೀಪ ಪ್ರಜ್ವಲಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷರಾದ ಭಾಸ್ಕರ ದೇವಸ್ಯ ಗಣಕಯಂತ್ರ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್‌ ಬಂಗೇರ ಮುಖ್ಯ ಅತಿಥಿಯಾಗಿದ್ದರು.


    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಭಾರತಿ ಜಿ. ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ​ಹೆಣ್ಣುಮಕ್ಕಳು ಕೇವಲ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗದೆ, ಆರ್ಥಿಕ ಸ್ವಾತಂತ್ರ್ಯ ಹಾಗೂ ಆತ್ಮವಿಶ್ವಾಸ ರೂಢಿಸಿಕೊಳ್ಳಬೇಕೆಂಬ ಅದಮ್ಯ ಸಂಕಲ್ಪದಿಂದ ಆರಂಭಗೊಂಡ ಸಂಸ್ಥೆಯೇ ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘ. 526 ಸದಸ್ಯರಿಂದ ಆರಂಭವಾದ ಸಂಸ್ಥೆಯು ಪರಸ್ಪರ ವಿಶ್ವಾಸ ಮತ್ತು ಪಾರದರ್ಶಕತೆಯಿಂದ ಮುಂದುವರಿದು 2025–26ರ ಹೊತ್ತಿಗೆ 1,247 ಸದಸ್ಯರ ಕುಟುಂಬವಾಗಿ ವಿಸ್ತರಿಸಿದೆ. ಪಾಲು ಬಂಡವಾಳದಲ್ಲಿ ವರ್ಷದಿಂದ ವರ್ಷಕ್ಕೆ ದಾಖಲೆಯ ಬೆಳವಣಿಗೆ ಸಾಧಿಸುತ್ತಾ, ನಿರಂತರ ನಿವ್ವಳ ಲಾಭ ಕಾಯ್ದುಕೊಂಡು ಬರಲಾಗಿದೆ. ಸೇವಾ ಚಟುವಟಿಕೆಯ ಅಂಗವಾಗಿ ಕ್ಯಾನ್ಸರ್‌ ರೋಗಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಕೊರೋನಾ ಕಾಲದಲ್ಲಿ, ಆಹಾರ, ಅಗತ್ಯ ಸಾಮಗ್ರಿ ಒದಗಿಸಲಾಗಿದೆ. ಸಂಸ್ಥೆಗಳ ಬೆಳವಣಿಗೆಯ ಹಾದಿಯಲ್ಲಿ ಸ್ವಂತ ಕಚೇರಿಯ ಕಟ್ಟಡ ನಿರ್ಮಿಸುವುದು ದೊಡ್ಡ ಸಾಹಸ. ಆದರೆ, ಅತ್ಯಂತ ಶಿಸ್ತುಬದ್ಧ ಆರ್ಥಿಕ ನಿರ್ವಹಣೆ ಮತ್ತು ಉಳಿತಾಯದ ಪರಿಣಾಮವಾಗಿ, ಯಾವುದೇ ಬ್ಯಾಂಕ್ ಅಥವಾ ಹೊರಗಿನ ಸಾಲದ ಸುಳಿಗೆ ಸಿಲುಕದೆ, ಸ್ವಂತ ಕಟ್ಟಡ ನಿರ್ಮಿಸಲಾಗಿದ್ದು, ಇದು ಪ್ರತಿಯೊಬ್ಬ ಸದಸ್ಯರ ಸ್ವಾಭಿಮಾನದ ಸಂಕೇತವಾಗಿದೆ ಎಂದು ಹೇಳಿದರು.
    ಸಂಘದ ಕಾನೂನು ಸಲಹೆಗಾರರ ಪುರುಷೋತ್ತಮ ಭಟ್‌, ಭೂ ಮೌಲ್ಯಮಾಪಕರಾದ ನವೀನ್‌ಚಂದ್ರ ಸೇಮಿತ ಹಾಗೂ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಕುಮಾರಿ ಅವರನ್ನು ಗೌರವಿಸಲಾಯಿತು.

    Co Operative ministry Cooperative Cooperative Department Cooperative Registrar Mahila Abhyudaya Souharda Sahakari Radha Casal Souharda Sahakari
    Previous Articleಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    Related Posts

    ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    September 22, 2026

    ಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ

    September 22, 2026

    ಶ್ರೀ ವೆಂಕಟರಮಣ ಸ್ವಾಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಕಟಪಾಡಿ ವಾರ್ಷಿಕ ಮಹಾಸಭೆ

    September 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಮಹಿಳಾ ಅಭ್ಯುದಯ ಸೌಹಾರ್ದ ಸಹಕಾರಿ ಸಂಘದ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

    September 22, 2026

    ಅನನ್ಯ ಸೌಹಾರ್ದ ಸಹಕಾರಿ ಸಂಘ ಹೇರಾಡಿ ವಾರ್ಷಿಕ ಮಹಾಸಭೆ

    September 22, 2026

    ಎಂ.ಸಿ.ಸಿ. ಬ್ಯಾಂಕ್ 108ನೇ ವಾರ್ಷಿಕ ಮಹಾಸಭೆ: ರೂ. 10.07 ಕೋಟಿ ನಿವ್ವಳ ಲಾಭ; 10% ಡಿವಿಡೆಂಡ್ ಘೋಷಣೆ

    September 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.