ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ; ಸದಸ್ಯರಿಗೆ 3000 ಗಿಡಗಳ ಹಸ್ತಾಂತರ
ಸಿದ್ದಕಟ್ಟೆ: ಸಹಕಾರ ಸಂಘಗಳು ಸದಸ್ಯರಿಗೆ ಆರ್ಥಿಕ ವ್ಯವಹಾರಗಳಲ್ಲದೇ ಸಂಘದ ವ್ಯಾಪ್ತಿಯಲ್ಲಿ ಬರುವ ವಿವಿಧ ಕ್ಷೆತ್ರಗಳಿಗೆ ಪೂರಕವಾಗಿ ಸಹಕಾರ ಮಾಡಿದಾಗ ಸಮಾಜ ಅಭಿವೃದ್ಧಿಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ದೇಶಾದ್ಯಂತ ಪಂಚ ಪರಿವರ್ತನೆಗಳಿಗೆ ಆದ್ಯತೆ ನೀಡಿದ್ದು, ಈ ಪರಿವರ್ತನೆಗಳ ಪೈಕಿ ಪರಿಸರ ಸಂರಕ್ಷಣೆಯೂ ಒಂದು ಭಾಗವಾಗಿದೆ. ಮನುಷ್ಯನ ಆರೋಗ್ಯದ ದೃಷ್ಟಿಯಿಂದ ಶುದ್ಧವಾದ ಗಾಳಿಯ ಸೇವನೆಯ ಅವಶ್ಯಕತೆಗಾಗಿ ಪ್ರತಿಯೊಬ್ಬರೂ ತಮ್ಮ ಹಿರಿಯರ ಹೆಸರಿನಲ್ಲಿ ಗಿಡ ನೆಟ್ಟು ಪರಿಸರ ರಕ್ಷಣೆ ಮಾಡುವುದರೊಂದಿಗೆ ಸ್ವಚ್ಛ ಪರಿಸರದ ನಿರ್ಮಾಣಕ್ಕಾಗಿ ಮಹತ್ವ ನೀಡಲಾಗಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದರು.
https://chat.whatsapp.com/FCEnlTkAKCC0MGPhXtX4i4
ಅವರು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜರಗಿದ ಸಂಘದ 2025-26ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದಡಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಸಹಕಾರಿಗಳು ಮತ್ತು ಗ್ರಾಹಕರಿಗೆ ದೇಶೀಯ ಉತ್ಪನ್ನಗಳ ಉತ್ಪಾದನೆಗೆ ಮತ್ತು ಬಳಕೆಗೆ ಉತ್ತೇಜನ ನೀಡಬೇಕು. ಮುಂದಿನ ದಿನಗಳಲ್ಲಿ ಸಂಘದ ಕೇಂದ್ರ ಕಚೇರಿಯ ಆವರಣದಲ್ಲಿ ಸಾಮಾನ್ಯ ಸೇವಾ ಕೇಂದ್ರ ತೆರೆಯುವ ಮೂಲಕ ಜನಸಾಮಾನ್ಯರಿಗೆ ಸಿಗುವ ಎಲ್ಲಾ ಸೇವೆಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಸಂಘವು ಗತ ವರ್ಷದಲ್ಲಿ ವಿವಿಧ ರೀತಿಯಲ್ಲಿ 133.63 ಕೋಟಿ ಸಾಲ ವಿತರಿಸಿ, 720.47 ಕೋಟಿ ರೂ. ವ್ಯವಹಾರದೊಂದಿಗೆ 2.19 ಕೋಟಿ ರೂ. ಲಾಭ ಗಳಿಸಿ ಸಂಘದ ಸದಸ್ಯರಿಗೆ ಶೇ.12ರಷ್ಟು ಲಾಭಾಂಶ ನೀಡಲಾಗುವುದು. ಸಂಘದಲ್ಲಿ 3904 ‘ಎ’ ತರಗತಿ ಸದಸ್ಯರು, 1981 ‘ಡಿ‘ ತರಗತಿ ಸದಸ್ಯರು ಸೇರಿದಂತೆ ಒಟ್ಟು 5885 ಸದಸ್ಯರನ್ನು ಹೊಂದಿದ್ದು, ವರದಿ ವರ್ಷದಲ್ಲಿ 2299 ಮಂದಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 49.82 ಕೋಟಿ ಸಾಲವನ್ನು ಮಂಗಳಾ ಕಿಸಾನ್ ಕಾರ್ಡ್ ಮೂಲಕ ವಿತರಿಸಲಾಗಿದ್ದು, ಶೇ.3 ಬಡ್ಡಿದರದಲ್ಲಿ ಕೃಷಿ ಅಭಿವೃದ್ದಿಗಾಗಿ 391 ಮಂದಿ ರೈತರಿಗೆ 12.77 ಕೋಟಿ ಸಾಲ ನೀಡಲಾಗಿದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಸುಗಳ ನಿರ್ವಹಣೆಗಾಗಿ ಶೂನ್ಯ ಬಡ್ಡಿದರದಲ್ಲಿ 3.60 ಕೋಟಿ ನೀಡಲಾಗಿದೆ. ಜಮೀನು ಅಡಮಾನ ಸಾಲ ಮತ್ತು ವೈಯಕ್ತಿಕ ಸಾಲ ಸೇರಿದಂತೆ ಒಟ್ಟು 27.91 ಕೋಟಿ ಸಾಲ ವಿತರಿಸಲಾಗಿದೆ. ಒಟ್ಟಿನಲ್ಲಿ 2788 ಸದಸ್ಯರಿಗೆ 152.24 ಕೋಟಿ ಸಾಲ ನೀಡಲಾಗಿದೆ ಎಂದರು.

