Close Menu
    Top News

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ

    September 21, 2026

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ

    September 21, 2026

    ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    September 21, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ
    News

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ

    adminBy adminSeptember 21, 2026

    ಬಂಟ್ವಾಳ: ಬಂಟ್ವಾಳ ಕಥೋಲಿಕ್‌ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಇದರ 2025-26ನೇ ಸಾಲಿನ 29ನೇ ವಾರ್ಷಿಕ ಮಹಾಸಭೆಯು, ಸ್ಪರ್ಶ ಕಲಾ ಮಂದಿರ ಬಿ.ಸಿ.ರೋಡ್ ಇಲ್ಲಿ ಸಂಘದ ಅಧ್ಯಕ್ಷರಾದ ಜೀವನ್ ಲಾಯ್ಡ್ ಪಿಂಟೋ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ.3.40 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 18 ಡಿವಿಡೆಂಡ್ ಘೋಷಣೆ ಮಾಡಲಾಯಿತು.

    https://chat.whatsapp.com/FCEnlTkAKCC0MGPhXtX4i4
    ಸಂಘದ ಅಧ್ಯಕ್ಷರಾದ ಜೀವನ್ ಲಾಯ್ಡ್ ಪಿಂಟೋ ಅವರು ಸ್ವಾಗತಿಸಿ, ಸಂಘದ ಪ್ರಗತಿಯ ಅಂಕಿ ಅಂಶಗಳನ್ನು, ಮುಂದಿನ ಯೋಜನೆಗಳನ್ನು, ಹಾಗೂ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ ಸರ್ವರನ್ನು ಸ್ಮರಿಸುತ್ತಾ, ಸಂಘದ 11ನೇ ಶಾಖೆಯು ದಿನಾಂಕ 02/10/2026ರಂದು ಬಜ್ಪೆಯಲ್ಲಿ ಶುಭಾರಂಭಗೊಳ್ಳಲಿದ್ದು, 12ನೇ ಶಾಖೆಯು ಪುತ್ತೂರು-ಪಡೀಲ್ ಎಂಬಲ್ಲಿ ಶೀಘ್ರದಲ್ಲಿ ತೆರೆಯುವ ಬಗ್ಗೆ ಮಾಹಿತಿ ನೀಡಿದರು. ಸಂಘದ ಸ್ವಂತ ಪ್ರಧಾನ ಕಛೇರಿಯ ಕಟ್ಟಡವು ಪ್ರಗತಿಯಲ್ಲಿದ್ದು, ಈ ನೂತನ ಕಟ್ಟಡಕ್ಕೆ ಹೆಸರನ್ನು ಸೂಚಿಸುವ ಅವಕಾಶವನ್ನು ಸದಸ್ಯರಿಗೆ ನೀಡಲಾಗಿದೆ. 2026ನೇ ಸಾಲಿನಲ್ಲಿ SSLC/PUC ಅಂತಿಮ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಂಘಕ್ಕೆ ಹೊಸ ಲೋಗೋ ಅನಾವರಣ ಮಾಡುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. ಗತ ಸಾಲಿನಲ್ಲಿ ದೈವಾಧೀನರಾದ ಸಂಘದ ಸದಸ್ಯರಿಗೆ-ಗ್ರಾಹಕರಿಗೆ ಸಂತಾಪ ಸೂಚಿಸಲಾಯಿತು.

    ಸಂಘವು 2025-26ನೇ ಸಾಲಿನಲ್ಲಿ ರೂ.1434 ಕೋಟಿ ವಹಿವಾಟು ನಡೆಸಿ, ಮಾರ್ಚ್ ಅಂತ್ಯಕ್ಕೆ ರೂ.3.94 ಕೋಟಿ ಪಾಲು ಬಂಡವಾಳ, ರೂ.149.85 ಕೋಟಿ ಠೇವಣಿ, ರೂ.136.63 ಕೋಟಿ ಸದಸ್ಯರ ಹೊರಬಾಕಿ ಸಾಲದೊಂದಿಗೆ, ಸಂಘದ ದುಡಿಯುವ ಬಂಡವಾಳ ರೂ.165.51 ಕೋಟಿ ಆಗಿದ್ದು, ಲೆಕ್ಕ ಪರಿಶೋಧನೆಯಲ್ಲಿ “ಎ” ಗ್ರೇಡ್ ಶ್ರೇಣಿ ಪಡೆದಿದೆ. ಸಮಾಜದಲ್ಲಿ ವಿಶಿಷ್ಟ ಸಾಧನೆಗಳ ಮೂಲಕ ಗುರುತಿಸಿಕೊಂಡವರಿಗೆ ಸನ್ಮಾನದ ಮೂಲಕ ಗೌರವಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲಿನ್ ಗ್ರೇಸಿ ಡಿಸೋಜ ಇವರು ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷರಾದ ವಲೇರಿಯನ್ ಬರೆಟ್ಟೊ ವಂದಿಸಿದರು.
    ನಿರ್ದೇಶಕರಾದ ಅನಿಲ್ ಹೆರಾಲ್ಡ್ ಫ್ರಾಂಕ್ , ಲಾದ್ರು ಮಿನೇಜಸ್, ರೊನಾಲ್ಡ್ ವಿಜಯ್ ಫೆರ್ನಾಂಡಿಸ್, ಗ್ಲೋರಿಯ ಪ್ರೀಮಾ ಕುಟಿನ್ಹೊ, ವಿನ್ಸೆಂಟ್ ಕ್ಲೋಡಿ ಕಾರ್ಲೊ, ಲಾರೆನ್ಸ್ ಕ್ಲಿಫೋರ್ಡ್ ಡಿಸೋಜ, ಫ್ರಾನ್ಸಿಸ್ ಮೆಂಡೋನ್ಸಾ, ಹಿಲಾರಿ ಕ್ರಾಸ್ತಾ, ಹ್ಯೂಬರ್ಟ್ ಲೋಬೊ , ಅನಿತಾ ನೊರೊನ್ಹಾ, ಬೆನೆಡಿಕ್ಟಾ ಸಲ್ಡಾನ್ಹ, ವಿಶಾಲ್ ಡಿಸೋಜ ಸಭೆಯಲ್ಲಿ ಉಪಸ್ಥಿತರಿದ್ದರು.

    Banking Bantwala Catholic Credit Cooperative Society Co Operative ministry Cooperative Department Cooperative Registrar Jeevan Loyd Pinto
    Previous Articleಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
    Next Article ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ

    Related Posts

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ

    September 21, 2026

    ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    September 21, 2026

    ಕೆನರಾ ದೈವಜ್ಞ ಸೌಹಾರ್ದ ಪತ್ತಿನ ಸಹಕಾರಿ ಸಂಘ ಭಟ್ಕಳ ವಾರ್ಷಿಕ ಸಾಮಾನ್ಯ ಸಭೆ

    September 21, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ

    September 21, 2026

    ಬಂಟ್ವಾಳ ಕಥೋಲಿಕ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿ.: ರೂ. 1434 ಕೋಟಿ ದಾಖಲೆಯ ವಹಿವಾಟು: ಸಂಘದ ಅಧ್ಯಕ್ಷ ಜೀವನ್‌ ಲೋಯ್ಡ್‌ ಪಿಂಟೊ: ಶೇ18 ಡಿವಿಡೆಂಡ್‌ ಘೋಷಣೆ

    September 21, 2026

    ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

    September 21, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.