ಸಂಘವು ನಿರಂತರವಾಗಿ ಪ್ರಗತಿ ಸಾಧಿಸಿದ್ದಕ್ಕಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದ್ದು ಸತತವಾಗಿ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾಗಿದೆ. 2025-26 ನೇ ಸಾಲಿನಲ್ಲಿ ಯಶಸ್ವಿನಿ ಆರೋಗ್ಯ ರಕ್ಷಣೆ ಯೋಜನೆಯನ್ವಯ 612 ಕುಟುಂಬಗಳ 2307 ಸದಸ್ಯರು ನೋಂದಣಿ ಮಾಡಿಸಲಾಗಿದ್ದು, ಒಟ್ಟು 4.23 ಲಕ್ಷ ಪ್ರೀಮಿಯಂ ಮೊತ್ತವನ್ನು ಸರಕಾರಕ್ಕೆ ಪಾವತಿಸಲಾಗಿದೆ. ಲೆಕ್ಕಪರಿಶೋಧನೆಯಲ್ಲಿ ಸತತವಾಗಿ ‘ಎ’ ಗ್ರೇಡ್ ಬಂದಿದ್ದು, ಶೇ.98 ಸಾಲ ವಸೂಲಾತಿ ಪ್ರಗತಿ ಸಾಧಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಶೇ.100 ಸಾಲ ವಸೂಲಾತಿ ಸಾಧಿಸುವಲ್ಲಿ ಸದಸ್ಯರು ಸಹಕಾರ ನೀಡಬೇಕು ಎಂದರು.
ಸಂಘದಲ್ಲಿ ಸದಸ್ಯರಾಗಿದ್ದು,ಮರಣ ಹೊಂದಿದ 38 ಸದಸ್ಯರಿಗೆ ಮಹಾಸಭೆಯಲ್ಲಿ ಮೌನ ಪ್ರಾರ್ಥನೆ ಮೂಲಕ ನುಡಿ ನಮನ ಸಲ್ಲಿಸಿಲಾಯಿತು. ಸಂಘದ ಪ್ರತಿಯೊಬ್ಬ ಸದಸ್ಯರಿಗೂ ಒಂದೊಂದು ಹಲಸಿನ ಗಿಡವನ್ನು ನೀಡಿದ್ದು,ಸುಮಾರು 3000 ಗಿಡಗಳನ್ನು ಸದಸ್ಯರಿಗೆ ವಿತರಣೆ ಮಾಡಲಾಯಿತು. ಪ್ರಧಾನಮಂತ್ರಿ ಜನೌಷಧಿ ಸಿದ್ದಕಟ್ಟೆ ಘಟಕದ ವತಿಯಿಂದ ಸಂಘದ ವಠಾರದಲ್ಲಿ ಆಶಕ್ತ ಸದಸ್ಯರಿಗೆ ಸಕ್ಕರೆ ತಪಾಷಣೆ, ಬ್ಲೆಡ್ ಫ್ರೆಶರ್ ತಪಾಸಣೆಯೊಂದಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಕರಾದ ಸತೀಶ್ ಪೂಜಾರಿ, ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ವೀರಪ್ಪ ಪರವ, ಜಾರಪ್ಪ ನಾಯ್ಕ, ಮಂದರಾತಿ ಎಸ್ ಶೆಟ್ಟಿ, ಪುಷ್ಪಲತಾ ಎಸ್ ಆರ್, ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ನವೀನ್ ಹೆಗ್ಡೆ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಚ್ ಪ್ರಭಾಕರ, ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ರತ್ನಕುಮಾರ್ ಚೌಟ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಶೆಟ್ಟಿ, ರಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ ಕುಮಾರ್, ಸಂಗಬೆಟ್ಟು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸುರೇಶ ಕುಲಾಲ್, ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ಪ್ರಮುಖರಾದ ಸುದರ್ಶನ್ ಮಂಜಿಲ, ಡಾ.ಶ್ರೀಧರ್ ಶೆಟ್ಟಿ, ಲಕ್ಷ್ಮೀಧರ ಶೆಟ್ಟಿ, ಜಗದೀಶ್ ಆಳ್ವ, ರಂಜನ್ ಕುಮಾರ್ ಶೆಟ್ಟಿ, ಡೊಂಬಯ ಅರಳ, ಲಿಂಗಪ್ಪ ಪೂಜಾರಿ, ನಾರಾಯಣ ನಾಯಕ್, ಸದಾಶಿವ ಕರ್ಪೆ, ಹರೀಶ್ ಆಚಾರ್ಯ, ಉಮೇಶ್ ಗೌಡ, ಅರುಣಾ ಶೆಟ್ಟಿ, ವಸಂತ ಗೌಡ, ಮಾಧವ ಶೆಟ್ಟಿಗಾರ್, ಚಂದ್ರಶೇಖರ ಗೌಡ, ಗೋಪಾಲ ರೈ, ಜಯರಾಮ ಅಡಪ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ವಾರ್ಷಿಕ ವರದಿ ವಾಚಿಸಿ, ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ ಸ್ವಾಗತಿಸಿ, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ದಿನೇಶ್ ಪೂಜಾರಿ ಧನ್ಯವಾದ ಸಮರ್ಪಿಸಿದರು.









